ಖಾರ ತುಕ್ಡಿ [ ಶಂಕರಪಾಳಿ]
ಗೋಧಿ ಹಿಟ್ಟು - ಒಂದು ಕಪ್ಪು
ಮೈದಾಹಿಟ್ಟು - ಒಂದು ಕಪ್ಪು
ಖಾರ ಪುಡಿ - ಒಂದು ಚಮಚ
ಸಕ್ಕರೆಪುಡಿ ಒಂದು ಸಣ್ಣ ಚಮಚ
ಪುಡಿ ಹಿಂಗು - ಒಂದು ಚಿಟಿಕೆಯಷ್ಟು
ಉಪ್ಪು - ಸ್ವಲ್ಪ
ತುಪ್ಪ - ಎರಡು ಚಮಚ
ಕಲೆಸಲು ನೀರು ಹಾಗು ಕರಿಯಲು ಎಣ್ಣೆ.
ಮಾಡುವ ವಿಧಾನ:
ಸ್ವಲ್ಪ ಬಿಸಿ ಮಾಡಿದ ತುಪ್ಪಕ್ಕೆ, ಉಪ್ಪು ಖಾರಪುಡಿ, ಹಿಂಗು ,ಸಕ್ಕರೆ ,ಗೋಧಿಹಿಟ್ಟು, ಮೈದಾಹಿಟ್ಟನ್ನು ಬೆರಸಿ, ಸ್ವಲ್ಪ ನೀರನ್ನು ಹಾಕಿ
ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು. ಆ ಹಿಟ್ಟಿನಿಂದ ಸಣ್ಣ -ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿ, ತುಕ್ಡಿ
ಚಮಚದಿಂದ ಗೆರೆಗಳ್ಳನ್ನು ಹಾಕಿ ಡೈಮಂಡ್ ಆಕಾರದ ತುಕಡಿಗಳನ್ನು ಕತ್ತರಿಸಿ ತೆಗೆದು, ಒಂದು ತಟ್ಟೆಯಲ್ಲಿ ಹರಡಬೇಕು.
ಕಾದ ಎಣ್ಣೆಯಲ್ಲಿ ತುಕ್ಡಿ ಗಳ್ಳನ್ನು[ಸಣ್ಣ ಉರಿಯಲ್ಲಿ] ಕರಿದು ತೆಗೆಯಬೇಕು.
No comments:
Post a Comment