ಬೇಕಾಗುವ ಪದಾರ್ಥಗಳು :
ಪಾಲಕ್ ಸೊಪ್ಪು - ಎರಡು ಕಟ್ಟು
ಕೊತಂಬರಿ ಸೊಪ್ಪು - 1/2 ಕಟ್ಟು
ಮಶ್ರುಂ [ಅಣಬೆ ] - 200 ಗ್ರಾಂ
ಈರುಳ್ಳಿ - 8
ಟೊಮೇಟೊ - 2 ದೊಡ್ಡದು
ಹಸಿ ಮೆಣಸು - 2
ಕಾಯಿ ತುರಿ - ಅರ್ದ ಕಪ್
ಹಸಿ ಶುಂಟಿ ಪೇಸ್ಟ್ - 1 ಚಮಚ ಕೆಂಪು ಮೆಣಸಿನ ಪುಡಿ - 1/2 ಚಮಚ
ಗರಂ ಮಸಾಲ ಪುಡಿ - 1/2 ಚಮಚ
ಅರಿಶಿನ ಪುಡಿ
ಉಪ್ಪು ರುಚಿಗೆ ತಕ್ಕಷ್ಟು.
ಉಪ್ಪು ರುಚಿಗೆ ತಕ್ಕಷ್ಟು.
ಎಣ್ಣೆ -- ಸ್ವಲ್ಪ
ಮಾಡುವ ವಿದಾನ:
1. ಮಶ್ರುಂಗಳನ್ನು ಹೆಚ್ಚಿಕೊಂಡು ಸ್ವಲ್ಪವೇ ನೀರಿನಲ್ಲಿ ಬೆಯಿಸಿಟುಕೊಳಬೇಕು
2. ಪಾಲಕ್ ಸೊಪ್ಪು, ಕೊತಂಬರಿ ಸೊಪ್ಪು, ಹಸಿಮೆಣಸು, ಟೊಮೇಟೊ ಬೇಯಿಸಿ, ತಣಿದ ಬಳಿಕ ಕಾಯಿ ತುರಿಯೋಟ್ಟಿಗೆ ಪೇಸ್ಟ್ ಮಾಡಿಡಬೇಕು.
3.ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಉದ್ದಕ್ಕೆ ಹೆಚ್ಚಿದ ಈರುಳ್ಳಿ, ರುಬ್ಬಿದ ಪೇಸ್ಟ್,ಹಸಿ ಶುಂಟಿ ಪೇಸ್ಟ್,ಉಪ್ಪು, ಗರಂ ಮಸಾಲೆ ಪುಡಿ,ಅರಶಿನ ಪುಡಿ, ಕಾರ ಪುಡಿ ಹಾಕಿ,ಮೊದಲೇ ಬೇಯಿಸಿಟ್ಟ ಅಣಬೆಗಳನ್ನು ಹಾಕಿ, ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುಡಿಸಿದರೆ,ಮಶ್ರುಂ ಪಾಲಕ್, ಚಪಾತಿ/ ಪರೋಟ/ಪುರಿ ಯೊಂದಿಗೆ ಸವಿಯಲು ಸಿದ್ದ.
ಭಾರಿ ಲಾಯಕ್ ಆಯ್ಲಾ
ReplyDeleteಫೋಟೋ ವರೆ ಚಂದ್ ಆಯ್ಲಾ
ಒಟ್ಟು presentation ಲಾಯಕ್ ಜಾಲ್ಲಾ .
ರಾಧಿಕ ತನಯಾ
ಚಂದಿಗಡ