ಬೇಳೆ ಇಡ್ಲಿ
ತಯಾರಿಸಲು ಬೇಕಾಗುವ ಪದಾರ್ಥಗಳು:
ಉದ್ದಿನ ಬೇಳೆ - ಒಂದು ಕಪ್
ಕಡ್ಲೆ ಬೇಳೆ - ಒಂದು ಕಪ್
ಕಾಯಿ ತುರಿ - ಒಂದು ಕಪ್
ಹಸಿಮೆಣಸು - ಎರಡು
ಕಾಳುಮೆಣಸು - ಆರು
ಹಸಿ ಶುಂಟಿ - ಒಂದಿಂಚು ತುಂಡು
ಜೀರಿಗೆ - ಒಂದು ಚಮಚ
ಉಪ್ಪು ರುಚಿಗೆ ಸ್ವಲ್ಪ, ಹಾಗು ಕೊತಂಬರಿ ಸೊಪ್ಪು ಸ್ವಲ್ಪ.
ತಯಾರಿಸುವ ವಿಧಾನ:
ಎರಡೂ ಬೇಳೆಗಳನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಬೇಕು. ಹೀಗೆ ನೆಂದ ಬೇಳೆಗಳ್ಳನ್ನು [ನೀರನ್ನು ಬಸಿದು] ಹಸಿ ಶುಂಟಿ , ಜೀರಿಗೆ, ಕಾಳುಮೆಣಸು ಸೇರಿಸಿ ತರಿ ತರಿಯಾಗಿ ರುಬ್ಬಿಕೊಂಡು,ಇದಕ್ಕೆ ತೆಂಗಿನ ತುರಿ,
ಉಪ್ಪು ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ, ತುಪ್ಪ/ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿ ಹಿಟ್ಟನ್ನು ಹಾಕಿ, ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿದರೆ, ಮೃದುವಾದ ಧಿಡೀರ್ ಬೇಳೆ ಇಡ್ಲಿ
ಚಟ್ನಿ ಯೊಂದಿಗೆ ತಿನ್ನಲು ಬಲು ರುಚಿಯಾಗಿರುತ್ತದೆ.
ಆಜಿ ಹಂಗ ಅಮ್ಮಿ ಹೀ ಇಡ್ಲಿ ಕೆಲ್ಲೇಲಿ. ಭಾರಿ ಲಾಯಕ್ ಜಲ್ಲಿ. ಸಕ್ದಾಂಕ ಭಾರಿ ಖಾಯಿಶ್ ಜಲ್ಲಿ.
ReplyDeleteಇಡ್ಲಿ ಆನಿ ಚಟ್ನಿ ಕಾಂಬಿನೇಶನ್ ಭಾರಿ ಲಾಯಕ್ ಜತ್ತ.
ಥ್ಯಾಂಕ್ಸ್