ಟೊಮೇಟೊ ಚಟ್ನಿ
ಏನೇನು ಬೇಕು...?
ಹಣ್ಣಾದ ಟೊಮೇಟೊ - ನಾಲ್ಕು [ಸಣ್ಣಗೆ ಹೆಚ್ಚಬೇಕು]
ಸೀಳಿದ ಹಸಿಮೆಣಸು - ಎರಡು
ದಾಲ್ಚಿನಿ ಎಲೆ - ಒಂದು
ಹಿಂಗು - ಚಿಟಿಕೆಯಸ್ಟು
ಅರಿಶಿನ - ಚಿಟಿಕೆಯಸ್ಟು
ಖಾರ ಪುಡಿ - ಅರ್ದ ಚಮಚ
ಉಪ್ಪು - ರುಚಿಗೆ
ಸಾಸಿವೆ - ಅರ್ದ ಚಮಚ
ಜೀರಿಗೆ - ಅರ್ದ ಚಮಚ
ಎಣ್ಣೆ - ಸ್ವಲ್ಪ
ಸಕ್ಕರೆ - ಅರ್ದ ಚಮಚ
ಕೊರ್ನ್ ಹಿಟ್ಟು - ಒಂದು ಚಮಚ
ಮಾಡುವ ವಿದಾನ :
ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಸಾಸಿವೆ ಜೀರಿಗೆ ಹಿಂಗು ಹಸಿಮೆಣಸು, ದಾಲ್ಚಿನಿ ಎಲೆ ಒಗ್ಗರಣೆ ಮಾಡಿಕೊಂಡು, ಬಳಿಕ ಹಸಿ ಶುಂಟಿ, ಟೊಮೇಟೊ ತುಂಡುಗಳನ್ನುಜೊತೆಗೆ ಸ್ವಲ್ಪ ನೀರನ್ನು ಹಾಕಿ ಬೇಯಿಸಬೇಕು.ಅರ್ದ ಬೆಂದ ಬಳಿಕ ಮೆಣಸಿನ ಪುಡಿ,ಅರಿಶಿನ , ಉಪ್ಪು ಹಾಗು ಸಕ್ಕರೆಯನ್ನು ಹಾಕಿ ಕುದಿಸಬೇಕು. ಕೊನೆಯಲ್ಲಿ ಸ್ವಲ್ಪ ಕೊರ್ನ್ ಪುಡಿ ಹಾಕಿ ಚೆನ್ನಾಗಿ ಬೆರಸಿ ಕುದಿಸಿದರೆ
ಧಿಡೀರಾಗಿ ಮಾಡಬಹುದತಹ ಟೊಮೇಟೊ ಚಟ್ನಿ ಸಿದ್ದ .
ಈ ಚಟ್ನಿಯು ಚಪಾತಿ/ ಪರಾಟ / ಬ್ರೆಡ್ ನೋಟ್ಟಿಗೆ ಒಳ್ಳೆಯದಾಗುತ್ತದೆ .
No comments:
Post a Comment