STUFFED ಗೋಳಿಬಜೆ
ಸಾಮಗ್ರಿಗಳು:
ಮೈದಾ ಹಿಟ್ಟು - ಒಂದು ಲೋಟ
ಕಡ್ಲೆ ಹಿಟ್ಟು - ಎರಡು ಚಮಚ
ಹಸಿಮೆಣಸು - ಎರಡು [ಸಣ್ಣಗೆ ಹೆಚ್ಚಿದ್ದು]
ಹಸಿ ಶುಂಟಿ - ಒಂದಿಂಚು [ ಸಣ್ಣಗೆ ಹೆಚ್ಚಿದ್ದು]
ಈರುಳ್ಳಿ ಎರಡು [ ಸಣ್ಣಗೆ ಹೆಚ್ಚಿದ್ದು]
ಕೊತ್ತಂಬರಿ ಸೊಪ್ಪು - ಸ್ವಲ್ಪ[ಸಣ್ಣಗೆ ಹೆಚ್ಚಿದ್ದು]
ಖಾರ ಪುಡಿ - ಒಂದು ಚಮಚ
ಸಕ್ಕರೆ ಪುಡಿ - ಅರ್ದ ಚಮಚ
ಬೇಕಿಂಗ್ ಪುಡಿ - ಚಿಟಿಕೆಯಷ್ಟು
ಸ್ವಲ್ಪ ಹುಳಿ ಮಜ್ಜಿಗೆ - ಎರಡು ಲೋಟ
ರುಚಿಗೆ ಉಪ್ಪು ಹಾಗು ಕರಿಯಲು ಎಣ್ಣೆ.
ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ, ಮೊದಲು ಮಜ್ಜಿಗೆ, ಸಕ್ಕರೆಪುಡಿ, ಉಪ್ಪು, ಖಾರ ಪುಡಿ, ಬೇಕಿಂಗ್ ಪುಡಿ ಹಾಕಿ ಚನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ನಂತರ ಆ ಮಿಶ್ರಣಕ್ಕೆ, ಕೊತ್ತಂಬರಿ ಸೊಪ್ಪು ,ಈರುಳ್ಳಿ, ಹಸಿಮೆಣಸು, ಶುಂಟಿ, ಮೈದಾ ಹಿಟ್ಟು ಹಾಗು ಎರಡು ಚಮಚ ಕಡ್ಲೆ ಹಿಟ್ಟನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ
ಕಲಿಸಿಕೊಳ್ಳಬೇಕು. ಒಲೆಯ ಮೇಲೆ ಎಣ್ಣೆ ಕಾವಲಿಯನ್ನು ಇಟ್ಟು, ಎಣ್ಣೆ ಕಾದ ಬಳಿಕ, ಕೈಯಿಂದ ಅಥವಾ ಚಮಚದಿಂದ ಹಿಟ್ಟನ್ನು
ಸ್ವಲ್ಪ ಸ್ವಲ್ಪ ಹಾಕಿ ಚನ್ನಾಗಿ ಕರಿದು ತೆಗೆಯಬೇಕು. ಗೋಳಿಬಜೆ ಗೆ ಯಾವುದೇ ಆಕಾರವಿರುವುದಿಲ್ಲ, ಬಿಸಿ ಬಿಸಿ stuffed ಗೋಳಿಬಜೆ ಕಾಫಿ/ ಚ ದೊಂದಿಗೆ ತಿನ್ನಲ್ಲು ಬಲು ರುಚಿಯಾಗಿರುತ್ತದೆ.
No comments:
Post a Comment