BLOG FOLLOWERS

Saturday, October 15, 2011

ಬಾಳೆಕಾಯಿ ಉಪ್ಕರಿ

        
                                            ತಿಂದರೆ  ಬಾಳೇ  ಗಟ್ಟಿ   ಬಾಳ್ವೆ
ಬೇಕಾಗುವ ಪದಾರ್ಥಗಳು:
ಎರಡು  ಬಲಿತ ಬಾಳೆಕಾಯಿ 
[ಸಣ್ಣಗೆ ಬೇಕಾದ ಆಕಾರದಲ್ಲಿ ಕತ್ತರಿಸಿ  ನೀರಲ್ಲಿ ಹಾಕಿಡಬೇಕು] 
ಕಾಯಿ ತುರಿ ಸ್ವಲ್ಪ  ಹಾಗು  ರುಚಿಗೆ ಹಿಡಿಸುವಸ್ಟು ಉಪ್ಪು.


ಒಗ್ಗರಣೆಗೆ:  ಕೊಬ್ಬರಿ ಎಣ್ಣೆ ,  ಸಾಸಿವೆ, ಒಣ ಮೆಣಸು, ಕರಿಬೇವು, ಹಿಂಗು.

ತಯಾರಿಸುವ ವಿದಾನ:
  ಬಾಣಲೆಯಲ್ಲಿ  ಎಣ್ಣೆ ಸಾಸಿವೆ ಕರಿಬೇವು ಹಿಂಗು  ಒಗ್ಗರಣೆ ಮಾಡಿಕೊಂಡು, ಕತ್ತರಿಸಿಟ್ಟ ಬಾಳೆಕಾಯಿ,ರುಚಿಗೆ ಉಪ್ಪನ್ನು ಹಾಕಿ ಸ್ವಲ್ಪ ನೀರನ್ನು ಚಿಮುಕಿಸಿ  ಮುಚ್ಚಳವನ್ನು ಮುಚ್ಚಿ ಬೇಯಿಸಬೇಕು. ಕೊನೆಯಲ್ಲಿ ಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಮಗುಚಿದರೆ ಬಾಳೆಕಾಯಿ ಉಪ್ಕರಿ ಸಿದ್ದ.

No comments:

Post a Comment