ಮುಷ್ಟಿ ಪೋಳೂ
ಮಾಡಲು ಏನೇನು ಬೇಕು
ಅಕ್ಕಿ - ಎರಡು ಲೋಟ
ಉದ್ದಿನಬೇಳೆ - ಎರಡು ಮುಷ್ಟಿ [ಹಿಡಿ]
ಮೆಂತ್ಯ ಕಾಳು --ಎರಡು ಚಮಚ
ಅವಲಕ್ಕಿ - ಎರಡು ಹಿಡಿ
ಕಾಯಿತುರಿ - ಎರಡು ಹಿಡಿ
ಉಪ್ಪು - ರುಚಿಗೆ ಬೇಕಾಗುವಷ್ಟು
ಮಾಡೋದು ಹೇಗೆ
ಅಕ್ಕಿ ಉದ್ದು ಮೆಂತ್ಯ ಕಾಳುಗಳ್ಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನೆನಸಿಡಬೇಕು. ನಂತರ ತೆಂಗಿನತುರಿ ಹಾಗು ನೆನಸಿದ ಅವಲಕ್ಕಿಯೊಂದಿಗೆಅಕ್ಕಿ ಉದ್ದು , ಮೆಂತ್ಯೆಯನ್ನು ನಯವಾಗಿ ರುಬ್ಬಿಕೊಳ್ಳಬೇಕು.[ಹಿಟ್ಟು ಹೆಚ್ಚು ನಿರಾಗಕುಡದು] ಹೀಗೆ ರುಬ್ಬಿದ ಹಿಟ್ಟಿಗೆ ಉಪ್ಪನ್ನು ಹಾಕಿ ಎಂಟು ಗಂಟೆಗಳ ಕಾಲ ಮುಚ್ಚಿಡಬೇಕು. ಹೀಗೆ ತಯಾರಾದ ಹಿಟ್ಟನ್ನು, ದೋಸೆ ಕಾವಲಿ ಯನ್ನು ಒಲೆಯ ಮೇಲೆ ಇಟ್ಟು ಬಿಸಿಯಾದ ಕೂಡಲೇ, ಎಣ್ಣೆಯನ್ನು ಸವರಿ ಒಂದೊಂದೇ ಸೌಟು ಹಿಟ್ಟು ಹಾಕಿ ,ಕಾವಲಿಯನ್ನು ಮುಚ್ಚಿ ಒಂದು ಬದಿಯಷ್ಟೆ ಕಾಯಿಸಿ ತೆಗೆಯಬೇಕು.
ಇದೇ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಸಿಮೆಣಸು,ಕೊತ್ತಂಬರಿ ಸೊಪ್ಪನ್ನು ಹಾಕಿಯೂ ದೋಸೆಯನ್ನು ಮಾಡಬಹುದು.
ತಾಜಾ ಬೆಣ್ಣೆ/ಚಟ್ನಿ / ಹುಳಿಯೊಂದಿಗೆ ಈ ದೋಸೆ ತಿನ್ನಲು ಒಳ್ಳೆಯದಾಗುತ್ತದೆ
No comments:
Post a Comment