+ಮೆಂತ್ಯೆ ಸೊಪ್ಪಿನ ಅನ್ನ/ಪಲಾವ್
ಬೇಕಾಗುವ ಪದಾರ್ಥಗಳು:
ಮೆಂತ್ಯೆ ಸೊಪ್ಪು - ನಾಲ್ಕು ಕಟ್ಟು
ಅಕ್ಕಿ - ಒಂದು ಲೋಟ
ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು:
ಕಾಯಿತುರಿ - ಒಂದು ಕಪ್
ಹಸಿಮೆಣಸು - ಐದು [ ಖಾರಕ್ಕೆ ಬೇಕಾಗುವಷ್ಟು]
ಹಸಿ ಶುಂಟಿ - ಚಿಕ್ಕ ತುಂಡು
ಬೆಳ್ಳುಳ್ಳಿ - ಐದು ಎಸಳು
ಹುಣಸೆ - ಲಿಂಬೆ ಗಾತ್ರದ್ದಷ್ಟು
ಅರಿಶಿನ - ಚಿಟಿಕೆಯಷ್ಟು
ಉಪ್ಪು - ರುಚಿಗೆ
ಬೆಲ್ಲ - ಒಂದು ಚಮಚ
ಒಗ್ಗರಣೆಗೆ:
ತುಪ್ಪ/ಎಣ್ಣೆ
ಸಾಸಿವೆ - ಕಾಲು ಚಮಚ
ಇಂಗು -ಚಿಟಿಕೆಯಷ್ಟು
ಕರಿಬೇವು - ಒಂದು ಗರಿ
ಶೇಂಗಾ ಬೀಜ/ಗೋಡಂಬಿ
ಈರುಳ್ಳಿ - ಎರಡು [ ಸಣ್ಣಗೆ ಹೆಚ್ಚಿದ್ದು]
ಮಾಡುವ ವಿದಾನ:
ಕುಕ್ಕರ್ ಪಾತ್ರೆಯಲ್ಲಿ ತುಪ್ಪ/ಎಣ್ಣೆ ಹಾಕಿ ಬಿಸಿ ಮಾಡಿ,ಒಗ್ಗರಣೆಗೆ ತಿಳಿಸಿದ ಪದರ್ಥಗಳ್ಳನ್ನು ಹಾಕಿ ಒಗ್ಗರಣೆ ಯನ್ನು ಮಾಡಿಕೊಳ್ಳಬೇಕು. ಈರುಳ್ಳಿ ಚೆನ್ನಾಗಿ
ಹುರಿದುಕೊಂಡ ಬಳಿಕ, ಬಿಡಿಸಿಟ್ಟ ಮೆಂತ್ಯೆ ಸೊಪ್ಪನ್ನೂ ರುಬಿಟ್ಟ ಮಸಾಲೆಯನ್ನು ಹಾಕಿ ಹುರಿದುಕೊಳ್ಳಬೇಕು.
ನಂತರ, ತೊಳೆದಿಟ್ಟ ಅಕ್ಕಿ, ಉಪ್ಪು ಬೆಲ್ಲ ಏರುಡುವರೆ ಲೋಟ ನೀರನ್ನು ಹಾಕಿ
ಚನ್ನಾಗಿ ಬೆರಸಿ, ಕುಕ್ಕರ್ ಮುಚ್ಚಳ ವನ್ನು ಮುಚ್ಚಿ ಬೇಯಲು ಇಡಬೇಕು. ಎರಡು ಸೀಟಿ ತೆಗೆದರೆ ಸಾಕು, ರುಚಿ ರುಚಿಯಾದ ಮೆಂತ್ಯೆ ಸೊಪ್ಪಿನ ಪಲಾವ್ ಸಿದ್ಧ.
* ಬಿಡಿಸಿದ ಹೊಲದವರೆ, ಹಸಿ ಬಟಾಣಿ ಯನ್ನು ಮೆಂತ್ಯೆಸೋಪ್ಪಿನೊಂದಿಗೆ
ಸೇರಿಸಿಕೊಳ್ಳಬಹುದು.
* ಬಡಿಸುವಾಗ ಮೇಲಿನಿಂದ ಸ್ವಲ್ಪ ತುಪ್ಪ ಕಾಯಿತುರಿ ಹಾಕಿ ಲಿಂಬೆ ರಸ
ಹಿಂಡಬೇಕು.
No comments:
Post a Comment