ಚಕ್ಕುಲಿ
ಮಾಡಲು ಏನೇನು ಬೇಕು..?
ಬೆಚ್ಚಗೆ ಹುರಿದಿಟ್ಟ ಅಕ್ಕಿ ಹಿಟ್ಟು - ಒಂದು ಪಾವು
ಕಡ್ಲೆ ಹಿಟ್ಟು - ಕಾಲು ಪಾವು
ತೆಂಗಿನ ಎಣ್ಣೆ - ಎರಡು ಚಮಚ
ಜೀರಿಗೆ/ಬಿಳಿ ಎಳ್ಳು - ಒಂದು ಚಮಚ
ಕೆಂಪು ಮೆಣಸಿನ ಪುಡಿ - ಒಂದು ಚಮಚ
ಉಪ್ಪು - ರುಚಿಗೆ ಸ್ವಲ್ಪ
ನೀರು - ಮುಕ್ಕಾಲು ಪಾವು
ಕರಿಯಲು ಎಣ್ಣೆ ಹಾಗು ಚಕ್ಕುಲಿ ಒರಳು.
ಮಾಡೋದು ಹೇಗೆ...?
ದಪ್ಪ ತಳದ ಬಾಣಲೆಯಲ್ಲಿ ಸಾಧಾರಣ ಮುಕ್ಕಾಲು ಪಾವು ನೀರನ್ನು ಹಾಕಿ ಕಾಯಲು ಇಡಬೇಕು. ಬಳಿಕ ಆ ನೀರಿಗೆ ಎರಡು ಚಮಚ ಎಣ್ಣೆ, ಉಪ್ಪು,ಜೀರಿಗೆ ,ಖಾರ ಪುಡಿ ಹಾಗು ಕಡ್ಲೆ ಹಿಟ್ಟನ್ನು ಹಾಕಿ, ಚನ್ನಾಗಿ ಸೇರಿಸಿ, ಉರಿಯನ್ನು ತೆಗೆದು ಕೂಡಲೇ ಅಕ್ಕಿ ಹಿಟ್ಟು ಹಾಕಿ ಮೃದುವಾಗಿ ನಾದಿಕೊಂಡು ಅಗತ್ಯ ಬಿದ್ದರೆ,ಬೇಕಾದಷ್ಟ್ತೆ ನೀರನ್ನು ಸೇರಿಸಿ ಚಕ್ಕುಲಿ ಹಿಟ್ಟನ್ನು ತಯಾರಿಸಿ ಕೊಳ್ಳಬೇಕು. ನಂತರ ಚಕ್ಕುಲಿ ಒರಳಲ್ಲಿ, ಹಿಟ್ಟನ್ನು ತುಂಬಿ,ತಟ್ಟೆಯಲ್ಲಿ ಚಕ್ಕುಲಿಯನ್ನು ಒತ್ತಿ, ಒಮ್ಮೆಗೆ ಐದಾರು ಚಕ್ಕುಲಿಯನ್ನು ಕಾದ ಎಣ್ಣೆಯಲ್ಲಿ [ಮಧ್ಯಮ ಉರಿಯಲ್ಲಿ]ಹಾಕಿ ಕರಿಯಬೇಕು.
* ಸುಲಭವಾಗಿ ತಯಾರಿಸಬಹುದಂತಹ ಈ ಚಕ್ಕುಲಿ, ಮಕ್ಕಳು ಮುದುಕರೂ ಎಲ್ಲರೂ ಕುಶಿಯಿಂದ ಸವಿಯಬಹುದು.
No comments:
Post a Comment