ಮಾಡಲು ಏನೇನು ಬೇಕು:
ಅಳತೆ
ಹೆಸರು ಬೇಳೆ - ಒಂದು ಅಳತೆ
ಗೋಧಿ ಹಿಟ್ಟು - ಕಾಲು ಅಳತೆ
ತುಪ್ಪ - ನಾಲ್ಕು ದೊಡ್ಡ ಚಮಚ
ಬಾದಾಮಿ - ಸ್ವಲ್ಪ
ಒಣ ಕೊಬ್ಬರಿ ತುರಿ - ಒಂದು ದೊಡ್ಡ ಚಮಚ
ಏಲಕ್ಕಿ ಪುಡಿ - ಸ್ವಲ್ಪ
ಹಾಲು - ನಾಲ್ಕು ದೊಡ್ಡ ಚಮಚ
೧.ಹೆಸರು ಬೇಳೆಯನ್ನು ಹುರಿದು ನಯಸ್ಸಾಗಿ ಪುಡಿ ಮಾಡಿಡಬೇಕು
೨.ಸಕ್ಕರೆ, ಏಲಕ್ಕಿ ಪುಡಿ ಮಾಡಿಡಬೇಕು
೩.ದಪ್ಪ ತಳದ ಬಾಣಲೆಯಲ್ಲಿ, ತುಪ್ಪ ಹಾಕಿ ಬಾದಾಮಿಯ ಚೂರುಗಳನ್ನು ಹಾಕಿ ಕೆಂಪಗೆ ಹುರಿದು,ಅದರಲ್ಲಿಯೇ ಗೋದಿ ಹಿಟ್ಟನ್ನು' ಘಂ' ಎನ್ನುವ ಹಾಗೆ ಹುರಿದು ಕೊಳ್ಳಬೇಕು.
೪.ಈಗ ಇದಕ್ಕೆ,ಹೆಸರು ಬೇಳೆ ಪುಡಿ, ಕೊಬ್ಬರಿ ತುರಿ, ನಾಲ್ಕು ದೊಡ್ಡ ಚಮಚ ಹಾಲನ್ನು ಸೇರಿಸಿ, ತಳ ಬಿಟ್ಟು ಕೂಡುವವರೆಗೂ
ಕೈ ಬಿಡದೆ ಮಗುಚುತಿರಬೇಕು. ತಳ ಹತ್ತದ ಹಾಗೆ ತುಪ್ಪವನ್ನು ಸೇರಿಸಿ ಕೊಳ್ಳಬಹುದು. ನಂತರ ಆ ಗಟ್ಟಿಯಾದ ಮಿಶ್ರಣವನ್ನು, ತುಪ್ಪ ಸವರಿದ ತಟ್ಟೆಯಲ್ಲಿ ಹರಡಬೇಕು. ಸ್ವಲ್ಪ ಆರಿದ ಬಳಿಕ ಬೇಕಾದ ಆಕಾರದಲ್ಲಿ ತುಂಡುಗಳನ್ನು ಮಾಡಬೇಕು.
No comments:
Post a Comment