ಬೇಯಿಸಿದ ಆಲೂಗಡ್ಡೆ - ನಾಲ್ಕು
ಮೆಂತ್ಯೆ ಸೊಪ್ಪು - ಎರಡು ಕಪ್ಪು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು - ಒಂದು ಗಡ್ದೆ
ಸಣ್ಣಗೆ ಹೆಚ್ಚಿದ ಟೊಮೇಟೊ - ಒಂದು
ಕೆಂಪು ಮೆಣಸಿನ ಪುಡಿ - ಒಂದು ಚಮಚ
ಅರಿಶಿನ - ಕಾಲು ಚಮಚ
ಗರಂ ಮಸಾಲ ಪುಡಿ - ಅರ್ದ ಚಮಚ
ಜೀರಿಗೆ - ಅರ್ದ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಲಿಂಬೆ ರಸ - ಅರ್ದಲಿಂಬೆ ಹಣ್ಣು
ಎಣ್ಣೆ - ಎರಡು ಚಮಚ .
ಮಾಡುವ ವಿಧಾನ:
ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಜೀರಿಗೆ ಹಾಕಿ ಸಿಡಿಸಬೇಕು. ಅದರಲ್ಲಿ ಈರುಳ್ಳಿ ಹಾಕಿ ಕೆಂಪಗೆ ಬಾಡಿಸಿಕೊಂಡ ಬಳಿಕ ಟೊಮೇಟೊ, ಮೆಂತ್ಯೆ ಸೊಪ್ಪನ್ನು ಸೇರಿಸಿ, ಚನ್ನಾಗಿ ಬಾಡಿಸಿಕೊಳ್ಳಬೇಕು.ನಂತರ ಖಾರಪುಡಿ , ಅರಿಶಿನ, ಗರಂ ಮಸಾಲೆ
ಉಪ್ಪನ್ನು ಹಾಕಿಕೊಂಡು ಮಿಶ್ರಣ ಮಾಡಿ, ಬಳಿಕ ಬೇಯಿಸಿದ ಆಲುಗಡ್ಡೆ ಹೋಳು ಗಳ್ಳನ್ನು ಸೇರಿಸಿ, ಐದು ನಿಮಿಷ
* ಬಡಿಸುವಾಗ ಲಿಂಬೆ ರಸವನ್ನು ಹಿಂಡಿ ಕೊಳ್ಳಬೇಕು.
* ಚಪಾತಿ/ಪೂರಿ ಯೋಟ್ಟಿಗೆ ನೆಂಚಿಕೊಳ್ಳಲು ಒಳ್ಳೆಯದಾಗುತ್ತದೆ.
* ಜೀರಾ ರೈಸ್/ ಘೀ ರೈಸ್ / ಫ್ರಯ್ದ್ ರೈಸ್ ಗೂ ಒಳ್ಳೆಯದಾಗಿ ಹೊಂದಿಕೊಳ್ಳುತ್ತದೆ .
HAI, THUMBHA KHUSHIYAYTU NIM BLOG GE BHETI NEEDI. SAMAYADA ABHAVADINDAGI ODALU INNU THUMBHA VISHAYAGALU BAKI ULIDIVE. DAYAVITTU NANAGE HOSA REETHIYAGI ENADARU MENTHYE SOPPINA PALYADA BAGGE ENADARU IDRE THILISI.... DHANYAVADAGALU.
ReplyDelete