INGREDIENTS:
ಅಕ್ಕಿ - 250gm
ಪಾಲಕ್ ಸೊಪ್ಪು -ಎರಡು ಕಟ್ಟು
ಕೊತ್ತಂಬರಿ ಸೊಪ್ಪು - ಒಂದು ಕಟ್ಟು
ಈರುಳ್ಳಿ - ಮೂರು
ತುಂಡರಿಸಿದ ತರಕಾರಿಗಳು - ಒಂದು ಕಪ್
[ಬೀನ್ಸ್ ಹಸಿ ಬಟಾಣಿ, ಕ್ಯಾರಟ್ ಇತ್ಯಾದಿ]
ಹಸಿಮೆಣಸು - 6 [ಖಾರಕ್ಕೆ ಅಗತ್ಯವಿದ್ದಷ್ಟು]
ಹಸಿ ಶುಂಟಿ - ಒಂದು ಸಣ್ಣ ತುಂಡು
ಹುಣಸೆ - ಸ್ವಲ್ಪ
ಚೆಕ್ಕೆ,ಲವಂಗ,ಏಲಕ್ಕಿ -ಒಂದು ಚಮಚ
ಗೋಡಂಬಿ - ಸ್ವಲ್ಪ
ಜೀರಿಗೆ - ಅರ್ದ ಚಮಚ
ಕರಿಬೇವು - ಒಂದು ಗರಿ
ಅರಿಶಿನ - ಚಿಟಿಕೆಯಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - ಅರ್ದ ಚಮಚ
ತುಪ್ಪ/ ಎಣ್ಣೆ
ಮಸಾಲೆ ತಯಾರಿಸಲು :
ಕಾಯಿತುರಿ, ಹಸಿಮೆಣಸು,ಹುಣಸೆ, ಹಸಿಶುಂಟಿ, ಪಾಲಕ್ ಹಾಗು ಕೊತ್ತಂಬರಿ ಸೊಪ್ಪು.
ಮಾಡುವ ವಿದಾನ:
ದಪ್ಪ ತಳದ ಪ್ಯಾನ್ ನಲ್ಲಿ, ತುಪ್ಪ/ಎಣ್ಣೆ ಯನ್ನು ಹಾಕಿ, ಬಿಸಿಯಾದ ಬಳಿಕ ಮೊದಲು ಚೆಕ್ಕೆ ಲವಂಗ ಏಲಕ್ಕಿ ಜೀರಿಗೆ, ಗೋಡಂಬಿ ಚೂರುಗಳು, ಕರಿಬೇವನ್ನು ಹಾಕಿ ಈರುಳ್ಳಿಯನ್ನು ಹುರಿದುಕೊಂಡು,ಮಸಾಲೆಯನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಂಡು ಬಳಿಕ vegetabele's ಹಾಕಿ, ಜೊತೆಗೆ ಉಪ್ಪು ಅರಿಶಿನ ಸಕ್ಕರೆ, ಅಕ್ಕಿಯ ಎರಡರಷ್ಟು ನೀರನ್ನು ಹಾಕಿ, ಒಂದು ಕುದಿ ತೆಗೆದು ಗಟ್ಟಿಯಾಗಿ ಮುಚ್ಹಳ್ಳವನ್ನು ಮುಚ್ಚಿ ಇಪ್ಪತ್ತು ನಿಮಿಷ ಸಣ್ಣ ಉರಿಯಲ್ಲಿ 'ದಂ' ನಲ್ಲಿ ಬೇಯಿಸಬೇಕು. {ಕುಕ್ಕರಲ್ಲಿ ಬೇಯಿಸುವುದಾದರೆ ಎರಡು ಸಿಟಿ ತೆಗೆದರೆ ಸಾಕು}.
No comments:
Post a Comment