ಕ್ಯಾಪ್ಸಿಕಂ ರೈಸ್
ಬೇಕಾಗುವ ಪದಾರ್ಥಗಳು :
ದೊಣ್ಣೆ ಮೆಣಸಿನಕಾಯಿ - 3 ದೊಡ್ಡದು {ಚೌಕ ಆಕಾರದಲ್ಲಿ ತುಂಡುಗಳು }
ಬಟಾಟೆ - 1 {ಚೌಕ ಆಕಾರದಲ್ಲಿ ತುಂಡುಗಳು }
ಬಾಸ್ಮತಿ ಅಕ್ಕಿ - 250 ಗ್ರಾಂ
ಕಾಯಿ ತುರಿ - 1 /2 ಕಪ್
ಕೆಂಪು ಮೆಣಸು - 4
ಸಾಸಿವೆ - 1 /2 ಚಮಚ
ಜೀರಿಗೆ - 1 /2 ಚಮಚ
ಧನಿಯಾ - 1 ಚಮಚ
ಉದ್ದಿನಬೇಳೆ - 1 ಚಮಚ
ಶೇಂಗಾ ಬೀಜ - ಸ್ವಲ್ಪ
ಕರಿಬೇವು - 2 ಗರಿ
ಗರಂ ಮಸಾಲ ಪುಡಿ - 1 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ {ಸಣ್ಣಗೆ ಹೆಚ್ಚಬೇಕು }
ಎಣ್ಣೆ /ಬೆಣ್ಣೆ - ಸ್ವಲ್ಪ
ಮಾಡುವ ವಿದಾನ :
ಬಾಣಲೆಯಲ್ಲಿ ಎಣ್ಣೆ ಹಾಕದೆ ,ಕೆಂಪುಮೆಣಸು, ಸಾಸಿವೆ ,ಜೀರಿಗೆ ಧನಿಯಾ ಉದ್ದಿನಬೇಳೆ ,ಹಾಗು ಕಾಯಿ ತುರಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.ನಂತರ ತರಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು.
.ದಪ್ಪ ತಳ ಇರುವ ಪ್ಯಾನ್ನಲ್ಲಿ ಬೆಣ್ಣೆ ಯಾ ಎಣ್ಣೆಯನ್ನು ಹಾಕಿ ಶೇಂಗಾ ಬೀಜ , ಕರಿಬೇವು, ದೊಣ್ಣೆ ಮೆಣಸು ಹಾಗು ಅಲೂ ಗಡ್ಡೆ ತುಂಡುಗಳ್ಳನ್ನು ಸ್ವಲ್ಪ ಬಾಡಿಸಿಕೊಳ್ಳಬೇಕು. ತೊಳೆದಿಟ್ಟ ಅಕ್ಕಿ ,ಪುಡಿ ಮಾಡಿಟ್ಟ ಮಸಾಲೆ ,ಗರಂ ಮಸಾಲ ಪುಡಿ ,ಉಪ್ಪನ್ನು ಹಾಕಿ ಚೆನ್ನಾಗಿ ಕೈ ಯಾಡಿಸಿ 20 ನಿಮಿಷ ದಂ ಕೊಟ್ಟು ಬೇಯಿಸಬೇಕು. ಬೆಂದ ಬಳಿಕ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ
ಅಲಂಕರಿಸಬೇಕು .
ವ್ಹಾಹ್, ಏನ್ ಚೆನ್ನಾಗಿ ಬಂದಿದೆ. ಖಂಡಿತವಾಗಿ, ಈಗ ತಾವು ಒಂದು ಪುಸ್ತಕ ಬರೆಯ ಬಹುದು. ಉತ್ಕೃಷ್ಟ ಅಡಿಗೆ. ತುಂಬಾ ಚೆನ್ನಾಗಿರ ಬಹುದು. ತಿನ್ಬೇಕು ಅನಿಸ್ತಾ ಇದೆ. presentation ಕೂಡ ತುಂಬಾ ಚೆನ್ನಾಗಿ ಬಂದಿದೆ. ಖಂಡಿತವಾಗಿ ಇದಕ್ಕೆ ಫುಲ್ ಮಾರ್ಕ್ಸ್.
ReplyDeleteರಾತನಯ
ಚಂಡೀಗಡ