[ಕ್ಯಾಬೇಜ ಸಾನ್ನ ಖೋಟ್ಟೋ]
ತಯಾರಿಸಲು ಬೇಕಾಗುವ ಪದಾರ್ಥಗಳು:
ಅಕ್ಕಿ - ಒಂದು ಕಪ್ [ಎರಡು ಗಂಟೆ ನೆನಸಿ, ನೀರನ್ನು ಬಸಿದು ತೆಗೆದಿಡಬೇಕು]ಕಾಯಿತುರಿ - ಒಂದು ಕಪ್
ಬ್ಯಾಡಗಿ ಮೆಣಸು - ಮೂರು
ಗುಂಟೂರ್ ಮೆಣಸು - ಮೂರು
ಹುಣಸೆ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು.
ಸಣ್ಣಗೆ ಹೆಚ್ಚಿದ ಎಲೆ ಕೋಸು - ಒಂದು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ - ಅರ್ದ ಕಪ್
ಮಾಡುವ ರೀತಿ:
ಮೊದಲು ಮಿಕ್ಸಿ ಯಲ್ಲಿ ಕಾಯಿತುರಿ, ಒಣಮೆಣಸು, ಹುಣಸೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಮಸಾಲೆ ನುಣ್ಣಗಾದ ಬಳಿಕಬಸಿದಿಟ್ಟ ಅಕ್ಕಿಯನ್ನು ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಹೀಗೆ ರುಬ್ಬಿದ ಮಿಶ್ರಣಕ್ಕೆ ಹೆಚ್ಚಿಟ್ಟ ಎಲೆ ಕೋಸು, ಈರುಳ್ಳಿ
ಉಪ್ಪನ್ನು ಹಾಕಿ, ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಬೇಕು.ಒಂದು ಕೂಕ್ಕರ್ ಪಾತ್ರೆ[CONTAINER]ಯಲ್ಲಿ ಎಣ್ಣೆ ಸವರಿ
ತಯಾರಿಸ್ಸಿಟ್ಟ ಹಿಟ್ಟನ್ನು ಹಾಕಿ, ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿದರೆ ಸಾಕು, ಕ್ಯಾಬೇಜ್ ಇಡ್ಲಿ ತಯಾರ್.
* ತಣಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬೇಕು.
* ಇದನ್ನು SNACK ITEM ಆಗಿಯೂ ತಿನ್ನಬಹುದು, ಇಲ್ಲವೇ ಊಟದ ಜೊತೆಗೆ ಪಲ್ಯದ ರೀತಿಯಲ್ಲೂ ತಿನ್ನಬಹುದು.
* ಬಡಿಸುವಾಗ ಮೇಲಿನಿಂದ ಕೊಬ್ಬರಿ ಎಣ್ಣೆಯನ್ನು ಹಾಕಿದರೆ , ರುಚಿ ಒಳ್ಳೆಯದಾಗಿರುತ್ತದೆ.
ಸಾನ್ನ ಕ್ಹೊಟೋ ಭಾರಿ ಚೆಂದ್ ದಿಸ್ತ ಅಸ್ಸ . ಪಳಯಿಲ್ ಕುಡ್ಲೆ ಖಾವ್ಯ ಮೊಣು ದಿಸ್ತ ಅಸ್ಸ.
ReplyDelete