BLOG FOLLOWERS

Monday, October 31, 2011

ಸಲಹೆ

*ಮೊಳಕೆ ಕಟ್ಟಿದ ಹೆಸರು ಕಾಳನ್ನು ದಿನವೂ ಸೇವಿಸುತ್ತಿದ್ದರೆ, ಬಲವರ್ದನೆಯಾಗುತ್ತದೆ.
* ಕಿತ್ತಳೆ ರಸವನ್ನು ಸೇವಿಸಿದರೆ ಬಾಯಾರಿಕೆ ಕಡಿಮೆಯಾಗುತ್ತದೆ  ಮತ್ತು ಶಕ್ತಿ ,ಚೈತನ್ಯ  ಉಂಟಾಗುತ್ತದೆ.
* ಚರ್ಮದಲ್ಲಿ ತುರಿಕೆ, ಕಜ್ಜಿಗಳದಾಗ  ಬೇವಿನ ಎಣ್ಣೆಯನ್ನು ಹಚ್ಚಿದರೆ ಗುಣವಾಗುತ್ತದೆ.
*ಇಂಗನ್ನು ಕೊಬ್ಬರಿ ಎಣ್ಣೆಯಲ್ಲಿ ಅರೆದು ಹಣೆಗೆ ಹಚ್ಚಿದರೆ, ತಲೆ ನೋವು ಕಡಿಮೆಯಾಗುತ್ತದೆ.ಕೀಲು ನೋವಿಗೂ ಇದನ್ನು ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
 *ಎರಡು ಬಾದಾಮಿ, ಎರಡು ಗೋಡಂಬಿ, ಒಂದು ಅಂಜೂರ, ನಾಲ್ಕು ಒಣ ದ್ರಾಕ್ಷಿ ಹಾಲಿನಲ್ಲಿ ನೆನಸಿ, ನಂತರ ಅರೆದು
   ಸಕ್ಕರೆ ಬೆರಸಿ ಕುಡಿದರೆ ದೇಹದ ತೂಕ ಹೆಚ್ಚುತ್ತದೆ, ಬಲ ರಕ್ತ ವ್ರದ್ದಿಯಾಗುತ್ತದೆ.
 * ಹಾಲಿನ ಕೆನೆ ಅರಿಶಿನ ಪುಡಿ, ಕಡಲೆ ಹಿಟ್ಟು ಇವನ್ನು ಬೆರಸಿ ಮುಖಕ್ಕೆ ಲೇಪಿಸಿ, ಮಾಲಿಶ್ ಮಾಡಬೇಕು. ಅರ್ದ ಗಂಟೆಯ ನಂತರ ಮುಖ ತೊಳೆದರೆ ಚರ್ಮ ಮೃದು ಹಾಗು ಕಾಂತಿಯುತವಾಗುತ್ತದೆ.
 * ಪ್ರತಿನಿತ್ಯ  ಕಿತ್ತಳೆ ಸೇವಿಸಿದರೆ ರೋಗ ನೀರೋಧಕ  ಶಕ್ತಿ ಹೆಚ್ಚುತ್ತದೆ.
* ಟೈಫಯಿಡ್ , ಕ್ಷಯ ರೋಗಿಗಳಿಗೆ  ಮೋಸಿಂಬೆ ಹಣ್ಣು  ಒಳ್ಳೆಯದು.
* ಹಾಲು ಮತ್ತು  ಪೋಪಾಯಿ ಹಣ್ಣನ್ನು ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ. 
* ಬೆಳ್ಳುಳ್ಳಿ ಯನ್ನು  ನಿತ್ಯವು ಆಹಾರದಲ್ಲಿ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 
* ತುಪ್ಪದಲ್ಲಿ  ಹುರಿದು ಬೆಳ್ಳುಳ್ಳಿಯನ್ನು ಸೇವಿಸಿದರೆ ಜಠರದಲ್ಲಿ ವಾಯು ಸೇರುವುದಿಲ್ಲ,ಗ್ಯಾಸ್ ಟ್ರಬಲ  ಕಡಿಮೆಯಾಗುತ್ತದೆ. 
*ಬೆಳ್ಳುಳ್ಳಿಯನ್ನು ನಿತ್ಯ ಸೇವನೆ ಕ್ಷಯರೋಗದಲ್ಲಿ ರೋಗಿಯ ಕ್ಷಮತೆಯನ್ನು ಹೆಚ್ಚಿಸುತ್ತದೆ.ಗುಣವಾದ ಕ್ಷಯ ರೋಗಿಗಳು 
  ಉಪಯೋಗಿಸಿದರೆ ಮತ್ತೆ ಕ್ಷಯ ರೋಗ ಮರುಕಳಿಸುವುದಿಲ್ಲ.
* ತೂಕ ಕಡಿಮೆಯಾದ ಕ್ಷಯ ರೋಗಿಗಳು ನಿತ್ಯವೂ ಒಣದ್ರಾಕ್ಷಿ, ಅಂಜೂರ, ಜೇನು,ಸಕ್ಕರೆ ತುಪ್ಪವನ್ನು ಬೆರಸಿ ಸೇವಿಸಿದರೆ ತೂಕ ಹೆಚ್ಚಾಗುತ್ತದೆ.
*ಸಿಪ್ಪೆ ಸಹಿತ ಸೇಬನ್ನು ತಿಂದು, ಹಾಲು ಕುಡಿದರೆ ಮಲಬದ್ದತೆ ನಿವಾರಣೆಯಾಗುತ್ತದೆ.
* ಕರಿಬೇವನ್ನು ಅರೆದು ಅದನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಬೇಕು, ಆರಿದ ನಂತರ ಸೋಸಬೇಕು. ಈ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.ಕೂದಲು ಬಲು ಬೇಗನೇ ನೆರೆಯುವುದಿಲ್ಲ.
* ಹಸಿ ಕೊತ್ತಂಬರಿ ಸೊಪ್ಪನ್ನು ಜಗಿಯುತ್ತಿದ್ದರೆ ಬಾಯಿಯ ದುರ್ಗಂದ ದೂರವಾಗುತ್ತದೆ.
* ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿ ಯನ್ನು ಹಾಕಿ ಸೇವಿಸಿದರೆ, ಕೆಮ್ಮು ಕಫಾ ಕಡಿಮೆಯಾಗುತ್ತದೆ.
* ಸಿಹಿ ಅನಾನಸು ಹಣ್ಣಿನ ರಸ ಸೇವಿಸಿದರೆ ಪಚನಶಕ್ತಿ ಹೆಚ್ಚಾಗುತ್ತದೆ. ಧೂಮಪಾನದ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ.
* ತಲೆ ಹೊಟ್ಟಿಗೆ: ಮೆಂತೆ ಯನ್ನು ನೀರಿನಲ್ಲಿ ನೆನೆ ಹಾಕಿ ಅರೆದು ತಲೆಗೆ ಹಚ್ಚಿ, ಅರ್ದ ಗಂಟೆಯ ಬಳಿಕ ಸ್ನಾನ ಮಾಡಿ. ಇದರಿಂದ
   ತಲೆ ಹೊಟ್ಟು ಕಡಿಮೆ ಯಾಗುತ್ತದೆ.
* ನಿಂಬೆ ರಸ, ಜೇನುತುಪ್ಪ ವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಕೊಬ್ಬು ಕರಗುತ್ತದೆ.


Sunday, October 30, 2011

POHVA UPKARI [avalakki oggarane]


ಅವಲಕ್ಕಿ  ಒಗ್ಗರಣೆ:


ಮಾಡಲು ಏನೇನು ಬೇಕು? 
 ಪೇಪರ್  ಅವಲಕ್ಕಿ  - ಒಂದು ಪಾವು 
 ಕಾಯಿತುರಿ           -  ಒಂದು ಹೋಳು 
ಸಾಂಬಾರ್ ಪುಡಿ   -    ಎರಡು ಚಮಚ 
ಅರಿಶಿನ ಪುಡಿ     -    ಚಿಟಿಕೆಯಷ್ಟು 
ಬೆಲ್ಲದ ಪುಡಿ/ ಸಕ್ಕರೆ  -  ಒಂದು ಚಮಚ 
ಹುಣಸೆ ರಸ         -     ಒಂದು ಚಮಚ
ಖಾರ ಪುಡಿ[OPTIONAL] - ಅರ್ದ  ಚಮಚ

ಒಗ್ಗರಣೆಗೆ:
ಕೊಬ್ಬರಿ ಎಣ್ಣೆ     - ಒಂದು ದೊಡ್ಡ ಚಮಚ
ಸಾಸಿವೆ          -   ಕಾಲು ಚಮಚ
ಒಣಮೆಣಸು     -   ಒಂದು
ಶೇಂಗಾ ಬೀಜ   -  ಸ್ವಲ್ಪ
ಕರಿಬೇವು     -    ಒಂದು ಗರಿ 

ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ:
     
 ಒಂದು ಪಾತ್ರೆಯಲ್ಲಿ  ಮೊದಲು ಒಗ್ಗರಣೆಯನ್ನು  ಮಾಡಿಕೊಂಡು,  ಅನಂತರ  ಅವಲಕ್ಕಿ, ಕಾಯಿತುರಿ, ಬೆಲ್ಲ ಉಪ್ಪು, ಅರಿಶಿನ,
 ಸಾಂಬಾರ್ ಪುಡಿ, ಎಲ್ಲವನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು. ಮೇಲಿನಿಂದ  ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು  ಸೇರಿಸಬಹುದು.

