*ಮೊಳಕೆ ಕಟ್ಟಿದ ಹೆಸರು ಕಾಳನ್ನು ದಿನವೂ ಸೇವಿಸುತ್ತಿದ್ದರೆ, ಬಲವರ್ದನೆಯಾಗುತ್ತದೆ.
* ಕಿತ್ತಳೆ ರಸವನ್ನು ಸೇವಿಸಿದರೆ ಬಾಯಾರಿಕೆ ಕಡಿಮೆಯಾಗುತ್ತದೆ ಮತ್ತು ಶಕ್ತಿ ,ಚೈತನ್ಯ ಉಂಟಾಗುತ್ತದೆ.* ಚರ್ಮದಲ್ಲಿ ತುರಿಕೆ, ಕಜ್ಜಿಗಳದಾಗ ಬೇವಿನ ಎಣ್ಣೆಯನ್ನು ಹಚ್ಚಿದರೆ ಗುಣವಾಗುತ್ತದೆ.
*ಇಂಗನ್ನು ಕೊಬ್ಬರಿ ಎಣ್ಣೆಯಲ್ಲಿ ಅರೆದು ಹಣೆಗೆ ಹಚ್ಚಿದರೆ, ತಲೆ ನೋವು ಕಡಿಮೆಯಾಗುತ್ತದೆ.ಕೀಲು ನೋವಿಗೂ ಇದನ್ನು ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
*ಎರಡು ಬಾದಾಮಿ, ಎರಡು ಗೋಡಂಬಿ, ಒಂದು ಅಂಜೂರ, ನಾಲ್ಕು ಒಣ ದ್ರಾಕ್ಷಿ ಹಾಲಿನಲ್ಲಿ ನೆನಸಿ, ನಂತರ ಅರೆದು
ಸಕ್ಕರೆ ಬೆರಸಿ ಕುಡಿದರೆ ದೇಹದ ತೂಕ ಹೆಚ್ಚುತ್ತದೆ, ಬಲ ರಕ್ತ ವ್ರದ್ದಿಯಾಗುತ್ತದೆ.
* ಹಾಲಿನ ಕೆನೆ ಅರಿಶಿನ ಪುಡಿ, ಕಡಲೆ ಹಿಟ್ಟು ಇವನ್ನು ಬೆರಸಿ ಮುಖಕ್ಕೆ ಲೇಪಿಸಿ, ಮಾಲಿಶ್ ಮಾಡಬೇಕು. ಅರ್ದ ಗಂಟೆಯ ನಂತರ ಮುಖ ತೊಳೆದರೆ ಚರ್ಮ ಮೃದು ಹಾಗು ಕಾಂತಿಯುತವಾಗುತ್ತದೆ.
* ಪ್ರತಿನಿತ್ಯ ಕಿತ್ತಳೆ ಸೇವಿಸಿದರೆ ರೋಗ ನೀರೋಧಕ ಶಕ್ತಿ ಹೆಚ್ಚುತ್ತದೆ.
* ಟೈಫಯಿಡ್ , ಕ್ಷಯ ರೋಗಿಗಳಿಗೆ ಮೋಸಿಂಬೆ ಹಣ್ಣು ಒಳ್ಳೆಯದು.
* ಹಾಲು ಮತ್ತು ಪೋಪಾಯಿ ಹಣ್ಣನ್ನು ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ.
* ಬೆಳ್ಳುಳ್ಳಿ ಯನ್ನು ನಿತ್ಯವು ಆಹಾರದಲ್ಲಿ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
* ತುಪ್ಪದಲ್ಲಿ ಹುರಿದು ಬೆಳ್ಳುಳ್ಳಿಯನ್ನು ಸೇವಿಸಿದರೆ ಜಠರದಲ್ಲಿ ವಾಯು ಸೇರುವುದಿಲ್ಲ,ಗ್ಯಾಸ್ ಟ್ರಬಲ ಕಡಿಮೆಯಾಗುತ್ತದೆ.
