ಗೋಬೀ PAKODI
ಮಾಡಲು ಏನೆಲ್ಲಾ ಬೇಕು?
ಕಾಲಿಫ್ಳವೆರ್ - ಮೀಡಿಯಂ ಗಾತ್ರದ್ದು ಒಂದು
[ಹೂವನ್ನು ಬಿಡಿಸಿ ಉಪ್ಪು ನೀರಿನಲ್ಲಿ ಇಪ್ಪತ್ತು ನಿಮಿಷ ಹಾಕಿಡಬೇಕು ಹೀಗೆ ನೀರಿನಲ್ಲಿ ಹಾಕಿಡುವುದರಿಂದ, ಕಾಲಿಫ್ಳವೆರ್ನಲ್ಲಿ ಸಾಮಾನ್ಯವಾಗಿ ಇರುವಂತಹ ಸಣ್ಣ ಸಣ್ಣ ಹುಳಗಳು ಹೊರಗೆ ಬರುತ್ತದೆ, ಹಾಗು ಸಂಪೂರ್ಣ ಸ್ವಚ್ಹವಾಗುತ್ತದೆ.]
ಕೆಂಪು ಮೆಣಸಿನಪುಡಿ - ಎರಡು ಚಮಚ
ಅರಿಶಿನಪುಡಿ - ಚಿಟಿಕೆ
ರುಚಿಗೆ ಉಪ್ಪು
ಹಿಂಗು - ಕಾಲು ಚಮಚ
ಧನಿಯ ಪುಡಿ - ಎರಡು ಚಮಚ
ಕರಿಯಲು ಎಣ್ಣೆ
ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಕಡಲೆಹಿಟ್ಟನ್ನು ಹಾಕಿ, ಜೊತೆಗೆ ಅರಿಶಿನ, ಉಪ್ಪು, ಹಿಂಗು, ಖಾರ ಪುಡಿ, ಧನಿಯಪುಡಿ ಸೇರಿಸಿ,ತಕ್ಕಷ್ಟು ನೀರನ್ನು ಹಾಕಿ,ಚೆನ್ನಾಗಿ ಕಲಿಸಿಡಬೇಕು. ಹೀಗೆ ಕಲಿಸಿದ ಹಿಟ್ಟಿನಲ್ಲಿ ಒಂದೊಂದೇ ಹೂವನ್ನು ಅದ್ದಿ, ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಬೇಕು.[ ಹದವಾದ ಉರಿಯಲ್ಲಿ ಕರಿಯಬೇಕು]
*ಕಲುಸುವಾಗ ಹಿಟ್ಟು ತುಂಬಾ ನೀರಾಗಿರಬಾರದು.ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರಬೇಕು.
*ಬಿಸಿ ಬಿಸಿಯಾಗಿಯೇ ತಿನ್ನಲು ತುಂಬಾ ರುಚಿಯಾಗಿರುತ್ತದೆ .
ಕಲಿಸಿದ ಹಿಟ್ಟು
No comments:
Post a Comment