ಗೋಡ ಇಡ್ಲಿ
ಬೇಕಾಗುವ ಪದಾರ್ಥಗಳು:
ಅಕ್ಕಿ - ಒಂದು ಉದ್ದ ಲೋಟ
ಅವಲಕ್ಕಿ - ಒಂದು ಲೋಟ
ಕಾಯಿತುರಿ - ಒಂದು ಲೋಟ
ಬೆಲ್ಲದ ಪುಡಿ - ಅರ್ದ ಲೋಟ
ಸಿಹಿ ಮೊಸರು - ಅರ್ದ ಲೋಟ
ಏಲಕ್ಕಿ - ಎರಡು
ಉಪ್ಪು - ರುಚಿಗೆ
ದ್ರಾಕ್ಷಿ ಗೋಡಂಬಿ ಚುರುಗಳು ಸ್ವಲ್ಪ.
ತುಪ್ಪ - ಸ್ವಲ್ಪ
ಮಾಡುವ ವಿದಾನ:
ಅಕ್ಕಿಯನ್ನು ಅರ್ದ ಗಂಟೆಗಳ ಕಾಲ ನೆನಸಬೇಕು. ಕಾಯಿತುರಿ, ಮೊಸರಿನಲ್ಲಿ ನೆನಸಿದ ಅವಲಕ್ಕಿ, ಬೆಲ್ಲ ಏಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನಯವಾಗಿ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ಅಕ್ಕಿಯನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಂಡು, ರುಚಿಗೆ ಉಪ್ಪು, ದ್ರಾಕ್ಷಿ ಗೋಡಂಬಿ ಚುರುಗಳ್ಳನ್ನು ಹಾಕಿ ಸುಮಾರು ಆರು ಗಂಟೆಗಳ ಕಾಲ
ಮುಚ್ಚಿಡಬೇಕು.
ಹೀಗೆ ತಯಾರಾದ ಹಿಟ್ಟನ್ನು ಇಡ್ಲಿ ಬಟ್ಟಲುಗಳಿಗೆ ತುಪ್ಪ ಸವರಿ, ಹಿಟ್ಟನ್ನು ಹಾಕಿ ಹಬೆ ಪಾತ್ರೆಯಲ್ಲಿ ಹದಿನೈದು ನಿಮಿಷಗಳ ಕಾಲ ಬೇಯಿಸಬೇಕು.
ಮನೆ ಬೆಣ್ಣೆ/ ತುಪ್ಪ ದೊಂದಿಗೆ ಸಿಹಿ ಇಡ್ಲಿಯನ್ನು ತಿನ್ನಲು ಒಳ್ಳೆಯದಾಗುತದೆ.
No comments:
Post a Comment