ಅಮೆರಿಕನ್ ಸ್ವೀಟ್ ಕೊರ್ನ್ ಸೂಪ್
ಏನೇನು ಬೇಕು :
ಸ್ವೀಟ್ ಕೊರ್ನ್ - ಒಂದು ಕಪ್
ಕ್ಯಾರೆಟ್ - ಒಂದು ದೊಡ್ಡದು
ಟೊಮೇಟೊ - ಒಂದು ದೊಡ್ಡದು
ಈರುಳ್ಳಿ - ಒಂದು ಸಣ್ಣದು
ಬೆಳ್ಳುಳ್ಳಿ - ನಾಲ್ಕು ಎಸಳು
ಲವಂಗ - 2
ಚಕ್ಕೆ - ಸಣ್ಣ ತುಂಡು
ಮಾಡೋದು ಹೇಗೆ :
ಕ್ಯಾರಟ್, ಕೊರ್ನ್, ಟೊಮೇಟೊಗಳ್ಳನ್ನು ಸ್ವಲ್ಪ ನೀರಿನಲ್ಲಿ ಬೇಯಿಸಿಕೊಳ್ಳಬೇಕು. ಚೆಕ್ಕೆ ಲವಂಗ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ಬೆಣ್ಣೆಯಲ್ಲಿ ಹುರಿದುಕೊಳ್ಳಬೇಕು. ನಂತರ ಬೇಯಿಸಿದ ತರಕಾರಿ ಹುರಿದ ಮಸಾಲೆಯೊಂದಿಗೆ ಮಿಕ್ಸಿ ಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಐದು ದೊಡ್ಡ ಚಮಚ ಹಾಲು, ಹಿಡಿಸುವಷ್ಟು ನೀರು ಹಾಕಿ ಕುದಿಸಬೇಕು.
ಬಿಸಿ ಬಿಸಿಯಾದ ಸೂಪ್ ಗೆ ಒಂದು ಚಮಚ ಬೆಣ್ಣೆ, ಕಾಳುಮೆಣಸುಪುಡಿ, ಉಪ್ಪನ್ನು ಸೇರಿಸಿದರೆ ಆರೋಗ್ಯಕರ ಅಮೇರಿಕನ್ ಕೊರ್ನ್ ಸೋಪ್ ರೆಡಿ.
No comments:
Post a Comment