BLOG FOLLOWERS

Thursday, October 20, 2011

CARROT SALAD

ಕ್ಯಾರೆಟ್ಟಿನ   ಕೋಸಂಬರಿ 


ತೊಳೆದು ಸಿಪ್ಪೆ ತೆಗೆದಿಟ್ಟ  ಕ್ಯಾರಟ್      -     ಎರಡು   ಹದ ಗಾತ್ರದ್ದು {ತುರಿದಿಟ್ಟು ಕೊಳ್ಳಬೇಕು}
ಈರುಳ್ಳಿ       -    ಒಂದು[ಸಣ್ಣಗೆ ಹೆಚ್ಚಬೇಕು}  
ಹಸಿಮೆಣಸು   -   ಒಂದು
ತೆಂಗಿನತುರಿ  -  ಸ್ವಲ್ಪ 
ಕೊತ್ತಂಬರಿ ಸೊಪ್ಪು   - ಸ್ವಲ್ಪ[ಸಣ್ಣಗೆ ಹೆಚ್ಚಿದ್ದು]
ಉಪ್ಪು    -  ರುಚಿಗೆ 
ಲಿಂಬೆ ರಸ  - ಸ್ವಲ್ಪ

ಒಗ್ಗರೆಣೆಗೆ:  ಎಣ್ಣೆ, ಸಾಸಿವೆ ,ಶೇಂಗ ಬೀಜ, ಒಣಮೆಣಸು ಕರಿಬೇವು.


ಮಾಡುವ  ರೀತಿ:

ಒಂದು ಪಾತ್ರೆಯಲ್ಲಿ  ಒಗ್ಗರಣೆ  ಮಾಡಿಕೊಂಡು, ಕ್ಯಾರಟ್  ತುರಿ, ಕಾಯಿತುರಿ , ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸು ಈರುಳ್ಳಿ         ಉಪ್ಪು  ಎಲ್ಲವನ್ನು ಹಾಕಿ ಬೆರಸಬೇಕು. ನಂತರ ಸ್ವಲ್ಪ ಲಿಂಬೆ ರಸ ಹಾಕಿ, ಕೊತ್ತಂಬರಿ ಸೊಪ್ಪಿನಿಂದ  ಅಲಂಕರಿಸಿದರೆ, ಆರೋಗ್ಯಕರವಾದ ಕ್ಯಾರಟ್ ಕೋಸಂಬರಿ ರೆಡಿ.


ವಿ .ಸೂ :- ಲಿಂಬೆ ರಸ ಹಾಕದೇ, ಸಿಹಿ ಮೊಸರನ್ನು  ಬೆರಸಿಯೂ  ತಿನ್ನಬಹುದು.


No comments:

Post a Comment