ಬೇಕಾಗುವ ಪದಾರ್ಥಗಳು :
ಬಾಸ್ಮತಿ ಅಕ್ಕಿ - 250 ಗ್ರಾಂ
ತುಪ್ಪ - 4 ದೊಡ್ಡ ಚಮಚ
ಈರುಳ್ಳಿ - 2 ಉದ್ದಕ್ಕೆ ಹೆಚಿದ್ದು
ಚೆಕ್ಕೆ ಲವಂಗ - ಸ್ವಲ್ಪ
ಕಾಳು ಮೆಣಸು 7 ರಿಂದ 8
ಏಲಕ್ಕಿ -3
ದ್ರಾಕ್ಷಿ - ಸ್ವಲ್ಪ
ಗೋಡಂಬಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿದಾನ :
ದಪ್ಪ ತಳದ ಕಡಾಯಿಯಲ್ಲಿ, ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿ ಹುರಿದು ತೆಗೆದಿಡಬೇಕು. ನಂತರ ಅದೇ ಕಡಾಯಿಯಲ್ಲಿ ಏಲಕ್ಕಿ ಚೆಕ್ಕೆ ಲವಂಗ ಕಾಳು ಮೆಣಸು ಈರುಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿ, ತೊಳೆದಿಟ್ಟ ಅಕ್ಕಿ ಹಾಗು ಎರಡು ಪಾಲು ನೀರನ್ನು ,ರುಚಿಗೆ ಉಪ್ಪನ್ನು ಹಾಕಿ ಇಪ್ಪತ್ತು ನಿಮಿಷ ದಂ ನಲ್ಲಿ ಬೇಯಿಸಿದರೆ " ಘಿ ರೈಸ್ " ರೆಡಿ. ಮೇಲಿನಿಂದ, ಮೊದಲೇ ಹುರಿದು ತೆಗೆದಿಟ್ಟ ದ್ರಾಕ್ಷಿ ಗೋಡಂಬಿ ಗಳನ್ನು ಹಾಕಿ ಅಲಂಕರಿಸಬೇಕು
ದಂ ಘೀ ರೈಸ್ ನೋಡಿ ಹೊಟ್ಟೆಯಲ್ಲಿ ಹಸಿವೆ ಪ್ರಾರಂಭವಾಗಿ ಬಿಟ್ಟಿದೆ.
ReplyDeleteಚೆನ್ನಾಗಿದೆ.
ರಾತನಯ
ಚಂಡೀಗಡ