ಗುಳಿಯಪ್ಪ { ಆಪ್ಪೂ }
ತಯಾರಿಸಲು:
ಉದ್ದಿನ ಬೇಳೆ - ಒಂದು ಅಳತೆ
ಅಕ್ಕಿ - ಎರಡು ಅಳತೆ
ಉಪ್ಪು - ಸ್ವಲ್ಪ
ಮಾಡುವ ರೀತಿ:
ಅಕ್ಕಿ ಹಾಗು ಉದ್ದನ್ನು ತೊಳೆದು ಎರಡು ಗಂಟೆಗಳ ಕಾಲ ನೆನಸಬೇಕು,ನಂತರ ರುಬ್ಬಿಕೊಳ್ಳಬೇಕು. ಹಿಟ್ಟು ದೋಸೆ ಹಿಟ್ಟಿನ ಹದಕಿಂತ ಸ್ವಲ್ಪ ಗಟ್ಟಿಯಾಗಬೇಕು. ಹಿಟ್ಟಿಗೆ ಉಪ್ಪನ್ನು ಬೆರಸಿ ಎಂಟು ಗಂಟೆಗಳ ಕಾಲ ಮುಚ್ಚಿಡಬೇಕು. ಹೀಗೆ ತಯಾರಾದ ಹಿಟ್ಟನ್ನು ,ಕಾದ ಗುಳಿಯಪ್ಪಾ ಕಾವಲಿ ಗೆ ಎಣ್ಣೆ ಸವರಿ , ಪ್ರತಿಯೊಂದೂ ಗುಳಿಯಲ್ಲೂ ಒಂದೊಂದು ಚಮಚ ಹಿಟ್ಟನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಹದ ಉರಿಯಲ್ಲಿ ಕಾಯಿಸಬೇಕು. ಒಂದು ಬದಿ ಬೆಂದ ಬಳಿಕ, ಕೂಡಲೇ ಮಗುಚಿ ಹಾಕಬೇಕು.
ಇದೇ ಹಿಟ್ಟಿಗೆ ಈರುಳ್ಳಿ,ಹಸಿಮೆಣಸು ಹಾಗು ಕೊತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಿ ಅಪ್ಪವನ್ನು ತಯಾರಿಸಬಹುದು.
ಚಟ್ನಿ/ ಬೆಣ್ಣೆ ಯೊಂದಿಗೆ ಗುಳಿ ಅಪ್ಪ ತಿನ್ನಲ್ಲು ರುಚಿಯಾಗಿರುತ್ತದೆ.
No comments:
Post a Comment