BLOG FOLLOWERS

Monday, October 10, 2011

ಒತ್ತು ಶ್ಯಾವಿಗೆ

ಒತ್ತು   ಶ್ಯಾವಿಗೆ

ಮಾಡಲು ಬೇಕಾಗುವ  ಪದಾರ್ಥಗಳು:
ಕೆಂಪು ಕುಚಲಕ್ಕಿ    -   ಎರಡು ಅಳತೆ 
ಸಣ್ಣಕ್ಕಿ               -     ಒಂದು ಕಪ್
ಉಪ್ಪು               - ಸ್ವಲ್ಪ 
 
ಮಾಡುವ ವಿದಾನ :
 ಅಕ್ಕಿಯನ್ನು   ಸುಮಾರು   ಎಂಟು  ಗಂಟೆಗಳ ಕಾಲ ನೆನಸಿಡಬೇಕು. ನಂತರ  ನೀರನ್ನು ಹಾಕಿ  ನಯವಾಗಿ  ರುಬ್ಬಿಕೊಳ್ಳಬೇಕು.
 ಹೀಗೆ  ರುಬ್ಬಿದ ಹಿಟ್ಟನ್ನು, ದಪ್ಪ ತಳ ಇರುವ ಬಾಣಲೆಗೆ ,ಒಂದು ಚಮಚ ಎಣ್ಣೆಯನ್ನು ಹಾಕಿ,[ತಳ ಹಿಡಿಯದಂತೆ] ಹಿಟ್ಟನ್ನು ಅದಕ್ಕೆ
 ವರ್ಗಯಿಸಿಕೊಳ್ಳಬೇಕು. ರುಚಿಗೆ ಸ್ವಲ್ಪ ಉಪ್ಪನ್ನು  ಹಾಕಿ , ಬಾಣಲೆಯನ್ನು ಒಲೆಯ ಮೇಲಿಟ್ಟು, ಕೈ  ಬಿಡದೆ ಸ್ವಲ್ಪ ಹೊತ್ತು  ಮಗುಚುತ್ತಾ ಇದ್ದು , ಹಿಟ್ಟು ಉಂಡೆ ಕಟ್ಟುವಷ್ಟು  ಗಟ್ಟಿ ಯಾದ  ಕೂಡಲೇ,ಒಲೆಯ ಮೇಲಿಂದ ಇಳಿಸಿಕೋಳ್ಳಬೇಕು.
ನಂತರ  ಈ  ಹಿಟ್ಟನ್ನು  ಸಣ್ಣ  ಸಣ್ಣ ಉಂಡೆ ಕಟ್ಟಿ ,ಹಬೆ ಪಾತ್ರೆಯಲ್ಲಿ  ಸುಮಾರು  ಇಪ್ಪತ್ತು  ನಿಮಿಷಗಳ ಕಾಲ  ಬೇಯಿಸಬೇಕು.
ಹೀಗೆ  ಬೆಂದ ಉಂಡೆಗಳನ್ನು, ಒಂದೊಂದಾಗಿ  ಶ್ಯಾವಿಗೆ  ಅಚ್ಚಿನ್ನಲ್ಲಿ ಹಾಕಿ  ಒತ್ತ ಬೇಕು.
ಹೀಗೆ  ತಯಾರಾದ  ಬಿಸಿ  ಬಿಸಿ  ಶ್ಯಾವಿಗೆಯನ್ನು, ಒಂದು ಮೋರದ ಮೇಲೆ  ಒದ್ದೆ ಮಾಡಿದ ಬಿಳಿ ಬಟ್ಟೆಯನ್ನು  ಹಾಸಿ, ಅದರ 
ಮೇಲೆ, ಒತ್ತೋತಾಗಿ ಜೋಡಿಸುಬೇಕು. ತಣ್ಣಗಾದ ನಂತರ ಬಟ್ಟೆಯಿಂದ  ಮುಚ್ಚಿಡಬೇಕು.


ತಯಾರಿಸಿದ ಶ್ಯಾವಿಗೆಯನ್ನು  ಕೊಬ್ಬರಿ ಎಣ್ಣೆ  ಹಾಗು ಉಪ್ಪಿನಕಾಯಿಯೊಂದಿಗೆ  ಸವಿಯಬಹುದು, ಶ್ಯಾವಿಗೆ ಹಾಗು ಕಾಯಿ ರಸ ಒಳ್ಳೆಯ ಕೊಂಬಿನಶೇನ್. ಶ್ಯಾವಿಗೆ  ಉಸ್ಲಿಯನ್ನು  ಮಾಡಬಹುದು, ಬೆಲ್ಲ ಹಾಗು ಕಾಯಿ ತುರಿ ಹಾಕಿ ಚೂರ್ಣ ಮಾಡಿ  ಅದರೊಂದಿಗೆಯೂ ತಿನ್ನಬಹುದು.









1 comment:

  1. ಶೆವಯಿ ಪೋಳೋನು ತೊಂಡ ಉದ್ದ ಎತ್ತ ಅಸ್ಸ. ಪೊತ್ತ ಅಸಿಲ್ ಕೀಡೆ ಪುರ ತಂಕಾಯಿ ಶೆವಯಿ ಜಾಯಿ ಮೋನು ಕಿಂಚತಾ ಅಸ್ಸತಿ.

    ರಾತನಯ
    ಚಂಡೀಗಡ

    ReplyDelete