ಮಾಡಲು ಏನೇನು ಬೇಕು?
ಬಾಸ್ಮತಿ ಅಕ್ಕಿ - ಒಂದು ಲೋಟ
ಈರುಳ್ಳಿ - ನಾಲ್ಕು [ಉದ್ದಕ್ಕೆ ಕತ್ತರಿಸಿದ ತುಂಡುಗಳು]
ಈರುಳ್ಳಿ - ಒಂದು [ಸಣ್ಣಗೆ ಹೆಚ್ಚಿ, ತುಪ್ಪದಲ್ಲಿ ಕೆಂಪಗೆ ಹುರಿದಿಟ್ಟುಕೊಳ್ಳಬೇಕು]
ದಾಲ್ಚಿನಿ ಎಲೆ - ಎರಡು
ಸಾಸಿವೆ - ಕಾಲು ಚಮಚ
ಜೀರಿಗೆ - ಅರ್ದ ಚಮಚ
ಒಣಮೆಣಸು ತುಂಡುಗಳು - ಒಂದು ಚಮಚ
ಗರಂ ಮಸಾಲೆ ಪುಡಿ - ಒಂದು ಚಮಚ
ಗೋಡಂಬಿ ಚೂರೂ - ಎರಡು ಚಮಚ
ಉಪ್ಪು - ರುಚಿಗೆ
ತುಪ್ಪ /ಎಣ್ಣೆ - ಮೂರು ದೊಡ್ಡ ಚಮಚ
ಮಾಡುವ ರೀತಿ:
ಅನ್ನವನ್ನು ಮೊದಲೇ ತಯಾರಿಸಿಟ್ಟಿಕೊಳ್ಳಬೇಕು.
ದಪ್ಪ ತಳದ ಬಾಣಲೆಯಲ್ಲಿ, ತುಪ್ಪ/ಎಣ್ಣೆಯನ್ನು ಹಾಕಿ,ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಒಣಮೆಣಸು ಚೂರೂ , ದಲ್ಚಿನಿ ಎಲೆ ,
ಉದ್ದಕ್ಕೆ ಹೆಚ್ಚಿದ ಈರುಳ್ಳಿ ಯನ್ನು ಹಾಕಿ, ಚೆನ್ನಾಗಿ ಹುರಿದುಕೊಂಡು, ಬಳಿಕ ಗರಂ ಮಸಾಲೆ ಪುಡಿ, ಉಪ್ಪನ್ನು ಸೇರಿಸಿ, ಕಲಿಸಿ, ಮೇಲಿನಿಂದ ಹುರಿದ ಗೋಡಂಬಿ, ಹುರಿದ ಈರುಳ್ಳಿಯನ್ನು ಹಾಕಿ ಬೆರಸಿದರೆ, ರುಚಿಯಾದ ಈರುಳ್ಳಿ ಫ್ರೈಡ್ ರೈಸ್ ರೆಡಿ .
No comments:
Post a Comment