 




 ಮಂಡಕ್ಕಿ  ಒಗ್ಗರಣೆ/ ಸುಸ್ಲಾ

 ಬೇಕಾಗುವ   ಪದಾರ್ಥಗಳು 
 ಮಂಡಕ್ಕಿ     -  ಎರಡು ಸೇರು  [  ಮಂಡಕ್ಕಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನಸಿಡಬೇಕು
 ಈರುಳ್ಳಿ  -      ನಾಲ್ಕು   [ ಸಣ್ಣಗೆ ಹೆಚ್ಚಿಡಬೇಕು]
ಹಸಿಮೆಣಸು  -  ಮೂರು   [ ಸಣ್ಣಗೆ ಹೆಚ್ಚಬೇಕು]
 ಹುಣಸೆ ರಸ  -  ಕಾಲು ಕಪ್ 
 ಸಾಸಿವೆ     -  ಅರ್ದ ಚಮಚ 
 ಜೀರಿಗೆ      -  ಅರ್ದ ಚಮಚ 
ಶೇಂಗ ಬೀಜ  - ಸ್ವಲ್ಪ 
ಖಾರ ಪುಡಿ   -  ಒಂದು ಚಮಚ 
ಅರಿಶಿನ   -   ಒಂದು ಚಿಟಿಕೆ
ಸಕ್ಕರೆ    -    ಅರ್ದ ಚಮಚ 
ಪುಟಾಣಿ ಪುಡಿ  -  ಅರ್ದ ಕಪ್ 
ಕಾಯಿ ತುರಿ[OPTIONAL] -  ಸ್ವಲ್ಪ
ಉಪ್ಪು  -  ರುಚಿಗೆ 
 ಎಣ್ಣೆ     ಎರಡು ದೊಡ್ಡ ಚಮಚ 
 ಕೊತ್ತಂಬರಿ ಸೊಪ್ಪು   -  ಸ್ವಲ್ಪ [ಸಣ್ಣಗೆ ಹೆಚ್ಚಬೇಕು]


ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ , ಎಣ್ಣೆ ಹಾಕಿ  ಬಿಸಿಯಾದ ಕೂಡಲೇ, ಸಾಸಿವೆ  ಜೀರಿಗೆ ಕರಿಬೇವು ಶೇಂಗ ಬೀಜ ಹಾಕಿ ಒಗ್ಗರಿಸಬೇಕು.
ನಂತರ, ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸು, ಈರುಳ್ಳಿ  ಹಾಕಿ  ಹುರಿಯಬೇಕು. ಕೂಡಲೇ  ಅದಕ್ಕೆ, ಅರಿಶಿನ ಪುಡಿ, ಖಾರಪುಡಿ ಸೇರಿಸಿ,
ಹುಣಸೆ ರಸವನ್ನು ಹಾಕಬೇಕು.ನಂತರ ,ನೆನೆದ ಮಂಡಕ್ಕಿ  ಹಾಕಿ ಹಗುರವಾಗಿ ಮಗುಚಬೇಕು. ಈಗ ಇದಕ್ಕೆ ರುಚಿಗೆ ಸಕ್ಕರೆ ಉಪ್ಪನ್ನು  ಸೇರಿಸಬೇಕು, ಐದು  ನಿಮಿಷ ಸಣ್ಣ ಉರಿಯಲ್ಲಿ ಇಡಬೇಕು, ನಂತರ ಗ್ಯಾಸ್  ಬಂದ್  ಮಾಡಿ, ಪುಟಾಣಿ ಪುಡಿಯನ್ನು ಹಾಕಿ ನಿದಾನವಾಗಿ ಮಿಕ್ಸ್  ಮಾಡಿ, ಮೇಲಿನಿಂದ ಕಾಯಿತುರಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಮತ್ತೆ ಮತ್ತೆ ತಿನ್ನಲು ಬೇಕನಿಸುವ ಮಂಡಕ್ಕಿ ವಗ್ಗರಣೆ ರೆಡಿ.


 *  ಮೆಣಸಿನಕಾಯಿ ಬಜ್ಜಿ , ಬಿಸಿ ಬಿಸಿ  ಚಹಾದೊಂದಿಗೆ  ಮಂಡಕ್ಕಿ ವಗ್ಗರಣೆ  ಸವಿಯಲು  ಬಲು ರುಚಿಯಾಗಿರುತ್ತದೆ.

PALAK RICE

ಪಾಲಕ್  ರೈಸ್/ ಪಲಾವ್ 

INGREDIENTS:    

ಅಕ್ಕಿ       -   250gm 
ಪಾಲಕ್ ಸೊಪ್ಪು   -ಎರಡು ಕಟ್ಟು 
ಕೊತ್ತಂಬರಿ ಸೊಪ್ಪು  - ಒಂದು ಕಟ್ಟು 
ಈರುಳ್ಳಿ     -       ಮೂರು 
[ಉದ್ದಕ್ಕೆ ಹೆಚ್ಚಿಡಬೇಕು]
ತುಂಡರಿಸಿದ ತರಕಾರಿಗಳು  - ಒಂದು  ಕಪ್ 
[ಬೀನ್ಸ್ ಹಸಿ ಬಟಾಣಿ, ಕ್ಯಾರಟ್  ಇತ್ಯಾದಿ]
ಹಸಿಮೆಣಸು   -    6 [ಖಾರಕ್ಕೆ ಅಗತ್ಯವಿದ್ದಷ್ಟು]
ಹಸಿ ಶುಂಟಿ   -   ಒಂದು ಸಣ್ಣ ತುಂಡು
ಹುಣಸೆ         -   ಸ್ವಲ್ಪ 
ಚೆಕ್ಕೆ,ಲವಂಗ,ಏಲಕ್ಕಿ -ಒಂದು ಚಮಚ
ಗೋಡಂಬಿ    -   ಸ್ವಲ್ಪ
ಜೀರಿಗೆ     -     ಅರ್ದ ಚಮಚ
ಕರಿಬೇವು   -    ಒಂದು ಗರಿ 
ಅರಿಶಿನ     -  ಚಿಟಿಕೆಯಷ್ಟು 
ಉಪ್ಪು -   ರುಚಿಗೆ ತಕ್ಕಷ್ಟು
ಸಕ್ಕರೆ   -  ಅರ್ದ ಚಮಚ
ತುಪ್ಪ/ ಎಣ್ಣೆ
ಮಸಾಲೆ ತಯಾರಿಸಲು :
ಕಾಯಿತುರಿ, ಹಸಿಮೆಣಸು,ಹುಣಸೆ, ಹಸಿಶುಂಟಿ, ಪಾಲಕ್ ಹಾಗು ಕೊತ್ತಂಬರಿ ಸೊಪ್ಪು.




 ಮಾಡುವ ವಿದಾನ:
 ದಪ್ಪ ತಳದ ಪ್ಯಾನ್ ನಲ್ಲಿ, ತುಪ್ಪ/ಎಣ್ಣೆ ಯನ್ನು ಹಾಕಿ, ಬಿಸಿಯಾದ ಬಳಿಕ ಮೊದಲು ಚೆಕ್ಕೆ ಲವಂಗ ಏಲಕ್ಕಿ  ಜೀರಿಗೆ, ಗೋಡಂಬಿ ಚೂರುಗಳು, ಕರಿಬೇವನ್ನು ಹಾಕಿ ಈರುಳ್ಳಿಯನ್ನು ಹುರಿದುಕೊಂಡು,ಮಸಾಲೆಯನ್ನು ಸೇರಿಸಿ  ಹಸಿ ವಾಸನೆ ಹೋಗುವವರೆಗೆ  ಹುರಿದುಕೊಂಡು ಬಳಿಕ vegetabele's ಹಾಕಿ, ಜೊತೆಗೆ ಉಪ್ಪು ಅರಿಶಿನ ಸಕ್ಕರೆ, ಅಕ್ಕಿಯ ಎರಡರಷ್ಟು ನೀರನ್ನು ಹಾಕಿ, ಒಂದು ಕುದಿ ತೆಗೆದು ಗಟ್ಟಿಯಾಗಿ ಮುಚ್ಹಳ್ಳವನ್ನು ಮುಚ್ಚಿ  ಇಪ್ಪತ್ತು  ನಿಮಿಷ ಸಣ್ಣ ಉರಿಯಲ್ಲಿ  'ದಂ' ನಲ್ಲಿ ಬೇಯಿಸಬೇಕು. {ಕುಕ್ಕರಲ್ಲಿ  ಬೇಯಿಸುವುದಾದರೆ ಎರಡು ಸಿಟಿ ತೆಗೆದರೆ ಸಾಕು}.






Saturday, October 29, 2011

CABBAGE SUKKE


 ಕ್ಯಾಬೇಜ್  ಸುಕ್ಕೆ



ಮಾಡಲು ಏನೇನು  ಬೇಕು:

ಕ್ಯಾಬೇಜ್ -  ಒಂದು ಸಣ್ಣ ಗಾತ್ರದ್ದು [ ಚೌಕಾಕಾರದ ಹದ ಗಾತ್ರದ ತುಂಡುಗಳು]
ಅಲೂಗಡ್ಡೆ  - ಎರಡು  
ಈರುಳ್ಳಿ     -  ಎರಡು 

ಒಗ್ಗರೆಣೆಗೆ:

ಎಣ್ಣೆ   - ಒಂದು ದೊಡ್ಡ ಚಮಚ 
ಸಾಸಿವೆ -  ಕಾಲು ಚಮಚ 
ಕರಿಬೇವು  - ಒಂದು ಗರಿ 


     ಮಸಾಲೆಗೆ ಬೇಕಾಗುವ  ಪದಾರ್ಥಗಳು 

   ಕಾಯಿತುರಿ  - ಒಂದು ಕಪ್ 
   ಹುರಿದ ಬ್ಯಾಡಗಿ ಮೆಣಸು -  ಎರಡು
   ಹುರಿದ ಗುಂಟೂರ್ ಮೆಣಸು - ಎರಡು 
   ಹುಣಸೆ   - ಸ್ವಲ್ಪ  
   ಬೆಲ್ಲ      -  ಅರ್ದ ಚಮಚ 
   ಉಪ್ಪು  -  ರುಚಿಗೆ 
   ಧನಿಯ  -  ಒಂದು ಚಮಚ 
   ಉದ್ದಿನಬೇಳೆ - ಅರ್ದ ಚಮಚ 
[ ಧನಿಯಾ, ಉದ್ದಿನಬೇಳೆಯನ್ನು ಎಣ್ಣೆ ಹಾಕಿ ಹುರಿದಿಡಬೇಕು]


ಕ್ಯಾಬೇಜ್ ಸುಕ್ಕೆ ತಯಾರಿಸುವ ವಿಧಾನ 

ಮಸಾಲೆಗೆ ತಿಳಿಸಿದ ಪದಾರ್ಥಗಳ್ಳನ್ನು ಮಿಕ್ಸಿ ಗೆ ಹಾಕಿ ರುಬ್ಬಿಟ್ಟುಕೊಳ್ಳಬೇಕು [ ಮಸಾಲೆ ಮಿಕ್ಸಿ ಮಾಡುವಾಗ, ಕೊನೆಯಲ್ಲಿ, ಹುರಿದಿಟ್ಟ ಧನಿಯ ಹಾಗು ಉದ್ದಿನಬೇಳೆಯನ್ನು ಹಾಕಿ ರುಬ್ಬಬೇಕು]ಕಡಿಮೆ ನೀರು ಬಳಸಿ ರುಬ್ಬಬೇಕು.



