ಸೋರೆಕಾಯಿ
ಕೊದ್ದೆಲ ಮಾಡಲು ಬೇಕಾಗುವ ಪದಾರ್ಥಗಳು:
ಒಂದು ಸಣ್ಣ ಗಾತ್ರದ ಸೋರೆಕಾಯಿ -ಸಿಪ್ಪೆ ತೆಗೆದು ಹದ ಸೈಜಿನ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಬೇಕು.
ತೊಗರಿ ಬೇಳೆ - ಒಂದು ಸಣ್ಣ ಕಪ್
ಹುರಿದ ಒಣಮೆಣಸು - ಆರು ಅಥವಾ ಎಂಟು
ಹುಣಸೆ -ಸ್ವಲ್ಪ
ಬೆಲ್ಲದ ಪುಡಿ - ಒಂದು ಸಣ್ಣ ಚಮಚ
ಉಪ್ಪು
ಒಗ್ಗರಣೆಗೆ : ತೆಂಗಿನ ಎಣ್ಣೆ , ಒಂದು ಜಜ್ಜಿದ ಬೆಳ್ಳುಳ್ಳಿ ಗೆಡ್ಡೆ.
ಮಾಡುವ ರೀತಿ:
ಸೋರೆಕಾಯಿ ತುಂಡುಗಳ್ಳನ್ನು ತೊಗರಿ ಬೇಳೆಯೊಂದಿಗೆ ಬೇಯಿಸಿಟ್ಟಿಕೊಳ್ಳಬೇಕು.ಕಾಯಿತುರಿ ,ಹುರಿದ ಒಣಮೆಣಸು,ಹುಣಸೆಹುಳಿ,ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
ಬೆಂದ ಹೋಳುಗಳಿಗೆ , ರುಬ್ಬಿಟ್ಟ ಮಸಾಲೆಯನ್ನು ಬೆರಸಿ ಬೇಕಾದಷ್ಟೇ ನೀರನ್ನು ಹಾಕಿ [ಹೆಚ್ಚು ತೆಳ್ಳಗಾಗ ಕೂಡದು], ಬೆಲ್ಲದಪುಡಿ ಉಪ್ಪನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಚನ್ನಾಗಿ ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಮಾಡಿ ಹಾಕಬೇಕು.
No comments:
Post a Comment