ಬೇಕಾಗುವ ಪದಾರ್ಥಗಳು
ನಾಲ್ಕು ದೊಡ್ಡ ಟೊಮೇಟೊ ಹಣ್ಣುಗಳು
ಒಂದು ಹದ ಗಾತ್ರದ ಈರುಳ್ಳಿ
ಒಂದು ದೊಡ್ಡ ಲೋಟ ಅಕ್ಕಿ
ಬೆಣ್ಣೆ/ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆ ಬೇಳೆ
ಉದ್ದಿನಬೇಳೆ
ಗೋಡಂಬಿ
ಕರಿಬೇವು
ಸ್ವಲ್ಪ ಹಿಂಗು
ಖಾರದ ಪುಡಿ
ಗರಂಮಸಲಾ ಪುಡಿ ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸು [ ಖಾರ ಹೆಚ್ಚು ಬೇಕಾದಲ್ಲಿ ]
ಮಾಡುವ ರೀತಿ:
ಮೊದಲು ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಬೇಕು. ದಪ್ಪ ತಳದ ಬಾಣಲೆಯಲ್ಲಿ ಬೆಣ್ಣೆ/ಎಣ್ಣೆಯನ್ನು ಹಾಕಿ
ಒಂದೊಂದಾಗಿ ಸಾಸಿವೆ ಜೀರಿಗೆ ಕಡಲೆಬೇಳೆ ಉದ್ದಿನಬೇಳೆ ತುಂಡರಿಸಿದ ಗೋಡಂಬಿ,ಕರಿಬೇವು ಹಿಂಗು ಈ ಎಲ್ಲವನ್ನು ಹಾಕಿ ಒಗ್ಗರಣೆ ಮಾಡಿಕೊಂಡು, ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬಾಡಿಸಿಕೊಳ್ಳಬೇಕು,ಬಳಿಕ ಸಣ್ಣಗೆ ಹೆಚ್ಚಿಟ್ಟ ಟೊಮೇಟೊವನ್ನು ಹಾಕಿ ಬೇಯಿಸಿಕೊಳ್ಳಬೇಕು, ನಂತರ ಖಾರ ಪುಡಿ ಗರಂ ಮಸಾಲೆ ಪುಡಿ, ರುಚಿಗೆ ಉಪ್ಪನ್ನು ಹಾಗೂ ತಯಾರಿಸಿಟ್ಟ ಅನ್ನವನ್ನು ಹಾಕಿ ಚೆನ್ನಾಗಿ ಕಲಿಸಿ ಕೊಳ್ಳಬೇಕು
ಹೀಗೆ ತಯಾರಾದ ಅನ್ನಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿ ರುಚಿಯಾದ ಟೊಮೇಟೊ ಬಾತ್ ಸಿದ್ಧ.
{ ಬೇಕಾದಲ್ಲಿ ಸ್ವಲ್ಪ ಕಾಯಿ ತುರಿಯನ್ನು ಹಾಕಿಕೊಳ್ಳಬಹುದು }
No comments:
Post a Comment