ಬಾಣಲೆಯಲ್ಲಿ, ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಂಡು, ಮೊದಲು ಈರುಳ್ಳಿಯನ್ನು ಹಾಕಿ ಹುರಿಯಬೇಕು. ನಂತರ ಬೇಯಿಸದ ಕ್ಯಾಬೇಜ್, ಅಲೂಗಡ್ಡೆ ತುಂಡುಗಳ್ಳನ್ನು, ರುಬ್ಬಿಟ್ಟ ಮಸಾಲೆ ಅರಿಶಿನ ಉಪ್ಪು ಬೆಲ್ಲ ಹಾಕಿ ಚೆನ್ನಾಗಿ ಮಗುಚಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ನೀರೆಲ್ಲಾ ಇಂಗಿ ಮಸಾಲೆ  ಗಟ್ಟಿಯಾದರೆ ಕ್ಯಾಬೇಜ್ ಸುಕ್ಕೆ ತಯಾರ್.  


* ಇದೇ ರೀತಿ ಸಣ್ಣ ಸಣ್ಣ ಆಲೂಗೆಡ್ಡೆ,ಸಾಂಬ್ರಾಣಿಕಾಯಿ, ಅಲಸಂದೆ ಕಾಯಿ ಬಾಳೆಕಾಯಿ ಹುರಳಿಕಾಯಿ, ಹೂಕೋಸು ಇತ್ಯಾದಿ  ತರಕಾರಿಗಳಿಂದ ಸುಕ್ಕೆ ಮಾಡಬಹುದು. 
* ಕೂಕ್ಕರ ಲ್ಲಿ  ಮಾಡುವುದಾದರೆ, ಮೊದಲು ಒಗ್ಗರಣೆ ಮಾಡಿಕೊಂಡು, ಹಸಿ ತರಕಾರಿಗಳ್ಳನ್ನು ಹಾಕಿ .ಮಸಾಲೆ, ಅರಿಶಿನ ಉಪ್ಪು ಚೂರು ಬೆಲ್ಲ ಹಾಕಿ,ಸ್ವಲ್ಪವೇ ನೀರನ್ನು ಹಾಕಿ, ಮುಚಳವನ್ನು ಮುಚ್ಚಿ, ಎರಡು ಸೀಟಿ ತೆಗೆದರೆ ಪಲ್ಯ ತಯಾರ್.


ಟೊಮೇಟೊ ಬಾತ್

ಟೊಮೇಟೊ  ಬಾತ್ 
INGREDIENTS  FOR  TOMATO BATH: 

ಅಕ್ಕಿ      -   ಒಂದು ಲೋಟ
ಟೊಮೇಟೊ ಹಣ್ಣು   -   ಆರು
ಈರುಳ್ಳಿ      -     ಎರಡು
ಹಸಿ ಬಟಾಣಿ ---ಅರ್ದ ಕಪ್
ಖಾರದ ಪುಡಿ  -  ಒಂದು ಚಮಚ
ಪುಲಾವ್ ಮಸಾಲ -  ಒಂದು ದೊಡ್ಡ ಚಮಚ
ಸಾಸಿವೆ
ಜೀರಿಗೆ 
ಕರಿಬೇವು 
ತುಪ್ಪ/ ಎಣ್ಣೆ
ಉಪ್ಪು.


FOR SPICY PASTE:

ಚೆಕ್ಕೆ -  ಒಂದಿಂಚು
ಲವಂಗ - ಎರಡು
ಹಸಿಮೆಣಸು -  ಎರಡು
ಬೆಳುಳ್ಳಿ   -   ಸಣ್ಣ ಒಂದು ಗೆಡ್ಡೆ[OPTIONAL]
ತುರಿದ ಹಸಿಶುಂಟಿ  -ಅರ್ದ ಚಮಚ
ಪುದಿನ ಎಲೆಗಳು  -  ಕಾಲು ಕಪ್
ಕಾಯಿತುರಿ     -     ಅರ್ದ ಕಪ್.
ಮೇಲೆ ತಿಳಿಸಿದ ಎಲ್ಲ ಪದರ್ಥಗಳ್ಳನ್ನು,ಮಿಕ್ಸಿ ಗೆ ಹಾಕಿ ಪೇಸ್ಟ್  ಮಾಡಿಟ್ಟುಕೊಳ್ಳಬೇಕು.




HOW TO MAKE TOMATO BATH:

ಕುಕ್ಕೆರ್  ಪ್ಯಾನನಲ್ಲಿ  ತುಪ್ಪ/ಎಣ್ಣೆ ಯನ್ನು ಹಾಕಿ, ಬಿಸಿಯಾದ ಕೂಡಲೇ,ಸಾಸಿವೆ ಜೀರಿಗೆ, ಕರಿಬೇವು,  ಸಣ್ಣಗೆ ಹೆಚ್ಚಿದ ಈರುಳ್ಳಿ  ಹಾಕಿ ಹುರಿದುಕೊಳ್ಳಬೇಕು. ನಂತರ SPICY PASTE ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೂ ಹುರಿದುಕೊಂಡು, ಮಿಕ್ಕ ಪದರ್ಥಗಳ್ಳನ್ನು ಒಂದೊಂದಾಗಿ ಹಾಕುತ್ತ ಬಾಡಿಸಿಕೊಳ್ಳಬೇಕು[ ಅಕ್ಕಿ, ಹಸಿ ಬಟಾಣಿ] ಬಳಿಕ  ಖಾರ ಪುಡಿ, ಪಲಾವ್ ಮಸಾಲ ಪುಡಿ, ಉಪ್ಪು  ಹಾಗು ಅಕ್ಕಿಯ ಎರಡು ಅಳತೆ  ನೀರನ್ನು ಹಾಕಿ, ಇಪ್ಪತ್ತರಿಂದ  ಇಪ್ಪತ್ತೈದು  ನಿಮಿಷ ಸಣ್ಣ ಉರಿಯಲ್ಲಿ 'ದಂ'
ಕೊಟ್ಟು  ಬೇಯಿಸಿದರೆ, ಟೊಮೇಟೊ ಬಾತ್  READY.



*ತುರಿದ  ಪನ್ನೀರ್ ನಿಂದ  ಅಲಂಕರಿಸಬಹುದು.


Friday, October 28, 2011

ಸೋರೆಕಾಯಿ ಕೊದ್ದೆಲ

                                               ಸೋರೆಕಾಯಿ
 
 ಕೊದ್ದೆಲ ಮಾಡಲು ಬೇಕಾಗುವ ಪದಾರ್ಥಗಳು:
  
 ಒಂದು ಸಣ್ಣ ಗಾತ್ರದ ಸೋರೆಕಾಯಿ -ಸಿಪ್ಪೆ ತೆಗೆದು ಹದ ಸೈಜಿನ  ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಬೇಕು.
 ತೊಗರಿ ಬೇಳೆ - ಒಂದು ಸಣ್ಣ ಕಪ್
 ಕಾಯಿತುರಿ     -  ಒಂದು  ಹೋಳು.
 ಹುರಿದ ಒಣಮೆಣಸು -    ಆರು ಅಥವಾ ಎಂಟು 
 ಹುಣಸೆ   -ಸ್ವಲ್ಪ
 ಬೆಲ್ಲದ ಪುಡಿ  - ಒಂದು ಸಣ್ಣ ಚಮಚ
 ಉಪ್ಪು 
ಒಗ್ಗರಣೆಗೆ : ತೆಂಗಿನ ಎಣ್ಣೆ , ಒಂದು ಜಜ್ಜಿದ ಬೆಳ್ಳುಳ್ಳಿ ಗೆಡ್ಡೆ.



 ಮಾಡುವ ರೀತಿ:
ಸೋರೆಕಾಯಿ ತುಂಡುಗಳ್ಳನ್ನು ತೊಗರಿ ಬೇಳೆಯೊಂದಿಗೆ ಬೇಯಿಸಿಟ್ಟಿಕೊಳ್ಳಬೇಕು.
ಕಾಯಿತುರಿ ,ಹುರಿದ ಒಣಮೆಣಸು,ಹುಣಸೆಹುಳಿ,ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
ಬೆಂದ ಹೋಳುಗಳಿಗೆ , ರುಬ್ಬಿಟ್ಟ  ಮಸಾಲೆಯನ್ನು ಬೆರಸಿ ಬೇಕಾದಷ್ಟೇ ನೀರನ್ನು ಹಾಕಿ [ಹೆಚ್ಚು ತೆಳ್ಳಗಾಗ ಕೂಡದು], ಬೆಲ್ಲದಪುಡಿ ಉಪ್ಪನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು.  ಕೊನೆಯಲ್ಲಿ ಚನ್ನಾಗಿ ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಮಾಡಿ  ಹಾಕಬೇಕು.







