YELLOW FRIED RICE
ಮಾಡಲು ಏನೇನು ಬೇಕು?
ಬಾಸ್ಮತಿ ಅಕ್ಕಿ - ಒಂದು ಕಪ್
ಹಸಿರು ಬಟಾಣಿ
ಸಣ್ಣಗೆ ಹೆಚ್ಚಿದ ಕ್ಯಾರೆಟ್ ಹಾಗು ಬೀನ್ಸ್ - ಎಲಾ ಸೇರಿ ಅರ್ದ ಕಪ್
ಎಣ್ಣೆ - ಮೂರು ದೊಡ್ಡ ಚಮಚ
ಹಿಂಗು - ಚಿಟಿಕೆಯಷ್ಟು
ಜೀರಾ - ಒಂದು ಸಣ್ಣ ಚಮಚ
ಸೀಳಿದ ಹಸಿಮೆಣಸು - ಎರಡು
ದಾಲ್ಚಿನಿ ಎಲೆ - ಒಂದು
ಚೆಕ್ಕೆ, ಲವಂಗ
ಅರಿಶಿನ ಉಪ್ಪು.
ಮಾಡುವ ವಿದಾನ:
ದಪ್ಪ ತಳದ ಪ್ಯಾನ್ ನಲ್ಲಿ ನಾಲ್ಕು ಚಮಚ ಎಣ್ಣೆ ಯನ್ನು ಹಾಕಿ, ಕಾಯಿಸಬೇಕು.ನಂತರ ಜೀರಿಗೆ, ಹಿಂಗು ಲವಂಗ ಚೆಕ್ಕೆ ದಾಲ್ಚಿನಿ ಎಲೆ, ಹಸಿಮೆಣಸು ಹೆಚ್ಚಿದ ತರಕಾರಿಗಳ್ಳನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು, ಆ ಕೂಡಲೇ ಅಕ್ಕಿಯನ್ನು ಹಾಕಿ ,ಜೊತೆಗೆ ಅರಿಶಿನ ಹಾಗು ಉಪ್ಪನ್ನು ಬೆರಸಿ ಚೆನ್ನಾಗಿ ಮಗುಚಿ, ಎರಡುವರೆ ಲೋಟ ನೀರನ್ನು ಹಾಕಿ ಒಂದು ಕುದಿ ತೆಗೆದು, ನಂತರ ಸಣ್ಣ ಉರಿಯಲ್ಲಿ ಇಪ್ಪತ್ತು ನಿಮಿಷ 'ದಂ' ಕೊಟ್ಟು ಬೇಯಿಸಬೇಕು.
* ಈ ಅನ್ನಕ್ಕೆ ಮೊಸರು ಹಾಕಿ ಸಲಾಡ್, ಪನ್ನೀರ್ ಪಲ್ಯ , ಮಶ್ರೂಂ ಪಲ್ಯ ರಾಜಮಾ ಚೆನ್ನಾಗಿ ಹೊಂದಿಕೊಳ್ಳುತ್ತದೆ.
No comments:
Post a Comment