ಮಶ್ರೂಂ ಪನ್ನೀರ್ ರೈಸ್
ಬಾಸ್ಮತಿ ಅಕ್ಕಿ - ಒಂದು ಲೋಟ
ಬಟ್ಟನ್ ಮಶ್ರೂಂ - ಒಂದು ಕಪ್[ಬೇಯಿಸಿಡಬೇಕು]
ಪನ್ನೀರ್ ತುಂಡುಗಳು - ಒಂದು ಕಪ್
ತೆಳ್ಳಗೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿ - ಮೂರು
ಸಣ್ಣಗೆ ತುಂಡರಿಸಿದ ಟೊಮೇಟೊ - ಒಂದು
ಪುದಿನಾ ಸೊಪ್ಪು - ಅರ್ದ ಕಪ್
ಶುಂಟಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ
ಚೆಕ್ಕೆ, ಲವಂಗ, ಏಲಕ್ಕಿ - ಒಂದು ಚಮಚ
ಗರಂ ಮಸಾಲೆ ಪುಡಿ - ಎರಡು ದೊಡ್ಡ ಚಮಚ
ತುಪ್ಪ - ನಾಲ್ಕು ದೊಡ್ಡ ಚಮಚ
ಉಪ್ಪು - ರುಚಿಗೆ
ಕಾಯಿತುರಿ ಪೇಸ್ಟ್ - ಅರ್ದಕಪ್ ಅಥವಾ ಎರಡು ದೊಡ್ಡ ಚಮಚ ಗೋಡಂಬಿ ಪೇಸ್ಟ್
HOW TO MAKE MUSHROOM PANEER RICE
ಕುಕ್ಕರ್ ಪ್ಯಾನ್ ನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು, ಚೆಕ್ಕೆ ಲವಂಗ ಏಲಕ್ಕಿ,ಈರುಳ್ಳಿ,ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹುರಿದುಕೊಂಡು,ನಂತರ ಪನ್ನೀರ್ ತುಂಡುಗಳು, ಬೇಯಿಸಿಟ್ಟ ಮಶ್ರೂಂ ನ್ನು ಹಾಕಿ,ಜೊತೆಗೆ ನೆನಸಿಟ್ಟ ಅಕ್ಕಿ, ಅರಿಶಿನ ಗರಂ ಮಸಾಲೆಪುಡಿ, ಒಂದೊಂದಾಗಿ ಹಾಕಿ ಚೆನ್ನಾಗಿ ಹುರಿದುಕೊಂಡು, ಪುದಿನ ಸೊಪ್ಪು,ಕಾಯಿತುರಿ ಪೇಸ್ಟ್/ಗೋಡಂಬಿ ಪೇಸ್ಟ್ , ರುಚಿಗೆ ಹಿಡಿಸುವಷ್ಟು ಉಪ್ಪು,ಎರಡುವರೆ ಲೋಟ ನೀರನ್ನು ಹಾಕಿ, ಬೇಯಲು ಇಡಬೇಕು. ಒಂದು ಕುದಿ ಬಂದ ಬಳಿಕ
ಉರಿಯನ್ನು ಮಂದ ಮಾಡಿ, ಮುಚ್ಚಳವನ್ನು ಗಟ್ಟಿ ಮುಚ್ಚಿ, ಇಪ್ಪತ್ತು ನಿಮಿಷ' ದಂ' ನಲ್ಲಿ ಬೇಯಿಸಬೇಕು.
* ಗಟ್ಟಿ ಸಿಹಿ ಮೊಸರು , ಮೊಸರು ಬಜ್ಜಿ, ಲೈಟ್ ಗ್ರೇವಿ ಪದಾರ್ಥ ಗಳೊಂದಿಗೆ ತಿನ್ನಲು ಒಳ್ಳೆಯದಾಗುತ್ತದೆ.
* ಗಟ್ಟಿ ಸಿಹಿ ಮೊಸರು , ಮೊಸರು ಬಜ್ಜಿ, ಲೈಟ್ ಗ್ರೇವಿ ಪದಾರ್ಥ ಗಳೊಂದಿಗೆ ತಿನ್ನಲು ಒಳ್ಳೆಯದಾಗುತ್ತದೆ.
No comments:
Post a Comment