Thursday, October 27, 2011

MASHROOM PANEER RICE

ಮಶ್ರೂಂ  ಪನ್ನೀರ್    ರೈಸ್  





 ingredients:


ಬಾಸ್ಮತಿ ಅಕ್ಕಿ   -   ಒಂದು ಲೋಟ
ಬಟ್ಟನ್ ಮಶ್ರೂಂ  -  ಒಂದು ಕಪ್[ಬೇಯಿಸಿಡಬೇಕು]
ಪನ್ನೀರ್ ತುಂಡುಗಳು - ಒಂದು ಕಪ್
ತೆಳ್ಳಗೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿ  - ಮೂರು
ಸಣ್ಣಗೆ ತುಂಡರಿಸಿದ ಟೊಮೇಟೊ   -  ಒಂದು
ಪುದಿನಾ ಸೊಪ್ಪು  -  ಅರ್ದ ಕಪ್
ಶುಂಟಿ ಮತ್ತು ಬೆಳ್ಳುಳ್ಳಿ ಪೇಸ್ಟ್   - ಒಂದು ಚಮಚ
ಚೆಕ್ಕೆ, ಲವಂಗ, ಏಲಕ್ಕಿ   -  ಒಂದು ಚಮಚ
ಗರಂ ಮಸಾಲೆ ಪುಡಿ    -    ಎರಡು ದೊಡ್ಡ ಚಮಚ
ತುಪ್ಪ        -        ನಾಲ್ಕು ದೊಡ್ಡ ಚಮಚ 
ಉಪ್ಪು       -        ರುಚಿಗೆ
ಕಾಯಿತುರಿ  ಪೇಸ್ಟ್ -   ಅರ್ದಕಪ್  ಅಥವಾ  ಎರಡು ದೊಡ್ಡ ಚಮಚ ಗೋಡಂಬಿ ಪೇಸ್ಟ್ 


HOW TO MAKE MUSHROOM PANEER  RICE


ಕುಕ್ಕರ್  ಪ್ಯಾನ್ ನಲ್ಲಿ  ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು, ಚೆಕ್ಕೆ ಲವಂಗ ಏಲಕ್ಕಿ,ಈರುಳ್ಳಿ,ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹುರಿದುಕೊಂಡು,ನಂತರ ಪನ್ನೀರ್ ತುಂಡುಗಳು, ಬೇಯಿಸಿಟ್ಟ ಮಶ್ರೂಂ ನ್ನು ಹಾಕಿ,ಜೊತೆಗೆ ನೆನಸಿಟ್ಟ ಅಕ್ಕಿ, ಅರಿಶಿನ ಗರಂ ಮಸಾಲೆಪುಡಿ,  ಒಂದೊಂದಾಗಿ   ಹಾಕಿ ಚೆನ್ನಾಗಿ ಹುರಿದುಕೊಂಡು,  ಪುದಿನ ಸೊಪ್ಪು,ಕಾಯಿತುರಿ ಪೇಸ್ಟ್/ಗೋಡಂಬಿ ಪೇಸ್ಟ್ , ರುಚಿಗೆ ಹಿಡಿಸುವಷ್ಟು ಉಪ್ಪು,ಎರಡುವರೆ  ಲೋಟ ನೀರನ್ನು ಹಾಕಿ, ಬೇಯಲು ಇಡಬೇಕು. ಒಂದು ಕುದಿ ಬಂದ ಬಳಿಕ   
ಉರಿಯನ್ನು ಮಂದ ಮಾಡಿ, ಮುಚ್ಚಳವನ್ನು ಗಟ್ಟಿ ಮುಚ್ಚಿ, ಇಪ್ಪತ್ತು ನಿಮಿಷ' ದಂ' ನಲ್ಲಿ ಬೇಯಿಸಬೇಕು.


* ಗಟ್ಟಿ ಸಿಹಿ ಮೊಸರು , ಮೊಸರು ಬಜ್ಜಿ, ಲೈಟ್ ಗ್ರೇವಿ  ಪದಾರ್ಥ ಗಳೊಂದಿಗೆ ತಿನ್ನಲು ಒಳ್ಳೆಯದಾಗುತ್ತದೆ.







FRIED ONION RICE


ಫ್ರೈಡ್   ಅನಿಯನ್   ರೈಸ್


ಮಾಡಲು ಏನೇನು ಬೇಕು?
ಬಾಸ್ಮತಿ ಅಕ್ಕಿ  -   ಒಂದು ಲೋಟ 
ಈರುಳ್ಳಿ         -    ನಾಲ್ಕು [ಉದ್ದಕ್ಕೆ ಕತ್ತರಿಸಿದ ತುಂಡುಗಳು]
ಈರುಳ್ಳಿ         -    ಒಂದು [ಸಣ್ಣಗೆ ಹೆಚ್ಚಿ, ತುಪ್ಪದಲ್ಲಿ ಕೆಂಪಗೆ ಹುರಿದಿಟ್ಟುಕೊಳ್ಳಬೇಕು]
ದಾಲ್ಚಿನಿ ಎಲೆ   -   ಎರಡು 
ಸಾಸಿವೆ          -    ಕಾಲು ಚಮಚ 
ಜೀರಿಗೆ           -     ಅರ್ದ ಚಮಚ 
 ಒಣಮೆಣಸು ತುಂಡುಗಳು  -  ಒಂದು ಚಮಚ 
ಗರಂ ಮಸಾಲೆ ಪುಡಿ     -    ಒಂದು ಚಮಚ 
ಗೋಡಂಬಿ ಚೂರೂ      -      ಎರಡು ಚಮಚ 
ಉಪ್ಪು                         -    ರುಚಿಗೆ 
ತುಪ್ಪ /ಎಣ್ಣೆ               -     ಮೂರು ದೊಡ್ಡ ಚಮಚ


ಮಾಡುವ  ರೀತಿ:


ಅನ್ನವನ್ನು ಮೊದಲೇ  ತಯಾರಿಸಿಟ್ಟಿಕೊಳ್ಳಬೇಕು.
ದಪ್ಪ ತಳದ ಬಾಣಲೆಯಲ್ಲಿ, ತುಪ್ಪ/ಎಣ್ಣೆಯನ್ನು ಹಾಕಿ,ಬಿಸಿಯಾದ ಬಳಿಕ         ಸಾಸಿವೆ, ಜೀರಿಗೆ, ಒಣಮೆಣಸು ಚೂರೂ , ದಲ್ಚಿನಿ ಎಲೆ ,
 ಉದ್ದಕ್ಕೆ ಹೆಚ್ಚಿದ ಈರುಳ್ಳಿ ಯನ್ನು ಹಾಕಿ, ಚೆನ್ನಾಗಿ ಹುರಿದುಕೊಂಡು, ಬಳಿಕ ಗರಂ ಮಸಾಲೆ ಪುಡಿ, ಉಪ್ಪನ್ನು ಸೇರಿಸಿ, ಕಲಿಸಿ, ಮೇಲಿನಿಂದ ಹುರಿದ ಗೋಡಂಬಿ, ಹುರಿದ ಈರುಳ್ಳಿಯನ್ನು ಹಾಕಿ ಬೆರಸಿದರೆ, ರುಚಿಯಾದ ಈರುಳ್ಳಿ ಫ್ರೈಡ್  ರೈಸ್  ರೆಡಿ .
 

*   ಮೊಸರು ಬಜ್ಜಿ , ಮಸಾಲೆ ಭರಿತ ಪಲ್ಯಗಳು, ಈ  ಅನ್ನದೊಂದಿಗೆ ತಿನ್ನಲು ಒಳ್ಳೆಯದಾಗುತ್ತದೆ.

Wednesday, October 26, 2011

ಫೆಣೋರಿ

ಫೆಣೋರಿ

  ಬೇಕಾಗುವ ಪದಾರ್ಥಗಳು: 
ಜರಡಿ ಹಿಡಿದ ಮೈದಾ  -  ಒಂದು ಲೋಟ  
ಪುಡಿ ಸಕ್ಕರೆ     -    ಒಂದು ಲೋಟ  
ಬೆಣ್ಣೆ     -       ಕಾಲು ಲೋಟ.

ಸಾಟೆ ಹಚ್ಚಲು: 
ಅಕ್ಕಿ ಹಿಟ್ಟು - ಕಾಲು ಲೋಟ 
ತುಪ್ಪ   -  ಕಾಲು ಲೋಟ 
ಕರಿಯಲು ಎಣ್ಣೆ.

ಮಾಡುವ ರೀತಿ:

ಮೈದಾ, ಬೆಣ್ಣೆ, ಉಪ್ಪು, ಸ್ವಲ್ಪ  ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಬೇಕು.ಹೀಗೆ ಕಲಿಸಿದ ಹಿಟ್ಟಿನಿಂದ ಸಣ್ಣ ಸಣ್ಣ ಕಣಕಗಳ್ಳನ್ನು ಮಾಡಿ
ತೆಳ್ಳಗೆ  ಲಟ್ಟಿಸಿ ಕೊಳ್ಳಬೇಕು. ಈ ರೀತಿ ಲಟ್ಟಿಸಿದ ಚಪಾತಿ ಗಳ್ಳನ್ನು  ಒಂದರ ಮೇಲೆ  ಒಂದು ಐದು ಚಪಾತಿಗಳ್ಳನ್ನು ಸ್ವಲ್ಪ ಅಂಚನ್ನು
ಬಿಟ್ಟು  ಜೋಡಿಸಿ ಕೊಳ್ಳಬೇಕು. ಹೀಗೆ ಒಂದರ ಮೇಲೊಂದು ಚಪಾತಿ ಗಳನ್ನು ಇಡುವಾಗ ಪ್ರತಿಯೊಂದು ಚಪಾತಿಯ





ಮೇಲೂ ತುಪ್ಪದ ಸಾಟೆಯನ್ನು  ಹಚ್ಚಿ , ಅಕ್ಕಿ ಹಿಟ್ಟನ್ನು ಸ್ವಲ್ಪ ಉದುರಿಸಬೇಕು.  ನಂತರ ಹಾಸಿಗೆ ಮಡಚಿದ ಹಾಗೆ ಮಡಚಿ ಕೊಂಡು ಅರ್ದ ಇಂಚು ದಪ್ಪ ಕತ್ತರಿಸಿ ತುಂಡು ಗಳ್ಳನ್ನು ಮಾಡಿ, ಹಗುರವಾಗಿ ಲಟ್ಟಿಸಿ , ಸಣ್ಣ ಉರಿಯಲ್ಲಿ ಕರಿಯಬೇಕು.
ಹೀಗೆ ಕರಿದಿಟ್ಟ ಪೂರಿ ಗಳು ಸ್ವಲ್ಪ ತಣಿದ ಬಳಿಕ, ಸಕ್ಕರೆ  ಹುಡಿಯಲ್ಲಿ ಹೊರಳಿಸಿ ತೆಗೆದಿಡಬೇಕು. ಸಕ್ಕರೆ ಪಾಕ ತಯಾರಿಸಿ ಕರಿದ ಫೇಣಿ ಗಳ್ಳನ್ನು  ಪಾಕದಲ್ಲಿ ಅದ್ಡಿ  ತೆಗೆದಿಡಬಹುದು.


