BLOG FOLLOWERS

Saturday, October 29, 2011

CABBAGE SUKKE


 ಕ್ಯಾಬೇಜ್  ಸುಕ್ಕೆ



ಮಾಡಲು ಏನೇನು  ಬೇಕು:

ಕ್ಯಾಬೇಜ್ -  ಒಂದು ಸಣ್ಣ ಗಾತ್ರದ್ದು [ ಚೌಕಾಕಾರದ ಹದ ಗಾತ್ರದ ತುಂಡುಗಳು]
ಅಲೂಗಡ್ಡೆ  - ಎರಡು  
ಈರುಳ್ಳಿ     -  ಎರಡು 

ಒಗ್ಗರೆಣೆಗೆ:

ಎಣ್ಣೆ   - ಒಂದು ದೊಡ್ಡ ಚಮಚ 
ಸಾಸಿವೆ -  ಕಾಲು ಚಮಚ 
ಕರಿಬೇವು  - ಒಂದು ಗರಿ 


     ಮಸಾಲೆಗೆ ಬೇಕಾಗುವ  ಪದಾರ್ಥಗಳು 

   ಕಾಯಿತುರಿ  - ಒಂದು ಕಪ್ 
   ಹುರಿದ ಬ್ಯಾಡಗಿ ಮೆಣಸು -  ಎರಡು
   ಹುರಿದ ಗುಂಟೂರ್ ಮೆಣಸು - ಎರಡು 
   ಹುಣಸೆ   - ಸ್ವಲ್ಪ  
   ಬೆಲ್ಲ      -  ಅರ್ದ ಚಮಚ 
   ಉಪ್ಪು  -  ರುಚಿಗೆ 
   ಧನಿಯ  -  ಒಂದು ಚಮಚ 
   ಉದ್ದಿನಬೇಳೆ - ಅರ್ದ ಚಮಚ 
[ ಧನಿಯಾ, ಉದ್ದಿನಬೇಳೆಯನ್ನು ಎಣ್ಣೆ ಹಾಕಿ ಹುರಿದಿಡಬೇಕು]


ಕ್ಯಾಬೇಜ್ ಸುಕ್ಕೆ ತಯಾರಿಸುವ ವಿಧಾನ 

ಮಸಾಲೆಗೆ ತಿಳಿಸಿದ ಪದಾರ್ಥಗಳ್ಳನ್ನು ಮಿಕ್ಸಿ ಗೆ ಹಾಕಿ ರುಬ್ಬಿಟ್ಟುಕೊಳ್ಳಬೇಕು [ ಮಸಾಲೆ ಮಿಕ್ಸಿ ಮಾಡುವಾಗ, ಕೊನೆಯಲ್ಲಿ, ಹುರಿದಿಟ್ಟ ಧನಿಯ ಹಾಗು ಉದ್ದಿನಬೇಳೆಯನ್ನು ಹಾಕಿ ರುಬ್ಬಬೇಕು]ಕಡಿಮೆ ನೀರು ಬಳಸಿ ರುಬ್ಬಬೇಕು.



ಬಾಣಲೆಯಲ್ಲಿ, ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಂಡು, ಮೊದಲು ಈರುಳ್ಳಿಯನ್ನು ಹಾಕಿ ಹುರಿಯಬೇಕು. ನಂತರ ಬೇಯಿಸದ ಕ್ಯಾಬೇಜ್, ಅಲೂಗಡ್ಡೆ ತುಂಡುಗಳ್ಳನ್ನು, ರುಬ್ಬಿಟ್ಟ ಮಸಾಲೆ ಅರಿಶಿನ ಉಪ್ಪು ಬೆಲ್ಲ ಹಾಕಿ ಚೆನ್ನಾಗಿ ಮಗುಚಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ನೀರೆಲ್ಲಾ ಇಂಗಿ ಮಸಾಲೆ  ಗಟ್ಟಿಯಾದರೆ ಕ್ಯಾಬೇಜ್ ಸುಕ್ಕೆ ತಯಾರ್.  


* ಇದೇ ರೀತಿ ಸಣ್ಣ ಸಣ್ಣ ಆಲೂಗೆಡ್ಡೆ,ಸಾಂಬ್ರಾಣಿಕಾಯಿ, ಅಲಸಂದೆ ಕಾಯಿ ಬಾಳೆಕಾಯಿ ಹುರಳಿಕಾಯಿ, ಹೂಕೋಸು ಇತ್ಯಾದಿ  ತರಕಾರಿಗಳಿಂದ ಸುಕ್ಕೆ ಮಾಡಬಹುದು. 
* ಕೂಕ್ಕರ ಲ್ಲಿ  ಮಾಡುವುದಾದರೆ, ಮೊದಲು ಒಗ್ಗರಣೆ ಮಾಡಿಕೊಂಡು, ಹಸಿ ತರಕಾರಿಗಳ್ಳನ್ನು ಹಾಕಿ .ಮಸಾಲೆ, ಅರಿಶಿನ ಉಪ್ಪು ಚೂರು ಬೆಲ್ಲ ಹಾಕಿ,ಸ್ವಲ್ಪವೇ ನೀರನ್ನು ಹಾಕಿ, ಮುಚಳವನ್ನು ಮುಚ್ಚಿ, ಎರಡು ಸೀಟಿ ತೆಗೆದರೆ ಪಲ್ಯ ತಯಾರ್.


No comments:

Post a Comment