ಬಟಾಣಿ ಕಾಳು ರವೆ ಉಪ್ಪಿಟ್ಟು
ಸಾಮಗ್ರಿಗಳು:
ಹುರಿದಿಟ್ಟ ಮೀಡಿಯಂ ರವೆ - ಒಂದು ಲೋಟ
ಹಸಿ ಬಟಾಣಿ - ಅರ್ದ ಕಪ್ಪು
ಟೊಮೇಟೊ - ಒಂದು [ಸಣ್ಣಗೆ ಹೆಚ್ಚಿಟಿದ್ದು]
ಹಸಿಮೆಣಸು - ಐದು [ಸಣ್ಣಗೆ ಹೆಚ್ಚಿಡಬೇಕು]
ಹಸಿ ಶುಂಟಿ - ಸಣ್ಣ ತುಂಡು [ ಸಣ್ಣಗೆ ಹೆಚ್ಚಬೇಕು]
ಸಾಸಿವೆ - ಅರ್ದ ಚಮಚ
ಕಡ್ಲೆ ಬೇಳೆ - ಅರ್ದ ಚಮಚ [ನೀರಿನಲ್ಲಿ ನೆನಸಿ ತೆಗೆದಿಡಬೇಕು]
ಉದ್ದಿನಬೇಳೆ - ಕಾಲು ಚಮಚ
ಕರಿಬೇವು - ಒಂದು ಗರಿ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಾಯಿತುರಿ - ಸ್ವಲ್ಪ
ಎಣ್ಣೆ - ಒಂದು ಸವಟು
ತುಪ್ಪ - ಒಂದು ಚಮಚ
ಉಪ್ಪು ಹಾಗು ಲಿಂಬೆ ರಸ.
ಮಾಡುವ ವಿಧಾನ:
ದಪ್ಪ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ/ತುಪ್ಪವನ್ನು ಹಾಕಿ, ಒಗ್ಗರಣೆ ಸಾಮಗ್ರಿಗಳ್ಳನ್ನು ಹಾಕಿ ಒಗ್ಗರಿಸಿ ಕೊಳ್ಳಬೇಕು. ನಂತರ ಅದರಲ್ಲಿ, ಹಸಿಮೆಣಸು, ಹಸಿ ಶುಂಟಿ, ಟೊಮೇಟೊ ಬಟಾಣಿ ಕಾಳುಗಳ್ಳನ್ನು ಹಾಕಿ
ಬಾಡಿಸಿಕೊಳ್ಳಬೇಕು.ಹುರಿದ ರವೆಯನ್ನು ಅದರಲ್ಲಿ ಸೇರಿಸಿ ಚನ್ನಾಗಿ ಕೈಯಾಡಿಸಬೇಕು.ರುಚಿಗೆ ಉಪ್ಪನ್ನು ಹಾಕಿ,ಜೊತೆಗೆ ಎರಡುವರೆ ಅಳತೆ ಕಾದ ನೀರನ್ನು ಹಾಕಿ, ಗಂಟು ಕಟ್ಟದಂತೆ ಚಮಚದಿಂದ ಮಿಕ್ಸ್ ಮಾಡಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ, ಧೀಡಿರಾಗಿ ತಯಾರಿಸಬಹುದಾದಂತಹ, ಬಟಾಣಿ ಕಾಳು ಉಪ್ಪಿಟ್ಟು ರೆಡಿ. ಸ್ವಲ್ಪ ಕಾಯಿತುರಿಯನ್ನು
ಕೊನೆಯಲ್ಲಿ ಹಾಕಿಕೊಳ್ಳಬೇಕು.
* ಹೆಚ್ಚಿಟ್ಟ ಕೊತ್ತಂಬರಿಸೊಪ್ಪನ್ನು ಮೇಲಿನಿಂದ ಉದುರಿಸಬೇಕು, ಬಡಿಸುವ ಮುಂಚೆ ಲಿಂಬೆ ರಸವನ್ನು ಸೇರಿಸಿಕೊಳ್ಳಬೇಕು.ಇದೇ ರೀತಿಯ ಒಗ್ಗರಣೆಯೊಂದಿಗೆ, ಅವ್ರೆ ಕಾಳು ಉಪ್ಪಿಟ್ಟನ್ನು ತಯಾರಿಸಬಹುದು. ಮಿಶ್ರ ತರಕಾರಿಗಳ್ಳನ್ನು ಹಾಕಿ ಪಾರ್ಟಿ ಉಪ್ಪಿಟ್ಟನ್ನು ತಯಾರಿಸಬಹುದು.
No comments:
Post a Comment