ರಿಬ್ಬನ್ --- ಇದೊಂದು ಕುರಕುರಿ ತಿಂಡಿ. ಸಂಜೆಯ ಚಹಾ/ ಕಾಫಿ ಯೊಂದಿಗೆ ಒಳ್ಳೆಯ ಸಾಥ್.
ಮಾಡಲು ಏನೇನು ಬೇಕು?
ಕಡ್ಲೆ ಹಿಟ್ಟು - ಮೂರು ಅಳತೆ
ಅಕ್ಕಿ ಹಿಟ್ಟು - ಒಂದು ಅಳತೆ
ಅರಿಶಿನ - ಚಿಟಿಕೆಯಷ್ಟು
ಉಪ್ಪು - ರುಚಿಗೆ ಹಿಡಿಸುವಷ್ಟು
ಬೆಣ್ಣೆ - ಒಂದು ಚಮಚ
ಹಿಂಗು - ಸ್ವಲ್ಪ
ಕಲೆಸಲು - ನೀರು
ಮಾಡೋದು ಹೇಗೆ?
ಮೇಲೆ ತಿಳಿಸಿದ ಎಲ್ಲಾ ಪದಾರ್ಥ ಗಳ್ಳನ್ನು ಒಟ್ಟಿಗೆ ಬೆರಸಿ, ಚೆನ್ನಾಗಿ ಕಲೆಸಿಕೊಳ್ಳಬೇಕು. ಅಚ್ಚಿನೊಳಗೆ ರಿಬ್ಬನ್ ಬಿಲ್ಲೆಯನ್ನು ಹಾಕಿ ಸ್ವಲ್ಪ ಎಣ್ಣೆಯನ್ನು ಸವರಬೇಕು,ನಂತರ ಹಿಟ್ಟನ್ನು ಹಾಕಿ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ, ಸಣ್ಣ ಉರಿಯಲ್ಲಿ ಕರಿಯಬೇಕು.
No comments:
Post a Comment