ತಯಾರಿಸಲು ಬೇಕಾಗುವ ಪದಾರ್ಥಗಳು:
ಉದ್ದಿನಬೇಳೆ - ಒಂದು ಅಳತೆ
ಅಕ್ಕಿ - ಎರಡು ಅಳತೆ
ಉಪ್ಪು - ಸ್ವಲ್ಪ
ಕಾಯಿಸಲು ಎಣ್ಣೆ ಹಾಗು ಅಪ್ಪದ ಕಾವಲಿ.
ಮಾಡುವ ವಿಧಾನ:
ಉದ್ದಿನಬೇಳೆ + ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು. ಹೀಗೆ ನೆನೆದ ಅಕ್ಕಿ+ಉದ್ದನ್ನು ನುಣ್ಣಗೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. [ಹಿಟ್ಟು ಇಡ್ಲಿ ಹಿಟ್ಟಿ ಗಿಂತ ತುಸು ಗಟ್ಟಿಯಾಗಬೇಕು] ರುಬ್ಬಿದ ಹಿಟ್ಟಿಗೆ ಉಪ್ಪನ್ನು ಬೆರಸಿ ಸುಮಾರು ಎಂಟು ಗಂಟೆಗಳ ಕಾಲ ಮುಚ್ಚಿಡಬೇಕು. ನಂತರ, ಅಪ್ಪದ ಕಾವಲಿಯನ್ನು ಬಿಸಿ ಮಾಡಿ ಪ್ರತಿಯೊಂದು ಗುಳಿಯಲ್ಲೂ
ಎಣ್ಣೆ ಸವರಿ ಹಿಟ್ಟನ್ನು ಹಾಕಿ ಮುಚ್ಚಳವನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡು ಬದಿಯನ್ನು ಬೇಯಿಸಬೇಕು.[ನಾನ್ ಸ್ಟಿಕ್ ಕಾವಲಿ ಉಪಯೋಗಿಸಿದರೆ ಒಳ್ಳೆಯದು]
ಇದೇ ಹಿಟ್ಟಿಗೆ ಈರುಳ್ಳಿ,ಹಸಿಮೆಣಸು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಿ, ಅಪ್ಪವನ್ನು ತಯಾರಿಸಬಹುದು.
ಬೆಣ್ಣೆ , ಕೆಂಪು/ಕಾಯಿ ಚಟ್ನಿ ,ಸಾಂಬಾರ್ ರೊಂದಿಗೆ ಗುಳಿಯಪ್ಪ ತಿನ್ನಲು ಒಳ್ಳೆಯದಾಗುತ್ತದೆ.

No comments:
Post a Comment