* ಸಕ್ಕರೆ ಹೂರಣ ಮಾಡುವ ರೀತಿ -  ಒಂದು ಅಳತೆ ಸಕ್ಕರೆಗೆ  ಎರಡು ಏಲಕ್ಕಿ ಯನ್ನು ಹಾಕಿ  ಮಿಕ್ಸಿಯಲ್ಲಿ ನಯವಾಗಿ ಪುಡಿ ಮಾಡಬೇಕು.
* ಸಕ್ಕರೆ ಪಾಕ ಮಾಡುವ ರೀತಿ  -    ಒಂದು ಅಳತೆ ಸಕ್ಕರೆಗೆ ಕಾಲು ಅಳತೆ ನೀರನ್ನು ಹಾಕಿ, ಕುದಿಸಿ ಎಳೆ ಪಾಕವನ್ನು ತಯಾರಿಸಬೇಕು.



 

ಮೊಸರನ್ನ

ಮೊಸರನ್ನ

 ಮಾಡಲು ಏನೇನು ಬೇಕು?

ಅಕ್ಕಿ   -    ಒಂದು ಲೋಟ 
ಹಸಿಮೆಣಸು    -    ನಾಲ್ಕು 
ಸಿಹಿ ಮೊಸರು    -  ಎರಡುವರೆ ಲೋಟ 
 ಕಾಯಿತುರಿ  -   ಸ್ವಲ್ಪ
 ಉಪ್ಪು     -     ರುಚಿಗೆ 
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು  -  ಸ್ವಲ್ಪ
 ಒಗ್ಗರಣೆಗೆ :-   ತುಪ್ಪ, ಸಾಸಿವೆ, ನೆನಸಿದ ಕಡಲೆಬೇಳೆ , ಉದ್ದಿನಬೇಳೆ, ಕರಿಬೇವು.
ಮಾಡೋದು ಹೇಗೆ?
  ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಅನ್ನವನ್ನಾಗಿ  ಮಾಡಿಟ್ಟುಕೊಳ್ಳಬೇಕು.
  ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗು  ಮೊಸರನ್ನು  ಅನ್ನಕ್ಕೆ ಹಾಕಿ ಕಳಿಸಿಡಬೇಕು.
  ನಂತರ  ಒಗ್ಗರಣೆ ಸವ್ಟಿನಲ್ಲಿ , ತುಪ್ಪವನ್ನು ಹಾಕಿ, ಸಾಸಿವೆ ಕಡಲೆಬೇಳೆ ,ಉದ್ದಿನಬೇಳೆ, ಕರಿಬೇವು - ಒಗ್ಗರಣೆ  ಮಡಿ ಅನ್ನಕ್ಕೆ  ಹಾಕಬೇಕು .ಕೊನೆಯಲ್ಲಿ ಉಪ್ಪು, ಕಾಯಿತುರಿ, ಕೊತ್ತಂಬರಿ ಸೊಪ್ಪನ್ನು  ಸೇರಿಸಿ, ಕಲಿಸಿದರೆ  ತಂಪಾದ ,ರುಚಿ ರುಚಿಯಾದ ಮೊಸರನ್ನ ಸಿದ್ದ.
    

* ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು  ತಿನ್ನುವಾಗ  ಹಾಕಿಕೊಳ್ಳಬಹುದು.

Tuesday, October 25, 2011

YELLOW FRIED RICE

YELLOW  FRIED   RICE




ಮಾಡಲು ಏನೇನು ಬೇಕು?

ಬಾಸ್ಮತಿ ಅಕ್ಕಿ    -  ಒಂದು ಕಪ್ 
ಹಸಿರು ಬಟಾಣಿ 
ಸಣ್ಣಗೆ ಹೆಚ್ಚಿದ ಕ್ಯಾರೆಟ್ ಹಾಗು ಬೀನ್ಸ್    -  ಎಲಾ ಸೇರಿ ಅರ್ದ ಕಪ್ 
ಎಣ್ಣೆ     - ಮೂರು ದೊಡ್ಡ ಚಮಚ 
ಹಿಂಗು -  ಚಿಟಿಕೆಯಷ್ಟು 
ಜೀರಾ  - ಒಂದು ಸಣ್ಣ ಚಮಚ 
ಸೀಳಿದ   ಹಸಿಮೆಣಸು  -   ಎರಡು
ದಾಲ್ಚಿನಿ ಎಲೆ      -  ಒಂದು
ಚೆಕ್ಕೆ, ಲವಂಗ 
ಅರಿಶಿನ ಉಪ್ಪು.



ಮಾಡುವ ವಿದಾನ:

ದಪ್ಪ ತಳದ ಪ್ಯಾನ್ ನಲ್ಲಿ ನಾಲ್ಕು ಚಮಚ ಎಣ್ಣೆ  ಯನ್ನು ಹಾಕಿ, ಕಾಯಿಸಬೇಕು.ನಂತರ  ಜೀರಿಗೆ, ಹಿಂಗು ಲವಂಗ ಚೆಕ್ಕೆ ದಾಲ್ಚಿನಿ ಎಲೆ, ಹಸಿಮೆಣಸು ಹೆಚ್ಚಿದ ತರಕಾರಿಗಳ್ಳನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು, ಆ ಕೂಡಲೇ ಅಕ್ಕಿಯನ್ನು ಹಾಕಿ ,ಜೊತೆಗೆ ಅರಿಶಿನ ಹಾಗು ಉಪ್ಪನ್ನು ಬೆರಸಿ ಚೆನ್ನಾಗಿ  ಮಗುಚಿ, ಎರಡುವರೆ ಲೋಟ ನೀರನ್ನು ಹಾಕಿ ಒಂದು ಕುದಿ ತೆಗೆದು, ನಂತರ ಸಣ್ಣ ಉರಿಯಲ್ಲಿ ಇಪ್ಪತ್ತು ನಿಮಿಷ 'ದಂ' ಕೊಟ್ಟು ಬೇಯಿಸಬೇಕು.



*   ಈ ಅನ್ನಕ್ಕೆ  ಮೊಸರು ಹಾಕಿ ಸಲಾಡ್,  ಪನ್ನೀರ್ ಪಲ್ಯ , ಮಶ್ರೂಂ ಪಲ್ಯ   ರಾಜಮಾ  ಚೆನ್ನಾಗಿ ಹೊಂದಿಕೊಳ್ಳುತ್ತದೆ.





ಬೇಸನ್ ಪಾರೆ



ಬೇಸನ್    ಪಾರೆ   [ರಿಬ್ಬನ್  -  ವಿದಾನ   ಎರಡು]
 -  snack item- spicy &crunchy

ತಯಾರಿಸಲು  ಬೇಕಾಗುವ  ಪದಾರ್ಥಗಳು :
ಬೇಸನ್/ ಕಡ್ಲೆ ಹಿಟ್ಟು     -  ಒಂದು ಕಪ್
ಮೈದಾ                     -  ಒಂದು ಕಪ್
ಚಿರೋಟಿ ರವೆ             - ಎರಡು ದೊಡ್ಡ ಚಮಚ
ಕೆಂಪು ಮೆಣಸುಪುಡಿ    -   ಒಂದು ಚಮಚ 
ಹಿಂಗು                     - ಚಿಟಿಕೆಯಷ್ಟು
ಒಂಕಾಳು             -     ಒಂದು ದೊಡ್ಡ ಚಮಚ             
ಎಣ್ಣೆ                   -      ನಾಲ್ಕು ಚಮಚ
ಕಲೆಸಲು  ನೀರು    -     ಅರ್ದ ಕಪ್ 
ಕರಿಯಲು ಎಣ್ಣೆ


ಮಾಡುವ  ವಿದಾನ:

ಒಂದು ಪಾತ್ರೆಯಲ್ಲಿ  ಕಡಲೆಹಿಟ್ಟು,ಮೈದಾ ,ಚಿರೋಟಿ ರವೆ, ಅರಿಶಿನ ,ಹಿಂಗು, ಕಾರಪುಡಿ, ಒಮಿನಕಾಳು  ಉಪ್ಪು ನಾಲ್ಕು     ಚಮಚ ಎಣ್ಣೆ ಯನ್ನು ಹಾಕಿ ನೀರನ್ನು ಬೆರಸಿ, ಚಪಾತಿ  ಹಿಟ್ಟಿನ ಹದಕ್ಕೆ  ಕಲಿಸಿಕೊಂಡು, ಅರ್ದ ಗಂಟೆ  ಮುಚ್ಚಿಡಬೇಕು
ನಂತರ  ಆ ಹಿಟ್ಟಿನಿಂದ ಸಣ್ಣ ಸಣ್ಣ  ಕಣಕ ಮಾಡಿ, ಚಪಾತಿಯ ತರಹ ಲಟ್ಟಿಸಿಕೊಂಡು,  ಅರ್ದ ಇಂಚು ಅಗಲ ಮೂರೂ ಇಂಚು
ಉದ್ದದ  ತುಂಡುಗಳನ್ನಾಗಿ ಕತ್ತರಿಸಿಕೊಳ್ಳಬೇಕು. ಹೀಗೆ ಕತ್ತರಿಸಿದ ತುಂಡುಗಳನ್ನು  ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕರಿಯಬೇಕು .


