BLOG FOLLOWERS

Monday, October 10, 2011

ಸಬ್ಬಸ್ಸೆಗೆ ಆಲೂ ಉಪ್ಕರಿ

ಸಬ್ಬಸ್ಸಿಗೆ  ಸೊಪ್ಪು - * ಸಬ್ಬಸ್ಸಿಗೆ ಸೊಪ್ಪು ನರಗಳಿಗೆ ಶಕ್ತಿ ನೀಡುತ್ತದೆ . ನಿತ್ಯ
                                              ಆಹಾರದಲ್ಲಿ ಈ ಸೊಪ್ಪನ್ನು ಬಳಸುವುದರಿಂದ, ನಿದ್ರೆ
                                               ಚೆನ್ನಾಗಿ ಬರುತ್ತದೆ.
                                           *   ಈ  ಸೊಪ್ಪಿನ ರಸಕ್ಕೆ, ಜೇನುಬೆರಸಿಕುಡಿದರೆ,                  
                                ಅಜೀರ್ಣ, ಹೊಟ್ಟೆ ಉಬ್ಬರ,ಹೊಟ್ಟೆನೋವು 
                                 ಕಡಿಮೆಯಾಗುತ್ತದೆ.


ಸಬ್ಬಸ್ಸೆಗೆ  ಆಲೂ   ಉಪ್ಕರಿ

ಬೇಕಾಗುವ  ಪದಾರ್ಥಗಳು:
ಸಬ್ಬಸ್ಸಿಗೆ  ಸೊಪ್ಪು  -  ಸೊಪ್ಪನ್ನು ತೊಳೆದು, ದಂಟೀನಿಂದ ಬಿಡಿಸಿಟ್ಟುಕೊಳ್ಳ ಬೇಕು
ಆಲೂಗೆಡ್ಡೆ            -   ಸಣ್ಣಗೆ  ಹೆಚ್ಚಿಟ್ಟುಕೊಳ್ಳಬೇಕು
ಅರಿಶಿನ ಪುಡಿ 
ಕಾಯಿತುರಿ
ಉಪ್ಪು  
ಒಗ್ಗರಣೆಗೆ:  ಎಣ್ಣೆ , ಸಾಸಿವೆ  ಹಸಿಮೆಣಸು/ಕೆಂಪು ಮೆಣಸು  ಉದ್ದಿನಬೇಳೆ  ಕಡ್ಲೆಬೇಳೆ 


 ಮಾಡುವ ವಿದಾನ :
 ಬಾಣಲೆಯಲ್ಲಿ  ಎಣ್ಣೆ ಹಾಕಿ  ಒಗ್ಗರೆಣೆಯನ್ನು   ಮಾಡಿಕೊಂಡು, ಹೆಚ್ಚಿಟ್ಟುಕೊಂಡ  ಆಲೂಗೆಡ್ಡೆ  ಹಾಗು ಸಬ್ಬಸ್ಸಿಗೆ  ಸೊಪ್ಪು 
 ಅರಿಶಿನ, ಉಪ್ಪು  ಹಾಕಿ  ಬೇಯಿಸಿಕೊಳ್ಳಬೇಕು. ಬೆಂದ ಬಳಿಕ  ಕಾಯಿತುರಿ  ಹಾಕಿ  ಚೆನ್ನಾಗಿ  ಮಿಕ್ಸ್  ಮಾಡಿಕೊಂಡರೆ 
 ಅನ್ನ/ಚಪಾತಿ ಯೊಂದಿಗೆ ಸವಿಯಲು  ಸಬ್ಬಸಿಗೆ ಆಲೂ  ಉಪ್ಕರಿ  ಸಿದ್ದ.


   

1 comment:

  1. ವಾಃ ಏನ್ ಚೆನ್ನಾಗಿ ಬಂದಿದೆ. ಸಬ್ಬಸ್ಕೆ ಸೊಪ್ಪಿನ ಪರಿಮಳ ಇಲ್ಲಿ ತನಕ ಬರ್ತಾ ಇದೆ. ಸಬಸ್ಕೆ ಸೊಪ್ಪಿನ ಫೋಟೋ ತುಂಬಾ ಚೆನ್ನಾಗಿ ಬಂದಿದೆ.

    ರಾತನಯ
    ಚಂಡೀಗಡ

    ReplyDelete