BLOG FOLLOWERS

Monday, October 17, 2011

RAVA ONION DOSA


ಈರುಳ್ಳಿ   ರವಾ   ದೋಸೆ    -   [ ಕೂಡಲೇ ತಯಾರಿಸುವಂತಹ ಸುಲಭ ದೋಸೆ ]


ಏನೇನು ಬೇಕು

ಮಿಡಿಯಂ ರವೆ    -   ಒಂದು ಕಪ್ 
ಅಕ್ಕಿ ಹಿಟ್ಟು         -    ಒಂದು ಕಪ್ 
ಮೈದಾ ಹಿಟ್ಟು    -     ಅರ್ಧ  ಕಪ್
ಹಿಂಗು        -      ಚಿಟಿಕೆಯಷ್ಟು 
ಜೀರಿಗೆ        -    ಒಂದು ಚಮಚ
ಸಣ್ಣಗೆ ತುಂಡು ಮಾಡಿದ  ಕಾಳುಮೆಣಸು  - ಒಂದು ಚಮಚ
ಸಣ್ಣಗ ಹೆಚ್ಚಿದ  ಹಸಿ ಶುಂಟಿ  -   ಒಂದು ಚಮಚ
ಸಣ್ಣಗೆ ಹೆಚ್ಚಿದ ಹಸಿ ಮೆಣಸು  -  ಒಂದು ಚಮಚ 
ರುಚಿಗೆ  ಉಪ್ಪು  ಹಾಗು  ನೀರು.

ಬೇರೆಯಾಗಿ ತೆಗೆದಿಟ್ಟು  ಕೊಳ್ಳಬೇಕು
ಸಣ್ಣಗೆ ಹೆಚ್ಚಿದ  ಈರುಳ್ಳಿ    - ಎರಡು 
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು   ಅರ್ದ ಕಪ್ 
ಮಾಡೋದು ಹೇಗೆ 

ಮೇಲೆ ತಿಳಿಸಿದ  ಎಲ್ಲಾ  ಪದಾರ್ಥಗಳ್ಳನ್ನು  ಒಂದು ಪಾತ್ರೆಯಲ್ಲಿ ಹಾಕಿ, ಹಿಡಿಸುವಷ್ಟು  ನೀರನ್ನು  ಹಾಕಿ  ಚೆನ್ನಾಗಿ ಕಲಿಸಿಕೊಳ್ಳಬೇಕು. [ ನೀರು ದೋಸೆ ಹಿಟ್ಟಿನ ಹದಕ್ಕೆ  ಕಲಿಸಿಕೊಳ್ಳಬೇಕು]
ಹೀಗೆ  ತಯಾರಾದ ಹಿಟ್ಟನ್ನು , ಕಾದ ಕಾವಲಿಯ ಮೇಲೆ ಎಣ್ಣೆಯನ್ನು  ಸಿಂಪಡಿಸಿ, ಮೊದಲು  ಒಂದು ಚಮಚದಷ್ಟು  ಎಸಂನಗೆ ಕತ್ತರಿಸಿದ ಈರುಳ್ಳಿಯನ್ನು ಹರಡಿ, ಕೂಡಲೇ  ದೋಸೆ ಹಿಟ್ಟನ್ನು  ಹುಯ್ಯಬೇಕು, ಹಾಗು ಕೊತ್ತಂಬರಿ ಸೊಪ್ಪನ್ನು ಮೇಲಿನಿಂದ   ಹಾಕಬೇಕು.  ಅರ್ದಬೆಂದ ದೋಸೆಯ ಮೇಲೆ ಕೂಡಲೇ  ಬೆಣ್ಣೆ/ತುಪ್ಪ/ಎಣ್ಣೆಯನ್ನು ಹಾಕಿ ಕಾಯಿಸಿದರೆ , ಗರಿ ಗರಿಯಾದ  ಈರುಳ್ಳಿ ರವಾ ದೋಸೆ  ಸಿದ್ಧ .
 [ ಈ ದೋಸೆಯನ್ನು ಒಂದು  ಬದಿ  ಮಾತ್ರ ಕಾಯಿಸಿದರೆ ಸಾಕು.ಬೆಣ್ಣೆ ಹಾಗು ಚಟ್ನಿ ಯೋದಿಂಗೆ  ಈ ದೋಸೆ ಒಳ್ಳೆಯದಾಗಿ ಹೊಂದಿ ಕೊಳ್ಳುತ್ತದೆ]





No comments:

Post a Comment