ಅಕ್ಕಿ ರೊಟ್ಟಿ
ಮೃದುವಾದ ಅನ್ನ - ಒಂದು ಕಪ್ಪು
ಅಕ್ಕಿ ಹಿಟ್ಟು - ಒಂದು ಕಪ್ಪು
ಉಪ್ಪು - ಸ್ವಲ್ಪ.
ಮೈದಾ ಹಿಟ್ಟು - ಸ್ವಲ್ಪ
ಮಾಡುವ ವಿಧಾನ:
೧. ಒಂದು ಅಗಲವಾದ ತಟ್ಟೆಯಲ್ಲಿ ಅನ್ನ+ ಅಕ್ಕಿ ಹಿಟ್ಟು+ ಉಪ್ಪನ್ನು ಬೆರಸಿ ಮೃದುವಾಗಿ ಕಲಸಿ ಹಿಟ್ಟನ್ನು ತಯಾರಿಸಬೇಕು. [ ಬೇಕಾದಲ್ಲಿ ಮಿಕ್ಸಿ ಗೆ ಹಾಕಿಕೊಂಡು ಮಾಡಬಹುದು]
೨. ಕಲಿಸಿದ ಹಿಟ್ಟಿನಿಂದ ಹದ ಗಾತ್ರದ ಉಂಡೆಗಳನ್ನು ತಯಾರಿಸಬೇಕು.
೩. ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಸ್ವಲ್ಪ ಮೈದಾ ಹಿಟ್ಟನ್ನು ಸಿಂಪಡಿಸಿ, ಉಂಡೆಯನ್ನು ಇಟ್ಟು ನಿಧಾನವಾಗಿ ಲಟ್ಟಿಸಿಕೊಂಡು, ಬಿಸಿ ಕಾವಲಿಯಾ ಮೇಲೆ ರೊಟ್ಟಿಯನ್ನು ಹಾಕಿ ಎರಡೂ ಬದಿಯನ್ನು ಬೇಯಿಸಿ
[ಸುಡಬೇಕು] ತೆಗೆಯಬೇಕು. ಎಣ್ಣೆಯನ್ನು ಹಾಕಲ್ಲಿಕ್ಕೆ ಇಲ್ಲ.
೪. ಕೆಂಡದ ಓಲೆ ಇದ್ದಲ್ಲಿ direct ಕೆಂಡದ ಮೇಲೆ ರೊಟ್ಟಿಯನ್ನು ಸುಡಬಹುದು.
* ಬಿಸಿ ಬಿಸಿ ರೊಟ್ಟಿಗೆ ತುಪ್ಪವನ್ನು ಹಾಕಿ, ಖಾರದ ಪಲ್ಯದೊಂದಿಗೆ ಸವಿಯಬೇಕು.
No comments:
Post a Comment