*ಬೆಳ್ಳುಳ್ಳಿಯನ್ನು ನಿತ್ಯ ಸೇವನೆ ಕ್ಷಯರೋಗದಲ್ಲಿ ರೋಗಿಯ ಕ್ಷಮತೆಯನ್ನು ಹೆಚ್ಚಿಸುತ್ತದೆ.ಗುಣವಾದ ಕ್ಷಯ ರೋಗಿಗಳು
ಉಪಯೋಗಿಸಿದರೆ ಮತ್ತೆ ಕ್ಷಯ ರೋಗ ಮರುಕಳಿಸುವುದಿಲ್ಲ.
* ತೂಕ ಕಡಿಮೆಯಾದ ಕ್ಷಯ ರೋಗಿಗಳು ನಿತ್ಯವೂ ಒಣದ್ರಾಕ್ಷಿ, ಅಂಜೂರ, ಜೇನು,ಸಕ್ಕರೆ ತುಪ್ಪವನ್ನು ಬೆರಸಿ ಸೇವಿಸಿದರೆ ತೂಕ ಹೆಚ್ಚಾಗುತ್ತದೆ.
*ಸಿಪ್ಪೆ ಸಹಿತ ಸೇಬನ್ನು ತಿಂದು, ಹಾಲು ಕುಡಿದರೆ ಮಲಬದ್ದತೆ ನಿವಾರಣೆಯಾಗುತ್ತದೆ.
* ಕರಿಬೇವನ್ನು ಅರೆದು ಅದನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಬೇಕು, ಆರಿದ ನಂತರ ಸೋಸಬೇಕು. ಈ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.ಕೂದಲು ಬಲು ಬೇಗನೇ ನೆರೆಯುವುದಿಲ್ಲ.
* ಹಸಿ ಕೊತ್ತಂಬರಿ ಸೊಪ್ಪನ್ನು ಜಗಿಯುತ್ತಿದ್ದರೆ ಬಾಯಿಯ ದುರ್ಗಂದ ದೂರವಾಗುತ್ತದೆ.
* ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿ ಯನ್ನು ಹಾಕಿ ಸೇವಿಸಿದರೆ, ಕೆಮ್ಮು ಕಫಾ ಕಡಿಮೆಯಾಗುತ್ತದೆ.
* ಸಿಹಿ ಅನಾನಸು ಹಣ್ಣಿನ ರಸ ಸೇವಿಸಿದರೆ ಪಚನಶಕ್ತಿ ಹೆಚ್ಚಾಗುತ್ತದೆ. ಧೂಮಪಾನದ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ.
* ತಲೆ ಹೊಟ್ಟಿಗೆ: ಮೆಂತೆ ಯನ್ನು ನೀರಿನಲ್ಲಿ ನೆನೆ ಹಾಕಿ ಅರೆದು ತಲೆಗೆ ಹಚ್ಚಿ, ಅರ್ದ ಗಂಟೆಯ ಬಳಿಕ ಸ್ನಾನ ಮಾಡಿ. ಇದರಿಂದ
ತಲೆ ಹೊಟ್ಟು ಕಡಿಮೆ ಯಾಗುತ್ತದೆ.
* ನಿಂಬೆ ರಸ, ಜೇನುತುಪ್ಪ ವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಕೊಬ್ಬು ಕರಗುತ್ತದೆ.
* ತಲೆ ಹೊಟ್ಟಿಗೆ: ಮೆಂತೆ ಯನ್ನು ನೀರಿನಲ್ಲಿ ನೆನೆ ಹಾಕಿ ಅರೆದು ತಲೆಗೆ ಹಚ್ಚಿ, ಅರ್ದ ಗಂಟೆಯ ಬಳಿಕ ಸ್ನಾನ ಮಾಡಿ. ಇದರಿಂದ
ತಲೆ ಹೊಟ್ಟು ಕಡಿಮೆ ಯಾಗುತ್ತದೆ.
* ನಿಂಬೆ ರಸ, ಜೇನುತುಪ್ಪ ವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಕೊಬ್ಬು ಕರಗುತ್ತದೆ.
No comments:
Post a Comment