ಸುರ್ನಳಿ
ಏನೇನು ಬೇಕು:
ಅಕ್ಕಿ - ಎರಡು ಅಳತೆ
ಮೆಂತ್ಯೆ ಎರಡು ದೊಡ್ಡ ಚಮಚ
ಕಾಯಿತುರಿ - ಒಂದು ಅಳತೆ
ಅವಲಕ್ಕಿ - ಒಂದು ಅಳತೆ
ಮೊಸರು - ಅರ್ದ ಕಪ್
ಅರಿಶಿನ
ಉಪ್ಪು
ಮಾಡೋದು ಹೇಗೆ:
ಅಕ್ಕಿಯೋಟ್ಟಿಗೆ ಮೆಂತ್ಯವನ್ನು ಮುರು ಗಂಟೆ ನೀರಿನಲ್ಲಿ ನೆನಸಿಡಬೇಕು. ನಂತರ ಕಾಯಿತುರಿ ಹಾಗು ನೆನಸಿದ ಅವಲಕ್ಕಿಯೋಟಿಗೆ, ಕಡಿಮೆ ಪ್ರಮಾಣದಲ್ಲಿ ನೀರನ್ನು ಹಾಕಿ ನಯವಾಗಿ ರುಬ್ಬಿಟ್ಟುಕೊಳ್ಳಬೇಕು. ಹೀಗೆ ರುಬ್ಬಿದ ಹಿಟ್ಟಿಗೆ ಚಿಟಿಕೆ ಅರಿಶಿನಪುಡಿ, ಉಪ್ಪು ಹಾಗು ಮೊಸರನ್ನು ಬೆರಸಿ ಮುಚ್ಚಿಡಬೇಕು. ಮಾರನೆಯ ದಿನ ಹಿಟ್ಟಿಗೆ ಬೇಕಾದಲ್ಲಿ ಸ್ವಲ್ಪ ನೀರನ್ನು ಬೆರೆಸಿ ಹದಗೊಳಿಸಬೇಕು. ಹೀಗೆ ಹದಗೊಂಡ ಹಿಟ್ಟನ್ನು ಕಾದ ಕಾವಲಿಯ ಮೇಲೆ ಎಣ್ಣೆ ಸವರಿ, ಒಂದೊನ್ದ್ದೆ ಸೌಟಿನಷ್ಟು ಹಿಟ್ಟನ್ನು ಹಾಕಿ,ಮುಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ , ದೋಸೆಯನ್ನು ತಯಾರಿಸಬೇಕು.
{ ಈ ಸುರ್ನಳಿ ದೋಸೆ ಒಂದು ಬದಿಯಷ್ಟೇ ಕಾಯಿಸಬೇಕು }
ಇದೇ ಹಿಟ್ಟಿಗೆ ಬೆಲ್ಲ ಹಾಕಿ ರುಬ್ಬಿದಲ್ಲಿ ಸಿಹಿ ಸುರ್ನಲಿಯನ್ನು ತಯಾರಿಸಬಹುದು, ಹಾಗೇ ಬೂದು ಕುಂಬಳ ತಿರಳ್ಳನ್ನು ರುಬ್ಬುವಾಗ ಹಾಕಿದರೆ ಬೂದುಕುಂಬಳ ಸುರ್ನಳಿ ದೋಸೆ ಮಾಡಬಹುದು. ಸೌತೆಕಾಯಿ, ಬಣ್ಣದ ಸೌತೆಕಾಯಿ ಸುರ್ನಳಿಯನ್ನು ತಯಾರಿಸಬಹುದು.
No comments:
Post a Comment