ಮಾಡಲು ಏನೇನು ಬೇಕು:
ಕಾಲಿಫ್ಲವೆರ್ - ಒಂದು ಮೀಡಿಯಂ ಗಾತ್ರದು
ಈರುಳ್ಳಿ - ಮೂರು
ತೆಂಗಿನ ತುರಿ - ಅರ್ದ ಬಟ್ಟಲು
ಹುರಿದ ಒಣ ಮೆಣಸು - ನಾಲ್ಕು
ಹುಳಿ - ಸ್ವಲ್ಪ
ಧನಿಯಾ - ಒಂದು ದೊಡ್ಡ ಚಮಚ
ಅರಿಶಿನ ಪುಡಿ
ರುಚಿಗೆ ಉಪ್ಪು
ಒಗ್ಗರಣೆಗೆ :
ಎಣ್ಣೆ ,ಸಾಸಿವೆ , ಕರಿಬೇವು
ಮಾಡೋದು ಹೇಗೆ :
ತೆಂಗಿನತುರಿ, ಹುರಿದ ಒಣ ಮೆಣಸಿನಕಾಯಿ, ಹುಣಸೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು, ಕೊನೆಯಲ್ಲಿ ಹಸಿ ಕೊತ್ತಂಬರಿ ಬೀಜವನ್ನು ಹಾಕಿ ನುಣ್ಣಗೆ ಮಸಾಲೆಯನ್ನು ರುಬ್ಬಿಟ್ಟು ಕೊಳ್ಳಬೇಕು.
ದಪ್ಪ ತಳದ ಬಾಣಲೆಯಲ್ಲಿ, ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಂಡು,ಅದರಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಕೆಂಪಗೆ ಆಗುವವರೆಗೂ
ಬಾಡಿಸಿಕೊಂಡು,ಬಿಡಿಸಿ ತೊಳೆದಿಟ್ಟ ಕಾಲಿಫ್ಲವೆರ್, ರುಬ್ಬಿಟ್ಟ ಮಸಾಲೆ, ಉಪ್ಪನ್ನು ಬೆರಸಿ ಚೆನ್ನಾಗಿ ಮಗುಚಿ, ಕಾಲಿಫ್ಳವೆರ್ ಬೆಂದು,ಮಸಾಲೆ ಚೆನ್ನಾಗಿ ಕುದಿಸಿದರೆ ಹೂ ಕೋಸು ಬುತ್ತಿ ಸಿದ್ದ.[ಬೇಯಿಸುವಾಗ ಹೆಚ್ಚು ನೀರನ್ನು ಹಾಕ ಬಾರದು ]
No comments:
Post a Comment