ದಾಳಿ ತೋಯ್ -ಕೊಂಕಣಿಗರ ಬೇಳೆ ಸಾರು.
ಬೇಕಾಗುವ ಪದಾರ್ಥಗಳು:
ತೊಗರಿ ಬೇಳೆ - ಒಂದು ಕಪ್
ಹಸಿ ಮೆಣಸು - 5 ರಿಂದ 6
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ :
ಕೊಬ್ಬರಿ ಎಣ್ಣೆ /ತುಪ್ಪ - ಎರಡು ಚಮಚ
ಸಾಸಿವೆ - 1 /೨ ಚಮಚ
ಕರಿಬೇವು - ಒಂದು ಗರಿ
ಗಟ್ಟಿ ಹಿಂಗು - ಒಂದು ಸಣ್ಣ ತುಂಡು [ಹಿಂಗನ್ನು ನೀರಿನಲ್ಲಿ ಹಾಕಿಡಬೇಕು ]
ಮಾಡುವ ರೀತಿ:
ಬೇಳೆಗೆ ನೀರನ್ನು ಹಾಕಿ ಚೆನ್ನಾಗಿ [ಮೃದುವಾಗಿ ] ಬೇಯಿಸಿ, ನಂತರ ಬೇಕಾದಷ್ಟು ನೀರನ್ನು ಹಾಕಿ, ಹಸಿಮೆಣಸಿನ ಸೀಳುಗಳ್ಳನ್ನು, ಒಟ್ಟಿಗೆ ಉಪ್ಪನ್ನು ಹಾಕಿ ಕುದಿಸಬೇಕು. ನಂತರ ಒಗ್ಗರಣೆ ಮಾಡಿ ಬೇಳೆಗೆ ಹಾಕಿ , ಕೊನೆಯಲ್ಲಿ ಹಿಂಗಿನ ನೀರು ಹಾಕಿ ಬೆರಸಿ ಮುಚ್ಚಿಡಬೇಕು.
[ಹಿಂಗನ್ನು ಬೇಕಾದರೆ ಒಗ್ಗರಣೆ ಯಲ್ಲೂ ಹಾಕಬಹುದು. ಕರಿಬೇವಿನ ಗರಿಯನ್ನು ಕುದಿಸುವಾಗಲೂ ಹಾಕಬಹುದು]
ದಾಳಿತೊಯ presentation ತುಂಬ ಚೆನ್ನಾಗಿ ಬಂದಿದೆ. ತಾಮ್ರದ ಪಾತ್ರೆಯ ಫೋಟೋ ಅಂತು ಉತ್ಕ್ರಷ್ಠವಾಗಿ ಬಂದಿದೆ. ಹೊಟ್ಟೆ ತುಂಬಾ ಹಸಿತಾ ಇತ್ತು. ಪ್ಲೇಟಲ್ಲಿ ಹಾಕಿಟ್ಟ ಊಟ ಮಾಡಿಬಿದೋಣಾ ಅಂತಾ ಅನಿಸ್ತಾ ಇದೆ.
ReplyDeleteರಾತನಯ
ಚಂಡೀಗಡ