BLOG FOLLOWERS

Saturday, November 19, 2011

ದಾಲ್ ಫ್ರೈ

ಮಾಡಲು ಏನೇನು ಬೇಕು..?
ತೊಗ್ರಿ ಬೇಳೆ  - ಒಂದು ಸಣ್ಣ ಕಪ್  
ಕಡ್ಲೆ ಬೇಳೆ      -  ಒಂದು ಸಣ್ಣ ಕಪ್ 
ಹೆಸ್ರು ಬೇಳೆ   -   ಒಂದು ಕಪ್ 
ಟೊಮೇಟೊ -  ಎರಡು 
ಈರುಳ್ಳಿ     -  ಎರಡು 
ಹಸಿಶುಂಟಿ  - ಸಣ್ಣ ತುಂಡು 
ಬೆಳ್ಳುಳ್ಳಿ     - ಐದು ಎಸಳು 
ಸಾಸಿವೆ - ಅರ್ದ ಚಮಚ 
ಮೆಂತ್ಯೆ  - ಅರ್ದ ಚಮಚ 
ಅರಿಶಿನ  - ಚಿಟಿಕೆಯಷ್ಟು 
ಕೆಂಪು ಮೆಣಸಿನ ಪುಡಿ  - ಒಂದು ಚಮಚ 
ಗರಂ ಮಸಾಲ ಪುಡಿ  -   ಒಂದು ಚಮಚ 
ಉಪ್ಪು  - ರುಚಿಗೆ 
ತುಪ್ಪ   -  ಮೂರು ಚಮಚ 
 ಒಂದು ಹೋಳು ಲಿಂಬೆ  ಹಾಗು ಕೊತ್ತಂಬರಿ ಸೊಪ್ಪು.

 ಮಾಡೋದು  ಹೇಗೆ..?

 ಮೊದಲು ಮೂರೂ ಬೇಳೆ ಗಳ್ಳನ್ನು  ಹದಿನೈದು  ನಿಮಿಷ ನೀರಿನಲ್ಲಿ ನೆನಸಬೇಕು. ನಂತರ ನೆಂದ ಬೇಳೆಗಳನ್ನು ಕುಕ್ಕರಲ್ಲಿ
ಎರಡು ಸೀಟಿ ತೆಗೆದು ಬೇಯಿಸಿಡಬೇಕು.ಕುಕ್ಕರ್ ತಣಿದ ಬಳಿಕ, ಒಗ್ಗರಣೆ ಕಡಾಯಿಯಲ್ಲಿ  ಒಂದು  ಚಮಚ ತುಪ್ಪವನ್ನು  ಬಿಸಿ ಮಾಡಿಕೊಂಡು,ಸಾಸಿವೆ    ಮೆಂತ್ಯೆ ಒಗ್ಗರಿಸಿ ಬೇಳೆ ಗೆ ಹಾಕಬೇಕು.ನಂತರ ಎರಡು ಚಮಚ  ತುಪ್ಪವನ್ನು ಬಿಸಿ ಮಾಡಿ, ಸಣ್ಣಗೆ ಹೆಚ್ಚಿಟ್ಟ ಬೆಳ್ಳುಳ್ಳಿ ,ಹಸಿ ಶುಂಟಿ  ಈರುಳ್ಳಿ  ಟೊಮೇಟೊ ವನ್ನು  ಚನ್ನಾಗಿ ಹುರಿದು ಬೇಳೆಗೆ ಹಾಕಬೇಕು. ಖಾರ ಪುಡಿ, ಗರಂ ಮಸಾಲ ಪುಡಿ, ಅರಿಶಿನ ಉಪ್ಪುಹಾಗು ಬೇಕಾದಲ್ಲಿ ಸ್ವಲ್ಪ ನೀರನ್ನು ಅರ್ದ ಬೆಂದ ಬೇಳೆಗೆ ಸೇರಿಸಿ,ಕುಕ್ಕರ್ ಲ್ಲಿ  ಒಂದು ಸೀಟಿ ತೆಗೆದು ಬೇಯಿಸಿದರೆ,ರುಚಿ ರುಚಿಯಾದ ದಾಲ್  ರೆಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ, ಬಡಿಸುವಾಗ ಸ್ವಲ್ಪ ಲಿಂಬೆ ರಸವನ್ನು ಹಿಂಡಬೇಕು.


 * ಚಪಾತಿ/ ಪರಾತಾ/ಅನ್ನದೊಟ್ಟಿಗೆ  ಸವಿಯಲು  ಒಳ್ಳೆಯದಾಗುತ್ತದೆ.



 ಸಾಧಿಸುವ  ಬಗ್ಗೆ ಯೋಚಿಸುವುದು ಸುಲಭ. ಆದರೆ ಯೋಚಿಸಿದ್ದನ್ನು ಸಾಧಿಸುವುದು ಕಷ್ಟ. ಹಾಗೆಂದು ಯೋಚಿಸುವುದ್ದನ್ನೇ ಬಿಡಬಾರದು, ಹಾಗೆಯೇ ಸಾಧಿಸುವ ಛಲವನ್ನೂ ....

No comments:

Post a Comment