ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು - ಎರಡು ಉದ್ದ ಲೋಟ
ಕಡ್ಲೆ ಹಿಟ್ಟು - ಎರಡು ದೊಡ್ಡ ಚಮಚ
ಬಾಳೇಹಣ್ಣು - ಚನ್ನಾಗಿ ಹಣ್ಣಾದ ಒಂದು ಪಚ್ಚೆ ಬಾಳೆ ಹಣ್ಣು
ಸಕ್ಕರೆ ಪುಡಿ - ಎರಡು ಚಮಚ ಸಕ್ಕರೆ ಪುಡಿ
ಉಪ್ಪು - ಸ್ವಲ್ಪ
ಮೊಸರು - ಒಂದು ಕಪ್ಪು
ಕರಿಯಲು ಎಣ್ಣೆ.
ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ{ಮರಿಗೆ} ಮೊಸರು ಉಪ್ಪು ಸಕ್ಕರೆ ಪುಡಿ ಹಾಕಿ ಬೆರಸಿಕೊಂಡು ,ಬಾಳೇ ಹಣ್ಣಿನ ಸಿಪ್ಪೆಯನ್ನು ಸುಲಿದು ಮಿಶ್ರಣದೊಳಗೆ ಹಾಕಿ ಚನ್ನಾಗಿ ಹಿಸುಕಿ ಕೊಳ್ಳಬೇಕು.ಈಗ ಆ ಮಿಶ್ರಣಕ್ಕೆ
ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ{ಮರಿಗೆ} ಮೊಸರು ಉಪ್ಪು ಸಕ್ಕರೆ ಪುಡಿ ಹಾಕಿ ಬೆರಸಿಕೊಂಡು ,ಬಾಳೇ ಹಣ್ಣಿನ ಸಿಪ್ಪೆಯನ್ನು ಸುಲಿದು ಮಿಶ್ರಣದೊಳಗೆ ಹಾಕಿ ಚನ್ನಾಗಿ ಹಿಸುಕಿ ಕೊಳ್ಳಬೇಕು.ಈಗ ಆ ಮಿಶ್ರಣಕ್ಕೆ
ಮೈದಾ + ಕಡ್ಲೆ ಹಿಟ್ಟನ್ನು ಬೆರಸಿ ಚನ್ನಾಗಿ ಕಲಿಸಿಕೊಂಡು , ಹಿಟ್ಟಿನ ಮುದ್ದೆಯನ್ನು ಮಾಡಿಕೊಳ್ಳಬೇಕು. ಬಳಿಕ ಎರಡು ಚಮಚ ಎಣ್ಣೆಯನ್ನು ಮೇಲಿನಿಂದ ಹಾಕಿ ಗಟ್ಟಿಯಾಗಿ ಮುಚ್ಚಿ ಎಂಟು ಗಂಟೆಗಳ ತೆಗೆದಿಡಬೇಕು. [ಕಲೆಸುವಾಗ ನೀರನ್ನು ಹಾಕಿಕೊಳ್ಳಬಾರದು] ನಂತರ ಹಿಟ್ಟಿನಿಂದ ಲಿಂಬೆ ಗಾತ್ರದ ಕಣಕಗಳ್ಳನ್ನು ತಯಾರಿಸಿ
ಸ್ವಲ್ಪ ದಪ್ಪವಾಗಿಯೇ ಲಟ್ಟಿಸಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಬೇಕು.
* ಹಿಟ್ಟು ಕಲಿಸ್ಕೊಂಡು ತಕ್ಷಣವೇ ಮಾಡುವುದಾದರೆ, ಸ್ವಲ್ಪ ಅಡುಗೆ ಸೋಡವನ್ನು ಸೇರಿಸಿಕೊಳ್ಳಬೇಕು.
ಸ್ವಲ್ಪ ದಪ್ಪವಾಗಿಯೇ ಲಟ್ಟಿಸಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಬೇಕು.
* ಹಿಟ್ಟು ಕಲಿಸ್ಕೊಂಡು ತಕ್ಷಣವೇ ಮಾಡುವುದಾದರೆ, ಸ್ವಲ್ಪ ಅಡುಗೆ ಸೋಡವನ್ನು ಸೇರಿಸಿಕೊಳ್ಳಬೇಕು.
No comments:
Post a Comment