                                                                                             
                                                                                                  

                                                                                            
  



ಗೋಬೀ ಪಕೋಡಿ

ಗೋಬೀ  PAKODI





ಮಾಡಲು ಏನೆಲ್ಲಾ  ಬೇಕು? 
ಕಾಲಿಫ್ಳವೆರ್     -    ಮೀಡಿಯಂ  ಗಾತ್ರದ್ದು ಒಂದು 
[ಹೂವನ್ನು ಬಿಡಿಸಿ  ಉಪ್ಪು ನೀರಿನಲ್ಲಿ  ಇಪ್ಪತ್ತು  ನಿಮಿಷ  ಹಾಕಿಡಬೇಕು  ಹೀಗೆ  ನೀರಿನಲ್ಲಿ  ಹಾಕಿಡುವುದರಿಂದ, ಕಾಲಿಫ್ಳವೆರ್ನಲ್ಲಿ ಸಾಮಾನ್ಯವಾಗಿ  ಇರುವಂತಹ  ಸಣ್ಣ ಸಣ್ಣ ಹುಳಗಳು ಹೊರಗೆ  ಬರುತ್ತದೆ, ಹಾಗು ಸಂಪೂರ್ಣ  ಸ್ವಚ್ಹವಾಗುತ್ತದೆ.]
ಕಡಲೆಹಿಟ್ಟು             -       ಅರ್ದ ಲೋಟ
ಕೆಂಪು ಮೆಣಸಿನಪುಡಿ   -     ಎರಡು ಚಮಚ
ಅರಿಶಿನಪುಡಿ             -      ಚಿಟಿಕೆ
ರುಚಿಗೆ ಉಪ್ಪು 
ಹಿಂಗು                    -        ಕಾಲು ಚಮಚ
ಧನಿಯ ಪುಡಿ           -        ಎರಡು ಚಮಚ
ಕರಿಯಲು ಎಣ್ಣೆ 

ಮಾಡುವ ವಿಧಾನ : 

ಒಂದು ಪಾತ್ರೆಯಲ್ಲಿ  ಕಡಲೆಹಿಟ್ಟನ್ನು ಹಾಕಿ, ಜೊತೆಗೆ  ಅರಿಶಿನ, ಉಪ್ಪು, ಹಿಂಗು, ಖಾರ ಪುಡಿ, ಧನಿಯಪುಡಿ ಸೇರಿಸಿ,ತಕ್ಕಷ್ಟು ನೀರನ್ನು ಹಾಕಿ,ಚೆನ್ನಾಗಿ ಕಲಿಸಿಡಬೇಕು.  ಹೀಗೆ ಕಲಿಸಿದ                ಹಿಟ್ಟಿನಲ್ಲಿ  ಒಂದೊಂದೇ ಹೂವನ್ನು ಅದ್ದಿ, ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಬೇಕು.[ ಹದವಾದ ಉರಿಯಲ್ಲಿ ಕರಿಯಬೇಕು]



*ಕಲುಸುವಾಗ  ಹಿಟ್ಟು ತುಂಬಾ  ನೀರಾಗಿರಬಾರದು.ದೋಸೆ ಹಿಟ್ಟಿಗಿಂತ  ಸ್ವಲ್ಪ ತೆಳುವಾಗಿರಬೇಕು.
*ಬಿಸಿ ಬಿಸಿಯಾಗಿಯೇ  ತಿನ್ನಲು ತುಂಬಾ   ರುಚಿಯಾಗಿರುತ್ತದೆ .
                                                      ಕಲಿಸಿದ ಹಿಟ್ಟು



Monday, October 24, 2011

BRINJAL RICE

ವಾಂಗೀ ಬಾತ್ 

ತಯಾರಿಸಲು ಏನೆಲ್ಲ ಬೇಕು? 

ಅಕ್ಕಿ    -  ಒಂದು ಲೋಟ 
ಮೈಸೂರ್ ಬದನೆ  -   ಮೂರು [ ಒಂದಿಂಚು ಉದ್ದಕ್ಕೆ  ಹೆಚ್ಚಿ ನೀರಲ್ಲಿ ಹಾಕಿಡಬೇಕು]
*ವಾಂಗಿಬಾತ್ ಪುಡಿ -  ಎರಡು ದೊಡ್ಡ ಚಮಚ  
ಕಾರಪುಡಿ  -   ಅರ್ದ ಚಮಚ
ಹುಣಸೆರಸ/ಲಿಂಬೆ ರಸ  -  ಕಾಲು ಕಪ್ 
ಕಾಯಿತುರಿ   - ಸ್ವಲ್ಪ 
ಉಪ್ಪು    -  ರುಚಿಗೆ ತಕ್ಕಷ್ಟು 
ಬೆಲ್ಲದ ಪುಡಿ      - ಅರ್ದ ಚಮಚ [OPTIONAL]

ಒಗ್ಗರೆಣೆಗೆ: ತುಪ್ಪ, ಸಾಸಿವೆ, ಕಡ್ಲೆ ಬೇಳೆ, ಹಿಂಗು  ಒಣಮೆಣಸು  ಕರಿಬೇವು
                 ಮತ್ತು  ಶೇಂಗ ಬೀಜ/ ಗೋಡಂಬಿ
ಅಲಂಕರಿಸಲು  ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು.

* ವಾಂಗೀ ಬಾತ್ ಪುಡಿ   ತಯಾರಿಸುವ ವಿದಾನ:

ಕಡಲೆಬೇಳೆ -  ಒಂದು ದೊಡ್ಡ ಚಮಚ 
ಉದ್ದಿನಬೇಳೆ - ಒಂದು ದೊಡ್ಡ ಚಮಚ
ಗುಂಟೂರ್ ಮೆಣಸು  -  ಎರಡು
ಬ್ಯಾಡಗಿ ಮೆಣಸು    -   ಎರಡು 
ಧನಿಯಾ     -      ಮೂರು ಚಮಚ

ಚೆಕ್ಕೆ     -    ಒಂದಿಂಚು 
ಲವಂಗ  - ಎರಡು
ಅರಿಶಿನ  - ಒಂದು ಚಿಟಿಕೆ 
ಕರಿಬೇವು -  ಒಂದು ಗರಿ 
ಕಾಯಿತುರಿ - ಒಂದು ದೊಡ್ಡ ಚಮಚ.
ಮೇಲೆ  ತಿಳಿಸಿದ ಎಲ್ಲಾ ಸಾಮಗ್ರಿಗಳ್ಳನ್ನು ಎಣ್ಣೆ ಹಾಕದೇ  ಹುರಿದುಕೊಂಡು, ತಣಿದ ಬಳಿಕ ನಯವಾದ  ಪುಡಿಯನ್ನು  ಮಾಡಬೇಕು.



ತಯಾರಿಸುವ ವಿದಾನ: ಕೂಕ್ಕರ್  ಪ್ಯಾನ್ ನಲ್ಲಿ  ತುಪ್ಪವನ್ನು ಹಾಕಿ, ಒಗ್ಗರಣೆಯನ್ನು ಮಾಡಿಕೊಳ್ಳಬೇಕು.ಕೂಡಲೇ ಬದನೆ ಹೊಳುಗಳನ್ನು  ಹಾಕಿ ಮೆತ್ತಗೆ ಹುರಿದುಕೊಳ್ಳಬೇಕು.ನಂತರ ತೊಳೆದಿಟ್ಟ  ಅಕ್ಕಿಯನ್ನು ಹಾಕಿ ,ಜೊತೆಗೆ ಹುಣಸೆರಸ, ಅರಿಶಿನಪುಡಿ,ಖಾರಪುಡಿ,ವಾಂಗೀಬಾತ್ ಪುಡಿ ,ಬೆಲ್ಲ ,  ಉಪ್ಪನ್ನು ಹಾಕಿ ಬೆರಸಿ,ಅಕ್ಕಿಯ ಎರಡರಷ್ಟು ನೀರನ್ನು ಹಾಕಿ ಇಪ್ಪತ್ತು ನಿಮಿಷ ಮಂದ ಉರಿಯಲ್ಲಿ  ಬೇಯಿಸಬೇಕು. ಬೆಂದ ಬಳಿಕ ಕಾಯಿತುರಿ, ಕೊತ್ತಂಬರಿ              ಸೋಪ್ಪ್ಪನ್ನು ಹಾಕುವುದು.              


ಬಡಿಸುವಾಗ ,ಮೇಲಿನಿಂದ ಒಂದು ಚಮಚ ತುಪ್ಪವನ್ನು ಹಾಕಬೇಕು.








Sunday, October 23, 2011

ನುಡಿಮುತ್ತು

* ಗಾಯ ವಾಸಿಯಾಗಬಹುದು. ಅವಮಾನದ ನೋವು ಎಂದೂ ಮಾಸುವುದಿಲ್ಲ. ಅದ್ದರಿಂದ ಮನಸ್ಸಿಗೆ ಎಂದೂ         ಘಾಸಿ ಮಾಡಕೂಡದು.
* ಅಲ್ಪ ಜ್ಞಾನವು  ಅಪಾಯಕರ. ಅದಕ್ಕಿಂತ ಅಜ್ಞಾನವೇ ಮೇಲು. ಅದ್ದರಿಂದ ಮಾತನಾಡುವ ಅಥವಾ ಭೋದಿಸುವ ಮೊದಲು ಪೂರ್ಣಜ್ಞಾನ ಪಡೆದಿರಬೇಕು.

