ಬೇಕಾಗುವ ಪದಾರ್ಥಗಳು:
ಬಸಳೆ - ಎರಡು ಕಟ್ಟು
ಕಾಯಿತುರಿ - ಒಂದು ಹೋಳು
ಹುರಿದ ಕೆಂಪು ಮೆಣಸು - ಏಳರಿಂದ ಎಂಟು
ಹುಣಸೆ - ಸ್ವಲ್ಪ
ಉಪ್ಪು --- ರುಚಿಗೆ ಬೇಕಾಗುವಷ್ಟು
ಒಗ್ಗರೆಣೆಗೆ:
ಕೊಬ್ಬರಿ ಎಣ್ಣೆ - ಎರಡು ದೊಡ್ಡ ಚಮಚ ಬೆಳುಳ್ಳಿ - ಒಂದು ಗೆಡ್ಡೆ
ಮಾಡುವ ವಿದಾನ:
ದಂಟಿನಿಂದ ಸೊಪ್ಪನ್ನು ಬಿಡಿಸಿಕೊಂಡು, ಸಣ್ಣಗೆ ಹೆಚ್ಚಿಕೊಳ್ಳಬೇಕು. ಎಳೆ ದಂಟನ್ನು ಎರಡು ಇಂಚು ಉದ್ದದ ತುಂಡುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಬೇಕು. ಹೀಗೆ ಕತ್ತರಿಸಿದ ಸೊಪ್ಪು ದಂಟನ್ನು ಸ್ವಲ್ಪವೇ ನೀರಿನಲ್ಲಿ ಬೇಯಿಸಿಕೊಳ್ಳಬೇಕು.
ಹುರಿದ ಮೆಣಸು, ಹುಳಿ ಹಾಗು ಕಯಿತುರಿಯನ್ನು ಮಿಕ್ಸಿಯಲ್ಲಿ ಹಾಕಿ ನಯವಾದ ಮಸಾಲೆಯನ್ನು ಮಾಡಿಡಬೇಕು.
ಇಗ ಈ ಮಸಾಲೆ ಹಾಗು ಬೆಂದ ಸೊಪ್ಪನ್ನು ಒಂದು ಪಾತ್ರೆಗೆ ವರ್ಗಾಯಿಸಿ,ರುಚಿಗೆ ಉಪ್ಪನ್ನು ಹಾಕಿ ಕುದಿಸಬೇಕು.
ಕೊನೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಜಜ್ಜಿದ ಬೆಳುಳ್ಳಿ ಬೀಜಗಳ್ಳನ್ನು ಹಾಕಿ , ಕೆಂಪಗೆ ಹುರಿದು ಕುದಿಸಿಟ್ಟ ಪಲ್ಯಕ್ಕೆ ಹಾಕಬೇಕು.
ಇದೇ ರೀತಿ ಹುರುಳಿಕಾಳು, ತಿಂಗಳವರೆ, ರಾಜ್ಮ ಹೀಗೆ ಯಾವುದೇ ಧಾನ್ಯಗಳೊಂದಿಗೆ ಬಸಳೆಯನ್ನು ಉಪಯೋಗಿಸಿ ಬೆಂದಿ/ಅಂಬಟಿ ಯನ್ನು ಮಾಡಬಹುದು.
No comments:
Post a Comment