ಪಾಲಕ್ ಸೊಪ್ಪಿನ ತಂಬ್ಳಿ
ಬೇಕಾಗುವ ಪದಾರ್ಥಗಳು:
ತೊಳೆದು ಸ್ವಚ್ಛ ಮಾಡಿಟ್ಟ ಪಾಲಕ್ ಸೊಪ್ಪು - ಎರಡು ಕಪ್ಪು
ಸಿಹಿ ಮೊಸರು - ಒಂದು ಕಪ್ಪು
ಕಾಯಿ ತುರಿ --ಅರ್ದ ಕಪ್ಪು
ಜೀರಿಗೆ - ಒಂದು ಚಮಚ
ಕಾಳುಮೆಣಸು - ಐದರಿಂದ ಆರು
ಒಣಮೆಣಸು - ಒಂದು
ತುಪ್ಪ - ಒಂದು ಚಮಚ
ಉಪ್ಪು - ಸ್ವಲ್ಪ.
೧. ಪಾಲಕ್ ಸೊಪ್ಪನ್ನು ಬೇಯಿಸಿಟ್ಟುಕೊಳ್ಳಬೇಕು.
೨. ಕಾಲು ಚಮಚ ತುಪ್ಪದಲ್ಲಿ, ಅರ್ದ ಚಮಚ ಜೀರಿಗೆ, ಕಾಳುಮೆಣಸನ್ನು ಹುರಿದಿಟ್ಟುಕೊಳ್ಳಬೇಕು.
೩. ಕಾಯಿತುರಿಯೊಂದಿಗೆ, ಹುರಿದಿಟ್ಟ ಜೀರಿಗೆ, ಮೆಣಸನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.ಕೊನೆಯಲ್ಲಿ ಮೊಸರನ್ನು
ಹಾಕಿಕೊಂಡು ಒಂದು ಸುತ್ತು ಮಿಕ್ಸಿ ಮಾಡಿಕೊಳ್ಳಬೇಕು.ಹದವಾಗಿ ಉಪ್ಪನ್ನು ಸೇರಿಸಿಕೊಳ್ಳಬೇಕು.
೪.ತುಪ್ಪದಲ್ಲಿ ಜೀರಿಗೆ, ಒಣಮೆಣಸು, ಒಗ್ಗರಣೆ ಮಾಡಿ ಹಾಕಬೇಕು.
No comments:
Post a Comment