*ನಾವು ವಸ್ತುಗಳನ್ನು ಅವು ಇರುವಂತೆಯೇ ನೋಡುವುದಿಲ್ಲ, ಬದಲಾಗಿ ನಾವಿರುವಂತೆ ನೋಡುತ್ತೇವೆ.
* ನಾವು ಬೇರೆಯವರ ಬಗ್ಗೆ ಮಾತಾಡುವಾಗ, ನಾವೆಷ್ಟು ಯೋಗ್ಯರಿದ್ದೇವೆ  ಎಂದು 
   ಯೋಚಿಸಬೇಕು.
* ಕಲ್ಪನೆ ಎಂಬುದು ಕೆರಳಿದ ಸಿಂಹವಿದ್ದಂತೆ. ಅದು ಹುಚ್ಚೆದ್ದು ಓಡಲು ಬಿಟ್ಟರೆ   ನಿಯಂತ್ರಿಸುವುದು ಕಷ್ಟ. ಮನೋ ನಿಗ್ರಹ ಇರಬೇಕು.
* ನೀರಿನಲ್ಲಿ ಕಾಣುವ ಪ್ರಾಕ್ರತಿಕ   ಸೊಬಗಿನ ಪ್ರತಿಬಿಂಬದಂತೆ, ನಮ್ಮ ಮನಸೂ ದ್ವೇಷ ಅಸೂಯೆಗಳಿಂದ ಮುಕ್ತವಾಗಿರಬೇಕು. 
* ಒತ್ತಡವು ನಮ್ಮನ್ನು ಸಾಯಿಸುವ ಮೊದಲೇ, ಅದನ್ನು ನಾವು ಸಾಯಿಸಬೇಕು.
    ಒತ್ತಡ  ನಿಭಾಯಿಸುವುದನ್ನು ಕಲಿತರೆ ಜೀವನ ನಿರ್ವಹಣೆ ಸುಲಭ.
*ಯಾವುದನ್ನು ನಾವು ಗೌರವಿಸುವುದಿಲ್ಲವೂ  ಅದನ್ನು ಮಾಡಹೊರಟರೆ ಸಂತೋಷ ನಮ್ಮ ಪಾಲಿಗಿರುವುದಿಲ್ಲ.
* ನಾವು ಒಳ್ಳೆಯ ಕಾರ್ಯಗಳ್ಳನ್ನು ಮಾಡಿದರೆ, ಅವು ನಮ್ಮ ಜೀವನದಲ್ಲಿಯೇ ಪ್ರತಿಫಲಿಸುತ್ತವೆ. ಅಂತೆಯೇ ದುಷ್ಟ ಕೆಲಸಗಳ್ಳನ್ನು ಮಾಡಿದರೆ, ಅವೇ ನಮ್ಮ ಜೀವನದಲ್ಲಿ ಮತ್ತೆ ಪಾಪವಾಗಿ ನಮ್ಮನ್ನು ಆವರಿಸಿಕೊಳುತ್ತದೆ.
*  ಇತರರಿಗೆ ಏನಾದರೂ ಹಂಚುವುದಿದ್ದರೆ ಸಂತಸವನ್ನು ಹಂಚಬೇಕು.ಅದಕ್ಕಿಂತ ದೊಡ್ಡದಾದ ದಾನ ಧರ್ಮ ಮತ್ತೊಂದು ಇರಲಿಕ್ಕಿಲ್ಲ.
*  ಅಸೂಯೆ ಹೆಡೆ ಎತ್ತಿದಾಗ ನಮ್ಮ ಪ್ರೀತಿ ಪಾತ್ರರೂ ಕೂಡ ನಮ್ಮ ವೈರಿಗಳಗುತ್ತಾರೆ,     ಆದ್ದರಿಂದ ಮತ್ಸರಕ್ಕೆ ಅವಕಾಶ ಕೊಡಕೂಡದು.
*  ಮಾತಾಡಿ  ಕೆಟ್ಟವರು ಅನ್ನಿಸಿ ಕೊಳ್ಳದಕಿಂತ, ಮೌನವಾಗಿದ್ದು ಅರ್ಥವಾಗದೇ
    ಉಳಿದುಬೀಡೋದು ಒಳ್ಳೆಯದು.
*  ಸುಡು ಬೇಸಿಗೆ ಇದ್ದರೂ, ಮಳೆಯ ಆಗಮನ ನೀರಿಕ್ಷಿಸುವ   ನವಿಲಿನಂತೆ,ಜೀವನದಲ್ಲಿ ತೊಂದರೆಗಳ ಬಳಿಕ ನೆಮ್ಮದಿ ದಿನಗಳು   ಬರದೇಇರವು.....
*   ನಾವು  ಯಾರನ್ನಾದರೂ ಸಂಪೂರ್ಣ ವಾಗಿ ನಂಬಿದರೆ ಎರಡು ಸಾದ್ಯತೆಗಳಿರುತ್ತವೆ. ಒಂದು,ಜೀವಮಾನದಲ್ಲಿ ಮರೆಯಲಾಗದಂತ ಗೆಳೆಯ ಸಿಕ್ಕಾನು, ಇಲ್ಲವೇ ಮರೆಯಲಾಗದಂತ ಪಾಠ ಕಲಸಿಯಾನು. ನಂಬುವ ಮುನ್ನ ತುಸು ಯೋಚನೆ ಮಾಡಬೇಕು.
*   ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ,ಅದರಿಂದ ನಾವು ಪ್ರತಿಷ್ಠೆ ಯಾ ಮತ್ಸರ ಈ ಎರಡರಲ್ಲಿ ಯಾವುದಾದ ಒಂದರ ಭಾದೆಗೆ ಒಳಗಾಗುತೇವೆ.
*ಸಹನೆ ಇಂದ ಇರುವುದು ಕಠಿಣ; ಆದರೆ, ಅದು ನೀಡುವ ಅಂತ್ಯ ಫಲ ಶಾಂತಿ ಹಾಗು ಸಮಾದಾನ.
*ಯಾವುದಾದರು ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಸದಾ ಚಟುವಟಿಕೆಯಿಂದ ಇರಬೇಕು. ಕ್ರಿಯಾಶೀಲ ವ್ಯಕ್ತಿಗೆ ದುಃಖ ,ಚಿಂತೆಗೆ ಸಮಯ ಇರದು.
*ನಮ್ಮ ಸ್ಮರಣ ಶಕ್ತಿ ತುಂಬಾ ದುರ್ಬಲ ಎಂದೇ ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತೇವೆ.ಆದರೆ ಕೆಲವರನ್ನು ಮರೆಯಲು ಎಷ್ಟೇ  ಯತ್ನಿಸಿದರೂ ಅದು ಸಾಧ್ಯವಾಗದಿರುವಾಗ ನಮ್ಮ ನೆನಪಿನ ಶಕ್ತಿ ಎಷ್ಟು ಚೆನ್ನಾಗಿದೆ ಎಂಬುದರ ಅರಿವಾಗುತ್ತದೆ.
* ಸೋತು ಹೋಗುತ್ತೇನೆಂಬ  ಬಯವನ್ನು ಗೆಲ್ಲುವುದೇ  ನಿಜವಾದ  ಜಯ.
* ಬೇರೆಯವರ ದೋಷ ಹುಡಕುತ್ತಾ ಹೊರಟಂತೆ ನಾವೂ ಅದರ ಬಾಧೆಗೆ ಒಳಗಾಗುತ್ತೇವೆ ದೌರ್ಬಲ್ಯಗಳು ಸೊಂಕಿದ್ದಂತೆ, ಬಲು ಬೇಗ ಅಂಟುತ್ತವೆ.
  *ನಮ್ಮನ್ನು ಧ್ವೇಷಿಸುವ ಜನರನ್ನು ಧ್ವೇಷಿಸುವುದಕ್ಕೆ  ನಮ್ಮ  ಸಮಯವನ್ನು 
    ವ್ಯರ್ಥ  ಮಾಡಬಾರದು.
* ವಿಧ  ವಿಧದ ಹೂಗಳ ಮಕರಂದದಿಂದ ಜೇನು ಶೆಕರಣೆಯಾಗುವಂತೆ, ಎಲ್ಲರೂ        ಒಟ್ಟಿಗೆ ದುಡಿದಾಗ ಮಾತ್ರ ಅದರ ಫಲಿತಾಂಶ ಸಿಹಿಯಾಗಿರಲು ಸಾಧ್ಯ.
* ನಮ್ಮೊಂದಿಗೆ  ಜಗಳ ಮಾಡಲು ಹಲವರು ತುದಿಗಾಲ ಮೇಲೆ ನಿಂತಿರುತ್ತಾರೆ, ನಗು ಹಾಗು ಪ್ರೀತಿಯ ಮನೋಭಾವ ನಮ್ಮದಾಗಿರಬೇಕು.
* ನಾವು ಸರಿಯಾಗಿದ್ದರೆ ಕೋಪಗೊಳ್ಳುವ ಅಗತ್ಯವಿಲ್ಲ. ನಾವು ಸರಿಯಾಗಿ ಇಲ್ಲದ್ದಿದ್ದರೆ ಕೋಪಿಸಿ ಕೊಳ್ಳುವ ಹಕ್ಕು ನಮಗಿಲ್ಲ.ಅಂತೂ ಕೋಪ ಸರಿಯಲ್ಲ ಎಂಬುವುದೇ ಇದರ ತಾತ್ಪರ್ಯ.

* ಮಳೆಗೂ  ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ.ಸಂತೋಷವೂ ಹಾಗೆಯೇ, ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.

*ಹಿಂದಿನ ಬಗ್ಗೆ ಯೋಚಿಸಿದರೆ ದುಃಖವಾದೀತು. ಮುಂದಿನ ಬಗ್ಗೆ ಚಿಂತಿಸಿದರೆ ಭಯ ವಾಗಬಹುದು. ಆದ್ದರಿಂದ ಇಂದಿನ ಬಗ್ಗೆ ಯೋಚಿಸೋಣ, ಇದರಿಂದ ನೆಮ್ಮದಿ,ಸಂತಸ ದೊರೆತೀತು.
* ಸುಂದರವಾದ ವಸ್ತುಗಳು ಉತ್ತಮವಾಗಿರಲೇ ಬೇಕೆಂದಿಲ್ಲ. ಆದರೆ ಉತ್ತಮ ವಸ್ತುಗಳು ಸದಾ ಸುಂದರವಾಗಿರುತ್ತದೆ. ಸುಂದರವಾದ ಮುಖಕ್ಕಿಂತ, ಸುಂದರ ಹೃದಯವಂತರನ್ನು ಶೋದಿಸಬೇಕು.

* ಪುಸ್ತಕಗಳ್ಳನ್ನು ಓದುವುದರ ಮೂಲಕ, ಜಗತ್ತನ್ನು ಅತ್ಯಂತ ಸುಲಭ ವೆಚ್ಚದಲ್ಲಿ ನೋಡಬಹುದು.

 * ಏಷ್ಟೇ ಅಡೆ- ತಡೆಗಳು ಎದುರಾದರು ಸೂರ್ಯ ಉದಯಿಸದೇ ಇರದು. ಅದೇ ರೀತಿ, ಜೀವನದಲ್ಲಿ ಗುರಿ ಸಾಧನೆಗೆ ಅಡ್ಡಿ- ಆತಂಕಗಳು ಎದುರಾಗುವುದು ಸಹಜ.ಅದಕ್ಕೆ, ಅಂಜಬಾರದು.

* ಇತರರು  ನಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೆವೆಯೋ, ಅಂಥಹವುದನ್ನು ನಾವೂ ಇತರರಿಗೆ ಮಾಡಬೇಕು.

*ಸಂಪತ್ತನ್ನು ಲಕ್ಷಸದವ್ರು ಹಲವರು ಇರಬಹುದು, ಆದರೆ ಸಂಪತ್ತನ್ನು ದಾನ ಮಾಡಬಲ್ಲ ಸಾಮಾರ್ತ್ಯಉಳ್ಳವರು  ಇರುವುದು ಕೆಲವೇ ಮಂದಿ ಮಾತ್ರ.

