ಪದಾರ್ಥಗಳು:
ತಿಂಗಳವರೆ ಬೀಜ - ಒಂದು ಕಪ್ಪು
ಆಲುಗಡ್ಡೆ/ಹಲಸಿನ ಬೀಜ - ಅರ್ದ ಕಪ್ಪು
ಹುಣಸೆರಸ - ಎರಡು ಚಮಚ
ಬೆಳ್ಳುಳ್ಳಿ - ಒಂದು ದೊಡ್ಡ ಗಡ್ದೆ
ಹಸಿಮೆಣಸು - ನಾಲ್ಕು
ಒಣಮೆಣಸು - ಒಂದು
ಕಾಯಿತುರಿ - ಒಂದು ಚಮಚ
ಉಪ್ಪು - ರುಚಿಗೆ.
ಮಾಡುವ ವಿಧಾನ:
೧. ತಿಂಗಳವರೆಯನ್ನು ನಾಲ್ಕು ಗಂಟೆಗಳ ಕಾಲ ನೆನಸಿಡಬೇಕು.
೨. ಆಲುಗಡ್ಡೆ ಯನ್ನು ಸಣ್ಣ ಹೋಳುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಬೇಕು.ಹಲಸಿನ ಬೀಜ ಹಾಕುವುದಾದರೆ ಚನ್ನಾಗಿ
ಜಜ್ಜಿಟ್ಟುಕೊಳ್ಳಬೇಕು.
೩. ನೆನೆದ ತಿಂಗಳವರೆಯೋಟ್ಟಿಗೆ ಆಲುಗಡ್ಡೆ/ಹಲಸಿನಬೀಜ ಹಾಗು ನೀರನ್ನು ಹಾಕಿ, ಕುಕ್ಕರಲ್ಲಿ
ಚನ್ನಾಗಿ [ ಮೃದುವಾಗಿರಬೇಕು]ಬೇಯಿಸಿಕೊಳ್ಳಬೇಕು.
೪ ಕುಕ್ಕರ್ ತಣಿದ ಬಳಿಕ, ಬೆಂದ ಕಾಳುಗಳ್ಳನ್ನು ನೀರು ಸಮೇತ ಬೇರೆ ಪಾತ್ರೆ ಗೆ ವರ್ಗಾಯಿಸಿ, ಬೇಕಾದಲ್ಲಿ ಇನ್ನಷ್ಟು
ನೀರನ್ನು ಹಾಕಿ, ಸೀಳಿದ ಹಸಿಮೆಣಸು, ಹುಣಸೆ ರಸ ಹಾಗು ಉಪ್ಪನ್ನು ಹಾಕಿ ಕುದಿಸಬೇಕು.
೫. ಕೊನೆಯಲ್ಲಿ ಒಗ್ಗರಣೆ ಕಾವಲಿಯಲ್ಲಿ, ಕೊಬ್ಬರಿ ಎಣ್ಣೆಯನ್ನು ಹಾಕಿ ಕಾದ ಬಳಿಕ ಜಜ್ಜಿದ ಬೆಳ್ಳಳ್ಳಿ ಎಸಳು ಹಾಗು ಒಣ
ಮೆಣಸು ತುಂಡುಗಳ್ಳನ್ನು ಹಾಕಿ ಚನ್ನಾಗಿ ಹುರಿದು ಕುದಿಸಿಟ್ಟ ಸಾರಿಗೆ ಹಾಕಿದರೆ, ಸಾರುಪ್ಕರಿ ತಯಾರ್.
೬. ಮೇಲಿನಿಂದ ಕಾಯಿತುರಿ ಹಾಕಿಕೊಳ್ಳಬಹುದು.
* ಇದೇ ರೀತಿಯಲ್ಲಿ ಯಾವುದೇ ದಾನ್ಯವನ್ನು [ಹೆಸರು ಕಾಳು, ತೊಗರಿಕಾಳು,
ರಾಜ್ಮ ಇತ್ಯಾದಿ ...] ಉಪಯೋಗಿಸಿ ಸಾರನ್ನು ತಯಾರಿಸಬಹುದು.
No comments:
Post a Comment