ಪಾಲಕ್ ಕಟ್ಲೆಟ್
ಪಾಲಕ್ ಸೊಪ್ಪು - ಎರಡು ಕಟ್ಟು
ಆಲೂಗಡ್ಡೆ - ನಾಲ್ಕು
ಜೀರಿಗೆ ಪುಡಿ - ಒಂದು ಚಮಚ
ಧನಿಯ ಪುಡಿ - ಒಂದು ಚಮಚ
ಗರಂ ಮಸಾಲ ಪುಡಿ - ಅರ್ದ ಚಮಚ
ಖಾರ ಪುಡಿ - ಒಂದು ಚಮಚ
ಕಾರ್ನ್ಹಿಟ್ಟು/ಮೈದಾಹಿಟ್ಟು - ಎರಡು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬ್ರೆಡ್ ಪುಡಿ - ಸ್ವಲ್ಪ
ಎಣ್ಣೆ - ಸ್ವಲ್ಪ.
ಮಾಡುವ ವಿಧಾನ:
ಆಲೂಗಡ್ಡೆ + ಪಾಲಕ್ ಸೊಪ್ಪನ್ನು ಬೇಯಿಸಿ, ತಣ್ಣಗಾದ
ಬಳಿಕ ಕೈಯಿಂದ ಚನ್ನಾಗಿ ಮಸೆದುಕೊಳ್ಳಬೇಕು.ನಂತರ ಆ ಹಿಟ್ಟಿಗೆ ಸ್ವಲ್ಪ ಉಪ್ಪು, ಖಾರಪುಡಿ, ಗರಂ ಮಸಾಲ ಪುಡಿ
ಜೀರಿಗೆ+ಧನಿಯ ಪುಡಿ ಸ್ವಲ್ಪ ಕೊರ್ನ್ ಹಿಟ್ಟನ್ನು ಬೆರಸಿ,
ಸಣ್ಣ-ಸಣ್ಣ ಉಂಡೆಗಳನ್ನು ಮಾಡಿ , ಸ್ವಲ್ಪ ಒತ್ತಿ ಚಪ್ಪಟ್ಟೆ ಮಾಡಿ [ಬೇಕಾದ ಆಕರದಲ್ಲಿ] ಬ್ರೆಡ್ ಪುಡಿಯಲ್ಲಿ ಹೊರಳಿಸಿ ಕಾದ ತವಾದ ಮೇಲೆ ಜೋಡಿಸಿಟ್ಟು
ಎಣ್ಣೆ ಹಾಕಿ ಎರಡು ಬದಿಯನ್ನು ಬೇಯಿಸಿ ತೆಗೆಯಬೇಕು.
* ರುಚಿ-ರುಚಿಯಾದ ಪಾಲಕ್ ಸೊಪ್ಪಿನ
ಕಟ್ಲೆಟನ್ನು ಚಟ್ನಿ/ ಸಾಸ್ ಜೊತೆಗೆ ಸವಿಯಬಹುದು.
No comments:
Post a Comment