* ಭೂಮಿಯನ್ನು  ಉತ್ತಿ-ಬಿತ್ತಿ ಮಳೆಯಾದರಷ್ಟೇ , ಉತ್ತಮ ಬೆಳೆ ಸಾಧ್ಯ. ರಾತ್ರೋರಾತ್ರಿ  ಯಾವ ಚಮತ್ಕಾರವೂ ಆಗದು. ಹಾಗೇಯೇ ನಾವಂದುಕೊಂಡ ಕೆಲಸ, ಗುರಿ ತಲುಪ ಬೇಕಿದ್ದರೆ ಪರಿಶ್ರಮ ಪಡಬೇಕು.

Saturday, October 22, 2011

ಕೊರ್ನ್ ಆಂಬೋಡೆ


ಕೊರ್ನ್   ಆಂಬೋಡೆ

 ಮಾಡಲು ಏನೇನು ಬೇಕು 
 ಕೊರ್ನ್     -    ಒಂದು ಕಪ್ 
  ಕಡ್ಲೆ ಬೇಳೆ  -    ಒಂದು  ಕಪ್ 
  ಹಸಿಮೆಣಸು -   ಮೂರರಿಂದ ನಾಲ್ಕು [ಖಾರಕ್ಕೆ ಬೇಕಾಗುವಷ್ಟು ]
  ಈರುಳ್ಳಿ       -    ಎರಡು [ಸಣ್ಣಗೆ ಹೆಚ್ಚಿದ್ದು]
  ಕಾಯಿತುರಿ   -    ಸ್ವಲ್ಪ 
  ಕರಿಬೇವು     -  ಒಂದು ಗರಿ 
  ಹಿಂಗು         -   ಸ್ವಲ್ಪ 
  ಅರಿಶಿನ       -   ಕಾಲು ಚಮಚ    
  ಉಪ್ಪು         -   ರುಚಿಗೆ ತಕ್ಕಷ್ಟು 
  ಕಡ್ಲೆ ಹಿಟ್ಟು    ಒಂದು ದೊಡ್ಡ ಚಮಚ
 ಕರಿಯಲು ಎಣ್ಣೆ .


ಮಾಡುವ ರೀತಿ :ಕಡಲೇಬೇಳೆಯನ್ನು  ಒಂದು ಗಂಟೆ  ನೆನಸಬೇಕು.  ಈ ನೆನದ  ಕಡ್ಲೆ ಬೇಳೆಯನ್ನು, ಹಸಿಮೆಣಸಿನೊಂದಿಗೆ  ತರಿ ತರಿಯಾಗಿ ರುಬ್ಬಿಕೊಂಡು, ಕೊನೆ ಸುತ್ತಿನಲ್ಲಿ  ಬಿಡಿಸಿಟ್ಟ ಕೊರ್ನ್ ಗಳ್ಳನ್ನು  ಹಾಕಿ  ಒಂದು ಸುತ್ತು  ಮಿಕ್ಸಿ  ಮಾಡಿಕೊಳ್ಳಬೇಕು. ಹೀಗೆ, ರುಬ್ಬಿದ ಹಿಟ್ಟಿಗೆ  ಸಣ್ಣಗೆ ಹೆಚ್ಚಿದ   ಹಸಿಮೆಣಸು , ಕರಿಬೇವು, ಹಿಂಗು ಉಪ್ಪು ಈರುಳ್ಳಿ, ಕಾಯಿತುರಿ    ಕಡ್ಲೆ ಹಿಟ್ಟನ್ನು  ಹಾಕಿ  [ನೀರು ಮುಟ್ಟಿಸದೆ]ಕಲೆಸಿಕೊಂಡು ಸಣ್ಣ ಸಣ್ಣ ಉಂಡೆ ಮಾಡಿ ಚಪ್ಪಟೆಯಾಗಿ ತಟ್ಟಿ ಕಾದ ,ಎಣ್ಣೆಯಲ್ಲಿ[ಮಧ್ಯಮ ಉರಿಯಲ್ಲಿ] ಕರಿಯಬೇಕು.







Friday, October 21, 2011

CORN SALAD

  ಕೊರ್ನ್ ಸಲಾಡ್  
ಮತ್ತೆ  ಮತ್ತೆ  ತಿನ್ನಬೇಕೆನಿಸುವ  ಈ  ಕೊರ್ನನಲ್ಲಿ, ಅನೇಕ  ರುಚಿಕರ ಅದುಗೆಗಳ್ಳನ್ನು  ಮಾಡಬಹುದು

ತಯಾರಿಸಲು :-    ಕೊರ್ನ್   -  ಅರ್ದ ಕಪ್ 
                           ಟೊಮೇಟೊ  -  ಒಂದು 
                         ಸೌತೆಕಾಯಿ    -  ಒಂದು ಸಣ್ಣದು 
                        ಹಸಿ ಶೇಂಗ ಬೀಜ -  ಸ್ವಲ್ಪ 
                       ದಾಳಿಂಬೆ  ಬೀಜ            -    ಸ್ವಲ್ಪ  
                       ಸೇಬು         -        ಒಂದು 
                       ಕಾಯಿತುರಿ    -     ಸ್ವಲ್ಪ 
                       ಕೊತ್ತಂಬರಿ ಸೊಪ್ಪು  - ಸ್ವಲ್ಪ 
                        ನಿಂಬೆ          -    ಅರ್ದ ಹೋಳು 
                      ಕರಿಮೆಣಸು ಪುಡಿ   ಹಾಗು ಉಪ್ಪು.

           


    ಮಾಡುವುದು :-   ಬೇಯಿಸಿದ  ಕೊರ್ನ್ ಹಾಗು ಶೇಂಗಾ ಬೀಜ, ತುರಿದ ಕ್ಯಾರಟ್ , ಸಣ್ಣಗೆ ಹೆಚ್ಚಿದ ಸೌತೆಕಾಯಿ,
                             ಸೇಬು, ದಾಳಿಂಬೆ ಬೀಜ  ಎಲ್ಲವನ್ನು ಒಂದು ಪಾತ್ರೆಯಲ್ಲಿ  ಹಾಕಿ ,ಕರಿ ಮೆಣಸಿನ ಪುಡಿ, ರುಚಿಗೆ
                             ಉಪ್ಪನ್ನು  ಸೇರಿಸಿ, ನಿಬೆ ರಸ ಹಿಂಡಿ, ಕಾಯಿತುರಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ 
                             ಅರೋಗ್ಯಕರವಾದ  ಸಲಾಡ್ ರೆಡಿ.

Thursday, October 20, 2011

ಟೊಮೇಟೊ ಚಟ್ನಿ



ಟೊಮೇಟೊ   ಚಟ್ನಿ 



ಏನೇನು ಬೇಕು...?

ಹಣ್ಣಾದ ಟೊಮೇಟೊ   -   ನಾಲ್ಕು [ಸಣ್ಣಗೆ ಹೆಚ್ಚಬೇಕು] 
ಸೀಳಿದ   ಹಸಿಮೆಣಸು  -    ಎರಡು 
ಹಸಿ ಶುಂಟಿ               -    ಒಂದಿಂಚು  ತುಂಡು [ಸಣ್ಣಗೆ  ಹೆಚ್ಚಬೇಕು]
ದಾಲ್ಚಿನಿ ಎಲೆ           -      ಒಂದು
ಹಿಂಗು                   -      ಚಿಟಿಕೆಯಸ್ಟು 
ಅರಿಶಿನ                 -      ಚಿಟಿಕೆಯಸ್ಟು
ಖಾರ ಪುಡಿ             -       ಅರ್ದ ಚಮಚ 
ಉಪ್ಪು                   -       ರುಚಿಗೆ 
ಸಾಸಿವೆ                 -       ಅರ್ದ ಚಮಚ 
ಜೀರಿಗೆ                  -        ಅರ್ದ ಚಮಚ 
ಎಣ್ಣೆ                      -        ಸ್ವಲ್ಪ 
ಸಕ್ಕರೆ                  -        ಅರ್ದ ಚಮಚ 
ಕೊರ್ನ್ ಹಿಟ್ಟು       -        ಒಂದು ಚಮಚ  


ಮಾಡುವ ವಿದಾನ :
 ದಪ್ಪ ತಳದ  ಬಾಣಲೆಯಲ್ಲಿ  ಎಣ್ಣೆಯನ್ನು ಹಾಕಿ, ಸಾಸಿವೆ  ಜೀರಿಗೆ  ಹಿಂಗು   ಹಸಿಮೆಣಸು, ದಾಲ್ಚಿನಿ ಎಲೆ  ಒಗ್ಗರಣೆ ಮಾಡಿಕೊಂಡು, ಬಳಿಕ ಹಸಿ ಶುಂಟಿ, ಟೊಮೇಟೊ ತುಂಡುಗಳನ್ನುಜೊತೆಗೆ ಸ್ವಲ್ಪ ನೀರನ್ನು ಹಾಕಿ ಬೇಯಿಸಬೇಕು.ಅರ್ದ ಬೆಂದ ಬಳಿಕ  ಮೆಣಸಿನ ಪುಡಿ,
ಅರಿಶಿನ , ಉಪ್ಪು ಹಾಗು ಸಕ್ಕರೆಯನ್ನು ಹಾಕಿ ಕುದಿಸಬೇಕು. ಕೊನೆಯಲ್ಲಿ ಸ್ವಲ್ಪ ಕೊರ್ನ್ ಪುಡಿ ಹಾಕಿ ಚೆನ್ನಾಗಿ ಬೆರಸಿ ಕುದಿಸಿದರೆ
ಧಿಡೀರಾಗಿ ಮಾಡಬಹುದತಹ  ಟೊಮೇಟೊ  ಚಟ್ನಿ ಸಿದ್ದ .


ಈ  ಚಟ್ನಿಯು  ಚಪಾತಿ/ ಪರಾಟ / ಬ್ರೆಡ್ ನೋಟ್ಟಿಗೆ   ಒಳ್ಳೆಯದಾಗುತ್ತದೆ .