ಕೊರ್ನ್ ಆಂಬೋಡೆ
ಕೊರ್ನ್ - ಒಂದು ಕಪ್
ಕಡ್ಲೆ ಬೇಳೆ - ಒಂದು ಕಪ್
ಹಸಿಮೆಣಸು - ಮೂರರಿಂದ ನಾಲ್ಕು [ಖಾರಕ್ಕೆ ಬೇಕಾಗುವಷ್ಟು ]
ಈರುಳ್ಳಿ - ಎರಡು [ಸಣ್ಣಗೆ ಹೆಚ್ಚಿದ್ದು]
ಕಾಯಿತುರಿ - ಸ್ವಲ್ಪ
ಕರಿಬೇವು - ಒಂದು ಗರಿ
ಹಿಂಗು - ಸ್ವಲ್ಪ
ಅರಿಶಿನ - ಕಾಲು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕಡ್ಲೆ ಹಿಟ್ಟು ಒಂದು ದೊಡ್ಡ ಚಮಚ
ಕರಿಯಲು ಎಣ್ಣೆ .
ಮಾಡುವ ರೀತಿ :ಕಡಲೇಬೇಳೆಯನ್ನು ಒಂದು ಗಂಟೆ ನೆನಸಬೇಕು. ಈ ನೆನದ ಕಡ್ಲೆ ಬೇಳೆಯನ್ನು, ಹಸಿಮೆಣಸಿನೊಂದಿಗೆ ತರಿ ತರಿಯಾಗಿ ರುಬ್ಬಿಕೊಂಡು, ಕೊನೆ ಸುತ್ತಿನಲ್ಲಿ ಬಿಡಿಸಿಟ್ಟ ಕೊರ್ನ್ ಗಳ್ಳನ್ನು ಹಾಕಿ ಒಂದು ಸುತ್ತು ಮಿಕ್ಸಿ ಮಾಡಿಕೊಳ್ಳಬೇಕು. ಹೀಗೆ, ರುಬ್ಬಿದ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಹಸಿಮೆಣಸು , ಕರಿಬೇವು, ಹಿಂಗು ಉಪ್ಪು ಈರುಳ್ಳಿ, ಕಾಯಿತುರಿ ಕಡ್ಲೆ ಹಿಟ್ಟನ್ನು ಹಾಕಿ [ನೀರು ಮುಟ್ಟಿಸದೆ]ಕಲೆಸಿಕೊಂಡು ಸಣ್ಣ ಸಣ್ಣ ಉಂಡೆ ಮಾಡಿ ಚಪ್ಪಟೆಯಾಗಿ ತಟ್ಟಿ ಕಾದ ,ಎಣ್ಣೆಯಲ್ಲಿ[ಮಧ್ಯಮ ಉರಿಯಲ್ಲಿ] ಕರಿಯಬೇಕು.
No comments:
Post a Comment