ಮಿಶ್ರ ತರಕಾರಿ ಕಟ್ಲೆಟ್ಟು
ಮಾಡಲು ಏನೇನು ಪದಾರ್ಥಗಳು ಬೇಕು?
ಮಿಶ್ರ ತರಕಾರಿಗಳು ಬೇಯಿಸಿದ್ದು - ಎರಡು ಕಪ್
ಜೀರಿಗೆ ಪುಡಿ - ಒಂದು ಚಮಚ
ಧನಿಯ ಪುಡಿ - ಒಂದು ಚಮಚ
ಕೆಂಪು ಮೆಣಸಿನ ಪುಡಿ - ಒಂದು ಚಮಚ
ಗರಂ ಮಸಾಲೆ ಪುಡಿ - ಅರ್ದ ಚಮಚ
ತುಂಡರಿಸಿದ ಗೋಡಂಬಿ - ಎರಡು ಚಮಚ [optional]
ಉಪ್ಪು - ರುಚಿಗೆ ಹದವಾಗಿ
ಬ್ರೆಡ್ ಒಣ ಪುಡಿ [bread crumbs]- ಸ್ವಲ್ಪ
ಮೈದಾ ಅಥವಾ ಕೊರ್ನ್ ಹಿಟ್ಟು - ಮೂರು ಚಮಚ
ಲಿಂಬೆ ರಸ - ಒಂದು ಚಮಚ
ಕಟ್ಲೇಟು ತಯಾರಿಸುವ ರೀತಿ:
೧. ಮಿಶ್ರ ತರಕಾರಿಗಳನ್ನು [ ಆಲುಗೆಡ್ಡೆ,ಹಸಿ ಬಟಾಣಿ, ಬೀಟ್ರೂಟ್ ]ಚನ್ನಾಗಿ ಬೇಯಿಸಿಕೊಂಡು, ನೀರನ್ನು ಬಸಿದಿಟ್ಟು -ಕೊಳ್ಳಬೇಕು.
೨. ಬೇಯಿಸಿದ ತರಕಾರಿಗೆ, ಖಾರ ಪುಡಿ, ಜೀರಿಗೆ, ಧನಿಯ, ಗರಂ ಮಸಾಲೆ, ಗೋಡಂಬಿ ಚೂರು, ಉಪ್ಪು, ಹಿಟ್ಟು ಲಿಂಬೆ ರಸ
ಸೇರಿಸಿ, ಗಟ್ಟಿಯಾಗಿ ಕಲಿಸಿಕೊಳ್ಳಬೇಕು[ನೀರು ಮುಟ್ಟಿಸ ಬಾರದು]
೩. ಹೀಗೆ ಕಲಿಸಿದ ಮಿಶ್ರಣದಿಂದ, ಬೇಕಾದ ಆಕಾರಕ್ಕೆ ಕಟ್ಲೆಟ್ ವಡೆ ಗಳ್ಳನ್ನು ಸಿದ್ದ ಪಡಿಸಬೇಕು.
೪. ದೋಸೆ ಅಂಚನ್ನು ಬಿಸಿ ಮಾಡಿ, ಎಣ್ಣೆಯನ್ನು ಚನ್ನಾಗಿ ಸವರಿ, ಕಟ್ಲೆಟ್ ವಡೆ ಗಳ್ಳನ್ನು BREAD CRUMBS ನಲ್ಲಿ
ಹೊರಳಾಡಿಸಿ, ತವಾದ ಮೇಲೆ ಜೋಡಿಸಿ, ಎರಡು ಬದಿ ಎಣ್ಣೆಯನ್ನು ಹದವಾಗಿ ಹಾಕಿ, ಮದ್ಯಮ ಉರಿಯಲ್ಲಿ
ಕಟ್ಲೆಟ್ ಕಾಯಿಸಿ ತೆಗೆಯಬೇಕು
* ಬಿಸಿ ಬಿಸಿಯಾದ ವೆಜ್ ಕಟ್ಲೆಟ್ ಚಟ್ನಿ / ಸಾಸ್ ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
ತುಂಬಾ ಹೊಟ್ಟೆ ಹಸಿವು ಆಗ್ತಾ ಇದೆ, ನೋಡಿದ್ರೆ ತಿಂದು ಬಿಡೋಣ ಅಂತ ಅನ್ನಿಸ್ತಾ ಇದೆ.
ReplyDeleteತುಂಬಾ ಚೆನ್ನಾಗಿ ಬಂದಿದೆ.