ದಾಳಿಂಬೆ ಹಣ್ಣು / POMEGRANATE FRUIT
ಈ ದಾಳಿಂಬೆ ಹಣ್ಣನ್ನು ರುಚಿಯಾಗಿ ತಿನ್ನೋದಕ್ಕಿಂತ ಆರೋಗ್ಯದ ಹಿತಕ್ಕಾಗಿ ತಿನ್ನೋ ಜನರೇ, ಹೆಚ್ಚು. ಯಾಕಂದ್ರೆ ಈ
ಹಣ್ಣಲ್ಲಿ ಇರುವ ಆರೋಗ್ಯದ ಗುಟ್ಟು ಅಷ್ಟಿಷ್ಟಲ್ಲ. ಅದು ಬಿಡಿಸಿಕೊಂಡು ತಿನ್ನ ಬೇಕಲ್ಲಾ ಅನ್ನೋ ಒಂದೇ ಕಾರಣಕ್ಕೆ, ದಾಳಿಂಬೆ ಅಂದ್ರೆ ಒಂಥರಾ ನೋಡೋ ಜನರೇ ಹೆಚ್ಚು. ಸಾಕಷ್ಟು ಪೋಷಕಾಂಶಗಳ್ಳನ್ನು ಹೊಂದಿರುವ ಈ ಹಣ್ಣು ಪ್ರಕ್ರತಿ ನಮಗೊದೊಗಿಸುರುವ NATURAL TONIC ಅಂತನೇ ಹೇಳಬಹುದು.
ಈ ಹಣ್ಣಿನಿಂದ ದೊರಕುವ ಸಾಮಾನ್ಯ ಲಾಭಗಳು:
1. ಅತೀಸಾರ ಭೇದಿಯಿಂದ ನರಳುವ ರೋಗಿಗಳು,ಇದರ ರಸವನ್ನು ಸೇವಿಸುವುದರಿಂದ, ಬೇಧಿಯನ್ನು ಹತೋಟಿಗೆ
ತರಬಹುದು.
2. ಹೊಟ್ಟೆಗೆ ಸಂಭಂದದ ಕಾಯಿಲೆಗಳಿಗೆ, ಈ ಹಣ್ಣಿನ ರಸ ವನ್ನು ಸೇವಿಸುವುದರಿಂದ, ಕಾಯಿಲೆಗಳ್ಳನ್ನು ನಿಯತ್ರಿಸಬಹುದು.
3. ದಾಳಿಂಬೆ ಹಣ್ಣಿನಲ್ಲಿ ರುವ ವಿಟಾಮಿನ್ ಗಳಾದ 'C', 'A' 'K', ಗಳು ದೇಹದಲ್ಲಿ ಸೇರಿ,ದೇಹವನ್ನು ಬಲಗೊಳಿಸುತ್ತದೆ.
4. ಈ ಹಣ್ಣಿನಲ್ಲಿರುವ ಫೋಲಿಕ್ ಅಮ್ಲದಿಂದ, ದೇಹದಲ್ಲಿ ಕಬ್ಬಿಣ ಅಂಶ ಹೆಚಾಗುತ್ತದೆ.
5.ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿದ್ದರೂ, ಇದರ ರಸದ ಸೇವನೆಯಿಂದ, ನಿಯಂತ್ರಿಸಬಹುದು.
6. ಈ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿಟ್ಟರೆ, ಬೇಕಾದಾಗ ಕಡಿ/ ಸಾರನ್ನು ಮಾಡಿಕೊಳ್ಳಬಹುದು.
7. ಈ ಹಣ್ಣಿನ ಗಿಡದ,ಕುಡಿ ಎಲೆಗಳಿಂದ ರುಚಿಯಾದ ತಂಬಳಿ ಯನ್ನು ತಯಾರಿಸಿಕೊಳ್ಳಬಹುದು.
ಕೊನೆಯದಾಗಿ, ಸಂತೋಷದ ಸಂಗತಿಯೆಂದರೆ ಇತ್ತೀಚಿನ ಸಂಶೋಧನೆಯ ಪ್ರಕಾರ, ಮಹಾಮಾರಿಯಾಗಿ ಹರಡುತಿರುವ
ಕ್ಯಾನ್ಸರ್ [ಸ್ತನ, ಚರ್ಮ ] ರೋಗವನ್ನು ಕೂಡ ಈ ರಸದ ಸೇವನೆಯಿಂದ ನಿಯಂತ್ರಣಕ್ಕೆ ತರಬಹವುದಂತೆ.
ಒಟ್ಟಿನಲ್ಲಿ ' ದಾಳಿಂಬೆ ಹಣ್ಣು ' ಪ್ರಕ್ರತಿ ನಮಗೆ ನೀಡಿದ ದಿವ್ಯೋಷಧ ವೆಂದೇ ಹೇಳಬಹುದು.
No comments:
Post a Comment