ಮೊಸರನ್ನ
ಮಾಡಲು ಏನೇನು ಬೇಕು?
ಅಕ್ಕಿ - ಒಂದು ಲೋಟ
ಹಸಿಮೆಣಸು - ನಾಲ್ಕು
ಸಿಹಿ ಮೊಸರು - ಎರಡುವರೆ ಲೋಟ
ಕಾಯಿತುರಿ - ಸ್ವಲ್ಪ
ಉಪ್ಪು - ರುಚಿಗೆ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ
ಒಗ್ಗರಣೆಗೆ :- ತುಪ್ಪ, ಸಾಸಿವೆ, ನೆನಸಿದ ಕಡಲೆಬೇಳೆ , ಉದ್ದಿನಬೇಳೆ, ಕರಿಬೇವು.
ಮಾಡೋದು ಹೇಗೆ?
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಅನ್ನವನ್ನಾಗಿ ಮಾಡಿಟ್ಟುಕೊಳ್ಳಬೇಕು.
ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗು ಮೊಸರನ್ನು ಅನ್ನಕ್ಕೆ ಹಾಕಿ ಕಳಿಸಿಡಬೇಕು.
ನಂತರ ಒಗ್ಗರಣೆ ಸವ್ಟಿನಲ್ಲಿ , ತುಪ್ಪವನ್ನು ಹಾಕಿ, ಸಾಸಿವೆ ಕಡಲೆಬೇಳೆ ,ಉದ್ದಿನಬೇಳೆ, ಕರಿಬೇವು - ಒಗ್ಗರಣೆ ಮಡಿ ಅನ್ನಕ್ಕೆ ಹಾಕಬೇಕು .ಕೊನೆಯಲ್ಲಿ ಉಪ್ಪು, ಕಾಯಿತುರಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಕಲಿಸಿದರೆ ತಂಪಾದ ,ರುಚಿ ರುಚಿಯಾದ ಮೊಸರನ್ನ ಸಿದ್ದ.
* ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ತಿನ್ನುವಾಗ ಹಾಕಿಕೊಳ್ಳಬಹುದು.
No comments:
Post a Comment