ಬೇಕಾಗುವ ಪದಾರ್ಥಗಳು :
ಬೇಬಿ ಕಾರ್ನ್ - 500 ಗ್ರಾಂ
ಕಡ್ಲೆ ಹಿಟ್ಟು - ಒಂದು ಕಪ್
ಅಕ್ಕಿ ಹಿಟ್ಟು - ಒಂದು ದೊಡ್ಡ ಚಮಚ
ಕಾರದ ಪುಡಿ ---ರುಚಿಗೆ ಬೇಕಾದಷ್ಟು
ಅರಿಶಿನ ಪುಡಿ - ಸ್ವಲ್ಪ
ಹಿಂಗು - ಸ್ವಲ್ಪ
ಜೀರಿಗೆ - ಒಂದು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕಲೆಸಲು ನೀರು , ಕರಿಯಲು ಎಣ್ಣೆ .
ಮಾಡುವ ರೀತಿ : ಬೇಬಿ ಕಾರ್ನ್ಗಳ್ಳನ್ನು ಚೆನ್ನಾಗಿ ತೊಳೆದು ,ಭಾಗ ಮಾಡಿ ಒಂದಿಂಚು ಉದ್ದದ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ನೀರಿಗೆ ಉಪ್ಪು, ಕಡ್ಲೆ ಹಿಟ್ಟು ,ಅಕ್ಕಿಹಿಟ್ಟು ,ಅರಿಶಿನ ಹಿಂಗು ,ಜೀರಿಗೆ ಹಾಕಿ ಬೆರೆಸಿ , ಹಿಟ್ಟು ಕಲಸಿಡಬೇಕು.
ಎಣ್ಣೆಯನ್ನು ಕಾಯಲು ಇಟ್ಟು, ಒಂದೊಂದೇ ತುಂಡುಗಳ್ಳನ್ನು ಹಿಟ್ಟಿನಲ್ಲಿ ಅದ್ಡಿ ಎಣ್ಣೆಯಲ್ಲಿ ಕರಿಯಬೇಕು. ಬಿಸಿ ಬಿಸಿಯಾಗಿ ತಿನ್ನಲು ರುಚಿ ರುಚಿಯಾಗಿರುತ್ತದೆ
ಸಂಜೆಯ ಚಹಾ / ಕಾಫಿ ಯೊಟ್ಟಿಗೆ ಬೆಸ್ಟ್ ಕಾಂಬಿನೇಶನ್ .
बहुत भूक लगी है. मन करता है, उठाके खा लूँ . बहुत अच्चा दिख रहा है.
ReplyDeleteआपका अपना
रातानाया
चंडीगड़