ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಪದಾರ್ಥಗಳು
ಒಂದಿಂಚು ಉದ್ದಕ್ಕೆ ಕತ್ತರಿಸಿದ ಎಳೆ ಬೆಂಡೆಕಾಯಿ - ಎರಡು ಬಟ್ಟಲು
ಒಗ್ಗರಣೆಗೆ :- ಕೊಬ್ಬರಿ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಹಿಂಗು ಕರಿಬೇವು.
ಮಸಾಲೆಗೆ :- ಒಂದು ಬಟ್ಟಲು ಕಾಯಿತುರಿ
4-5 ಹಸಿಮೆಣಸು
ಕೊತ್ತಂಬರಿ ಸೊಪ್ಪು - ಎರಡು ಚಮಚ
ಹಸಿ ಶುಂಟಿ - ಸಣ್ಣ ತುಂಡು
ಹುಣಸೆ - ಒಂದು ಚಮಚ
ಅರಿಶಿನ - ಒಂದು ಚಿಟಿಕೆಯಷ್ಟು
ಸಿಹಿ ಮೊಸರು --ಮೂರು ಬಟ್ಟಲು
ಉಪ್ಪು - ರುಚಿಗೆ ಹದವಾಗಿ .
ಮಜ್ಜಿಗೆ ಹುಳಿ ಮಾಡುವ ವಿಧಾನ:
ಹಾಕದೇ ಚೆನ್ನಾಗಿ ಬೇಯಿಸಿಕೊಳ್ಳಬೇಕು.
೨. ಮಸಾಲೆಗೆ ತಿಳಿಸಿದ ಪದಾರ್ಥಗಳ್ಳನ್ನು ನಯವಾಗಿ ರುಬ್ಬಿಟ್ಟು ಕೊಳ್ಳಬೇಕು.
೩. ಬೆಂಡೆಕಾಯಿ ಬೆಂದ ಬಳಿಕ, ರುಬ್ಬಿದ ಮಸಾಲೆ ಹಾಗು ಉಪ್ಪನ್ನು ಹಾಕಿ ಒಂದು ಕುದಿ ತೆಗೆದರೆ, ಮಜ್ಜಿಗೆ ಹುಳಿ ಸಿದ್ಧ.
* ಬಡಿಸುವಾಗ ಬೇಕಾದಲ್ಲಿ ಮೇಲಿನಿಂದ, ಮೊಸರನ್ನು ಹಾಕಬಹುದು.
* ಇದೇ ಮಸಾಲೆಯೆಯಿಂದ ಸವತೆಕಾಯಿ, ಬೂದು ಕುಂಬಳಕಾಯಿ, ಪಡವಲಕಾಯಿ, ದಂಟು ಸೊಪ್ಪು, ನುಗ್ಗೆಕಾಯಿ ಇತ್ಯಾದಿ..,
ತರಕಾರಿಗಳ ಮಜ್ಜಿಗೆ ಹುಳಿಯನ್ನು ತಯಾರಿಸಬಹುದು.
* ಇದ್ದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ತಯಾರಿಸುವಂಥಹ , ರುಚಿಯಾದ ಆರೋಗ್ಯಕರವಾದ ಅಡುಗೆ .
very good , tumba chennagi bandide
ReplyDelete